ಸಾರಾಂಶ
‘ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಬಿಸಾಡುವ ಆಶಯವನ್ನು ಹೊಂದಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷೆಗಿಂತ ಕಳಪೆ ಪ್ರದರ್ಶನದಿಂದಾಗಿ ಅವರು ಅದರ ಎದುರು ತಲೆಬಾಗಿದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪಟನಾ: ‘ಪ್ರಧಾನಿ ನರೇಂದ್ರ ಮೋದಿ ಅವರು ಸಂವಿಧಾನವನ್ನು ಬಿಸಾಡುವ ಆಶಯವನ್ನು ಹೊಂದಿದ್ದರು. ಆದರೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ನಿರೀಕ್ಷೆಗಿಂತ ಕಳಪೆ ಪ್ರದರ್ಶನದಿಂದಾಗಿ ಅವರು ಅದರ ಎದುರು ತಲೆಬಾಗಿದರು’ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಶನಿವಾರ ಇಲ್ಲಿ ನಡೆದ ಸಂವಿಧಾನ ಸುರಕ್ಷಾ ಕಾರ್ಯಕ್ರಮದಲ್ಲಿ ಪ್ರಧಾನಿಯವರನ್ನು ಅಣಕ ಮಾಡುತ್ತಾ ಸಂವಿಧಾನವನ್ನು ತಮ್ಮ ತಲೆಯ ಸಮೀಪ ಹಿಡಿದ ರಾಹುಲ್, ‘3ನೇ ಬಾರಿ ಗೆದ್ದು ಸಂಸತ್ತನ್ನು ಪ್ರವೇಶಿಸಿದಾಗ ಮೋದಿ ಹೀಗೆ ಮಾಡಿದರು. ಅವರು ಸಂವಿಧಾನವನ್ನು ಕಿತ್ತೊಗೆಯಬೇಕೆಂದಿದ್ದರು. ಆದರೆ ನಮ್ಮ ಸಂಘಟಿತ ಹೋರಾಟದಿಂದಾಗಿ 400ಕ್ಕೂ ಅಧಿಕ ಸೀಟು ಗೆದ್ದು ಆ ಬಗ್ಗೆ ಬೀಗುವುದನ್ನು ಬಿಡಬೇಕಾಯಿತು’ ಎಂದರು.ಬಿಜೆಪಿ ಪಕ್ಷ 543ರ ಪೈಕಿ 400 ಸೀಟು ಗೆದ್ದರೆ ಅವರು ಸಂವಿಧಾನವನ್ನು ಬದಲಿಸುತ್ತಾರೆ ಎಂದು ಲೋಕಸಭೆ ವೇಳೆ ಕಾಂಗ್ರೆಸ್ ಪ್ರಚಾರ ಮಾಡಿತ್ತು.