ಪ್ರಯಾಗರಾಜ್‌ : ಕುಂಭಮೇಳದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ

| Published : Jan 19 2025, 02:17 AM IST / Updated: Jan 19 2025, 04:44 AM IST

ಪ್ರಯಾಗರಾಜ್‌ : ಕುಂಭಮೇಳದಲ್ಲಿ ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ
Share this Article
  • FB
  • TW
  • Linkdin
  • Email

ಸಾರಾಂಶ

ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಶನಿವಾರ ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಪ್ರಯಾಗರಾಜ್‌ :  ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಶನಿವಾರ ಕುಂಭಮೇಳ ನಡೆಯುತ್ತಿರುವ ಉತ್ತರಪ್ರದೇಶದ ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು.

ಕುಂಭಮೇಳ ಹಿನ್ನೆಲೆ: ಜ.22ಕ್ಕೆ ಪ್ರಯಾಗದಲ್ಲಿ ಯೋಗಿ ಸಂಪುಟ ಸಭೆ

ಲಖನೌ: ಮಹಾಕುಂಭ ಮೇಳ ನಡೆಯುತ್ತಿರುವ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್‌ ಅವರ ಸರ್ಕಾರವು ಜ.22ರಂದು ಸಂಪುಟ ಸಭೆ ನಡೆಸಲಿದೆ. ಈ ಸಭೆಗೂ ಮುನ್ನ ಕುಂಭ ಮೇಳದಲ್ಲಿ ಭಾಗಿಯಾಗಿ ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಸಭೆಯಲ್ಲಿ ಪ್ರಯಾಗಕ್ಕೆ ಸಂಬಂಧಿಸಿದಂತೆ ಮೂಲಸೌಕರ್ಯ, ಅಭಿವೃದ್ಧಿ ಕಾಮಗಾರಿಗಳು ಕುರಿತು ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ಇಲ್ಲಿ ಜ.13ರಿಂದ ಆರಂಭವಾಗಿರುವ ಕುಂಭ ಮೇಳ ಫೆ.26ರವರೆಗೆ ನಡೆಯಲಿದೆ.

ಬಾಂಗ್ಲಾದೇಶ ತೊರೆದಿದ್ದಕ್ಕೆ ನನ್ನ ಜೀವ ಉಳೀತು: ಶೇಖ್‌ ಹಸೀನಾ

ನವದೆಹಲಿ: ಬಾಂಗ್ಲಾದೇಶದಲ್ಲಿ ಅವಾಮಿ ಲೀಗ್‌ ಪಕ್ಷದ ಸರ್ಕಾರದ ಪತನಕ್ಕೆ ಕಾರಣವಾದ ಮೀಸಲಾತಿ ವಿರೋಧಿ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ದೇಶ ತೊರೆದಿದ್ದರಿಂದಲೇ ತಾವು ಹಾಗೂ ಸಹೋದರಿ ರೆಹಾನಾ 20ರಿಂದ 25 ನಿಮಿಷದಲ್ಲಿ ಪ್ರಾಣಾಪಾಯದಿಂದ ಪಾರಾದೆವು ಎಂದು ಮಾಜಿ ಪ್ರಧಾನಿ ಶೇಖ್‌ ಹಸೀನಾ ಹೇಳಿದ್ದಾರೆ.

ಅವಾಮಿ ಲೀಗ್‌ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಧ್ವನಿ ಸಂದೇಶದಲ್ಲಿ ಹಸೀನಾ, ‘2000ದಲ್ಲಿ ನಡೆಸಲಾಗಿದ್ದ ಕೋಟಾಲಿಪಾರಾದ ಬಾಂಬ್‌ ದಾಳಿ, 2024ರ ಆ.21 ಹಾಗೂ ಆ.5ರ ದಾಳಿಯಿಂದ ಪಾರಾಗಿದ್ದು ಅಲ್ಲಾಹ್‌ನ ಕೃಪೆಯಿಂದ. ಇಲ್ಲದಿದ್ದರೆ ಈ ಬಾರಿ ಬಚಾವಾಗುತ್ತಿರಲಿಲ್ಲ’ ಎಂದಿದ್ದಾರೆ. ಜೊತೆಗೆ, ರಾಜಕೀಯ ವಿರೋಧಿಗಳು ತಮ್ಮನ್ನು ಕೊಲ್ಲಲು ಸಂಚು ರೂಪಿಸಿದ್ದರು ಎಂದೂ ಆರೋಪಿಸಿದ್ದಾರೆ.ದಂಗೆಗೆ ಬೆದರಿ ಆ.5ರಂದು ಭಾರತಕ್ಕೆ ಪಲಾಯನ ಮಾಡಿದ್ದ ಹಸೀನಾ, ‘ನಾನು ನನ್ನ ದೇಶ, ಮನೆ ಹಾಗೂ ಎಲ್ಲವನ್ನೂ ಕಳೆದುಕೊಂಡು ಸಂಕಟಪಡುತ್ತಿದ್ದೇನೆ’ ಎಂದು ದುಃಖ ತೋಡಿಕೊಂಡಿದ್ದಾರೆ.

ಟಾಟಾ ಸಫಾರಿಯಲ್ಲಿ ಬಂಡೀಪುರ ಆವೃತ್ತಿ!

ನವದೆಹಲಿ: ಭಾರತದಲ್ಲಿ ಭಾರಿ ಜನಮನ್ನಣೆ ಗಳಿಸಿದ್ದ ಟಾಟಾ ಮೋಟರ್ಸ್‌ನ ಸಫಾರಿ ಕಾರು ಈಗ ಹೊಸ ಅವತಾರದಲ್ಲಿ ಅನಾವರಣಗೊಂಡಿದೆ. ಕರ್ನಾಟಕದ ವಿಶ್ವವಿಖ್ಯಾತ ಬಂಡೀಪುರ ಸಫಾರಿ ಹೆಸರಿನಲ್ಲಿ ಬಿಡುಗಡೆಯಾಗಿದೆ. ದೆಹಲಿಯಲ್ಲಿ ನಡೆದ ಆಟೋ ಎಕ್ಸ್‌ಪೋದಲ್ಲಿ ಕಾರು ಅನಾವರಣಗೊಳಿಸಲಾಗಿದೆ. ಏಷ್ಯಾ ಖಂಡದಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಒಳಗೊಂಡಿರುವ ಬಂಡೀಪುರದ ಹೆಸರು ಇಡಲಾಗಿದೆ. ಮುಂಬದಿಯ ಎರಡೂ ಚಕ್ರದ ಮೇಲಿನ ಸ್ಥಳದಲ್ಲಿ ಆನೆ ವಿನ್ಯಾಸ ಒಳಗೊಂಡಿದೆ. ಇದಿಷ್ಟೇ ಅಲ್ಲದೇ ಹೆಡ್‌ರೆಸ್ಟ್‌ನಲ್ಲಿಯೂ ಆನೆ ಚಿತ್ರ ಮುದ್ರಿತವಾಗಿದೆ. ಈ ಹಿಂದೆಯೂ ಸಹ ಟಾಟಾ ಕಂಪನಿ ಖಾಜಿರಂಗ ಸಫಾರಿ ಆವೃತ್ತಿಯಲ್ಲಿ ಕಾರು ಬಿಡುಗಡೆಗೊಳಿಸಿತ್ತು.