ನಾಪಪತ್ರ ಸಲ್ಲಿಕೆಗೆ 3 ದಿನ ಬಾಕಿ: ರಾಯ್‌ಬರೇಲಿ, ಅಮೇಠಿ ಕೈ ಅಭ್ಯರ್ಥಿ ರಹಸ್ಯ

| Published : May 01 2024, 01:20 AM IST

ನಾಪಪತ್ರ ಸಲ್ಲಿಕೆಗೆ 3 ದಿನ ಬಾಕಿ: ರಾಯ್‌ಬರೇಲಿ, ಅಮೇಠಿ ಕೈ ಅಭ್ಯರ್ಥಿ ರಹಸ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಕೇವಲ 3 ದಿನ ಬಾಕಿ ಉಳಿದಿದ್ದು, ಇನ್ನೂ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ.

ನವದೆಹಲಿ: ಉತ್ತರಪ್ರದೇಶದ ರಾಯ್‌ಬರೇಲಿ ಮತ್ತು ಅಮೇಠಿ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಲು ಕೇವಲ 3 ದಿನ ಬಾಕಿ ಉಳಿದಿದ್ದು, ಇನ್ನೂ ತನ್ನ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡುವಲ್ಲಿ ಕಾಂಗ್ರೆಸ್‌ ವಿಫಲವಾಗಿದೆ. ರಾಯ್‌ಬರೇಲಿಯಿಂದ ಪ್ರಿಯಾಂಕಾ ಕಣಕ್ಕಿಳಿಯುವ ಸಾಧ್ಯತೆ ಇದೆಯಾದರೂ ಆ ಕುರಿತು ಇನ್ನೂ ಘೋಷಣೆ ಹೊರಬಿದ್ದಿಲ್ಲ. ಇನ್ನು ಕಳೆದ ಬಾರಿ ಸೋತಿದ್ದ ಅಮೇಠಿಯಿಂದ ಕಣಕ್ಕೆ ಇಳಿಯುವ ಬಗ್ಗೆ ರಾಹುಲ್‌ ಇನ್ನೂ ಅಂತಿಮ ನಿರ್ಧಾರ ಮಾಡಿಲ್ಲ ಎನ್ನಲಾಗಿದೆ. ಹೀಗಾಗಿ ಎರಡೂ ಕ್ಷೇತ್ರಗಳಿಗೆ ಪಕ್ಷ ಅಭ್ಯರ್ಥಿಗಳ ಹೆಸರು ಘೋಷಣೆಯಿಂದ ದೂರ ಉಳಿದಿದೆ.

ರಾಯ್‌ಬರೇಲಿ ಪ್ರತಿನಿಧಿಸುತ್ತಿದ್ದ ಸೋನಿಯಾ ಈ ಬಾರಿ ರಾಜಸ್ಥಾನದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ಕಾರಣ ಆ ಸ್ಥಾನ ತೆರವಾಗಿದೆ. ಇನ್ನು ರಾಹುಲ್‌ ಕಳೆದ ಬಾರಿ ತಾವು ಗೆದಿದ್ದ ವಯನಾಡಿನಿಂದ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ.