ಲಾಲು ಪತ್ನಿ ರಾಬ್ಡೀ ರೀತಿ ಸಿಎಂ ಪಟ್ಟ ಏರಲು ಕೇಜ್ರಿ ಪತ್ನಿ ಸುನಿತಾ ಯತ್ನ: ಪುರಿ

| Published : Mar 30 2024, 12:56 AM IST

ಲಾಲು ಪತ್ನಿ ರಾಬ್ಡೀ ರೀತಿ ಸಿಎಂ ಪಟ್ಟ ಏರಲು ಕೇಜ್ರಿ ಪತ್ನಿ ಸುನಿತಾ ಯತ್ನ: ಪುರಿ
Share this Article
  • FB
  • TW
  • Linkdin
  • Email

ಸಾರಾಂಶ

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಬಿಹಾರದ ಮಾಜಿ ಸಿಎಂ ರಾಬ್ಡೀ ದೇವಿ ರೀತಿ ತಮ್ಮ ಪತಿ ಹುದ್ದೆ ಅಲಂಕರಿಸಲು ಪ್ರಯತ್ನ ನಡೆಸುತ್ತಿದ್ದಾರೆ.

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಬಿಹಾರದ ಮಾಜಿ ಸಿಎಂ ರಾಬ್ಡೀ ದೇವಿ ರೀತಿ ತಮ್ಮ ಪತಿ ಹುದ್ದೆ ಅಲಂಕರಿಸಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಹೇಳಿದರು. ಬಿಜೆಪಿಯ ಚುನಾವಣಾ ಕಚೇರಿ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸುನೀತಾ ಕೇಜ್ರಿವಾಲ್ ಬಿಹಾರದಲ್ಲಿ ಲಾಲು ಪ್ರಸಾದ್ ಯಾದವ ಪತ್ನಿ ರಾಬ್ಡೀ ದೇವಿ ರೀತಿ ಸಿಎಂ ಹುದ್ದೆ ಏರಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಿದರು. ಕೇಜ್ರಿವಾಲ್‌ ಬಂಧನದ ಬಳಿಕ ಸತತವಾಗಿ ಅವರ ಪರವಾಗಿ ಮತ್ತು ದೆಹಲಿ ಸರ್ಕಾರದ ಪರವಾಗಿ ಸುನೀತಾ ಹೇಳಿಕೆ ಬಿಡುಗಡೆ ಮಾಡುತ್ತಿರುವ ಮತ್ತು ಪತ್ರಿಕಾಗೋಷ್ಠಿ ನಡೆಸುತ್ತಿರುವ ಬೆನ್ನಲ್ಲೇ ಪುರಿ ಈ ಹೇಳಿಕೆ ನೀಡಿದ್ದಾರೆ. 1997ರಲ್ಲಿ ಮೇವು ಹಗರಣ ಸಂಬಂಧ ಅಂದಿನ ಬಿಹಾರ ಮುಖ್ಯಮಂತ್ರಿ ಲಾಲುಗೆ ಸಮನ್ಸ್‌ ನೀಡಿದ ಬೆನ್ನಲ್ಲೇ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಬಳಿಕ ರಾಬ್ಡೀ ದೇವಿ ಮುಖ್ಯಮಂತ್ರಿಯಾಗಿದ್ದರು.