ಸಾರಾಂಶ
ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಕುಡಿದು 56 ಜನರು ಸಾವನ್ನಪ್ಪಲು, ಜನರು ಮಿತಿ ಮೀರಿ ಕುಡಿದಿದ್ದು ಮತ್ತು ಅವರ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ನಾಯಕ, ನಟ ಕಮಲ್‌ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.
ಕಲ್ಲಕುರಿಚಿ: ತಮಿಳುನಾಡಿನ ಕಲ್ಲಕುರಿಚಿ ಜಿಲ್ಲೆಯಲ್ಲಿ ಕಳ್ಳಭಟ್ಟಿ ಕುಡಿದು 56 ಜನರು ಸಾವನ್ನಪ್ಪಲು, ಜನರು ಮಿತಿ ಮೀರಿ ಕುಡಿದಿದ್ದು ಮತ್ತು ಅವರ ನಿರ್ಲಕ್ಷ್ಯವೇ ಕಾರಣ ಎಂದು ಮಕ್ಕಳ್ ನೀಧಿ ಮಯ್ಯಂ ಪಕ್ಷದ ನಾಯಕ, ನಟ ಕಮಲ್‌ಹಾಸನ್ ಪ್ರತಿಕ್ರಿಯೆ ನೀಡಿದ್ದಾರೆ.
ಘಟನೆಯಲ್ಲಿ ಮಡಿದವರ ಕುಟುಂಬ ಸದಸ್ಯರನ್ನು ಸಂತೈಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕಮಲ್, ಘಟನೆಯಲ್ಲಿ ಮಡಿದವರ ಬಗ್ಗೆ ನನಗೆ ಅನುಕಂಪ ಇಲ್ಲ ಎಂದಲ್ಲ.
ಆದರೆ ಈ ಘಟನೆಗೆ ನಿರ್ಲಕ್ಷ್ಯ ಕಾರಣ. ರಾಜ್ಯದಲ್ಲಿ ಎಲ್ಲೆಡೆ ಅಗತ್ಯ ಪ್ರಮಾಣದಲ್ಲಿ ಮದ್ಯ ಲಭ್ಯವಿದೆ. ಹೀಗಿದ್ದೂ ಕಳ್ಳಬಟ್ಟಿ ಕುಡಿಯುವ ಅಗತ್ಯವೇನಿತ್ತು. ಕುಡಿಯವುದಕ್ಕೆ ಬೇಡ ಎನ್ನಲ್ಲ. ಆದರೆ ಅದು ಮಿತಿಯಲ್ಲಿರಬೇಕು. ಇಲ್ಲಿ ಜನತೆ ಮೀರಿ ಕುಡಿದಿದ್ದೇ ದುರ್ಘಟನೆಗೆ ಕಾರಣ ಎಂದು ಹೇಳಿದ್ದಾರೆ.