ಸಾರಾಂಶ
ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಗೆ ಕಾರಣವಾದ ಯುಪಿಐ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿದ್ದು ಸೆ.15ರಿಂದಲೇ ಈ ಬದಲಾವಣೆಗಳು ಜಾರಿಗೆ ಬಂದಿದೆ.
ವ್ಯಕ್ತಿಯಿಂದ ವ್ಯಕ್ತಿಗೆ ಕಳಿಸುವ ಮೊತ್ತದ ಮಿತಿ ಯಥಾಸ್ಥಿತಿ
ನವದೆಹಲಿ: ಡಿಜಿಟಲ್ ಪಾವತಿಯಲ್ಲಿ ಕ್ರಾಂತಿಗೆ ಕಾರಣವಾದ ಯುಪಿಐ ನಿಯಮಗಳಲ್ಲಿ ಸರ್ಕಾರ ಕೆಲ ಬದಲಾವಣೆ ಮಾಡಿದ್ದು ಸೆ.15ರಿಂದಲೇ ಈ ಬದಲಾವಣೆಗಳು ಜಾರಿಗೆ ಬಂದಿದೆ.
ಬದಲಾವಣೆ ಅನ್ವಯ, ಸಾಲ, ಇಎಂಐ, ಬಂಡವಾಳ ಮಾರುಕಟ್ಟೆ ಹೂಡಿಕೆ, ವಿಮಾ ಕಂತುಗಳ ಪಾವತಿಯ ದೈನಂದಿನ ಮಿತಿಯನ್ನು ದಿನಕ್ಕೆ 10 ಲಕ್ಷ ರು.ಗೆ ಏರಿಸಲಾಗಿದೆ. ಒಂದು ಬಾರಿಗೆ 5 ಲಕ್ಷ ರು. ಮೊತ್ತದ ವಹಿವಾಟು ನಡೆಸಬಹುದು. ಉಳಿದಂತೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯನ್ನು ಒಂದು ಬಾರಿಗೆ 5 ಲಕ್ಷ ರು.ನಂತೆ ದಿನಕ್ಕೆ ಗರಿಷ್ಠ 6 ಲಕ್ಷ ರು. ನಿಗದಿಪಡಿಸಲಾಗಿದೆ. ವ್ಯಾಪಾರಿಗಳಿಗೆ ಇನ್ನು ಒಮ್ಮೆಗೆ 10 ಲಕ್ಷ ರು.ವರೆಗೆ ಪಾವತಿಸಬಹುದು. ಆದರೆ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಕಳಿಸಬಹುದಾದ ಮೊತ್ತದ ಮಿತಿಯಲ್ಲಿ ಯಾವುದೇ ಬದಲಾವಣೆಯಾಗದೆ ಮೊದಲಿನಂತೆ ದಿನಕ್ಕೆ 1 ಲಕ್ಷ ರು.ನಲ್ಲೇ ಮುಂದುವರೆಯಲಿದೆ. ಉಪಯೋಗವೇನು?:ಈ ಬದಲಾವಣೆಯಿಂದ, ವಿಮೆ ಪಾವತಿಯಿಂದ ಹಿಡಿದು ಹೂಡಿಕೆಯ ವರೆಗೆ ಎಲ್ಲಾ ವ್ಯವಹಾರಗಳಿಗೂ ನೆಟ್‌ಬ್ಯಾಂಕಿಂಗ್ ಬದಲು ಯುಪಿಐ ಬಳಸಬಹುದು. ಹೀಗೆ ಮಾಡುವಾಗ ದೊಡ್ಡ ಮೊತ್ತವನ್ನು ಸಣ್ಣಸಣ್ಣ ಕಂತುಗಳಲ್ಲಿ ಪಾವತಿಸುವ ಬದಲು, ಒಮ್ಮೆಲೆ 5ರಿಂದ 10 ಲಕ್ಷ ರು. ವರೆಗಿನ ವ್ಯವಹಾರ ಮಾಡಬಹುದು. ಜತೆಗೆ ಯುಪಿಐ ಬಳಕೆಯನ್ನೂ ಇದು ವ್ಯಾಪಕವಾಗಿ ಹೆಚ್ಚಿಸಲಿದೆ.