ಬಂಗಾಳದ ಹಿಂದಿ ವಿರೋಧಿ ಪ್ರತಿಭಟನೆಯಲ್ಲಿ ಕುವೆಂಪು

| Published : Sep 15 2025, 01:01 AM IST

ಸಾರಾಂಶ

ಕೇಂದ್ರ ಸರ್ಕಾರದ ಹಿಂದಿ ಹೀರಿಕೆ ಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೆ, ಹಿಂದಿ ಭಾಷೆಯ ಬಗ್ಗೆ ಕನ್ನಡದ ಕವಿ ಕುವೆಂಪು ಅವರ ನಿಲುವುಗಳ ಬಗ್ಗೆಯೂ ಭಾಷಣಕಾರರು ಮಾತನಾಡಿದರು.

ಪ್ರಾದೇಶಿಕ ಭಾಷೆ ಕುರಿತಾದ ಕುವೆಂವು ನಿಲುವುಗಳ ಬಗ್ಗೆಯೂ ಪ್ರಸ್ತಾಪ

ಕೋಲ್ಕತಾ: ಕೇಂದ್ರ ಸರ್ಕಾರದ ಹಿಂದಿ ಹೀರಿಕೆ ಹಾಗೂ ಅದು ಆಯೋಜಿಸಿದ ಹಿಂದಿ ದಿವಸವನ್ನು ವಿರೋಧಿಸಿ ಬಂಗಾಳಿ ಪರ ಸಂಸ್ಥೆಯಾದ ಬಂಗಾಳ ಪೊಖ್ಖೊ ಪ್ರತಿಭಟನೆಯನ್ನು ಆಯೋಜಿಸಿದ್ದು, ಈ ವೇಳೆ ರಾಷ್ಟ್ರಕವಿ ಕುವೆಂಪು ಅವರ ಭಾವಚಿತ್ರವನ್ನು ಪ್ರದರ್ಶಿಸಲಾಯಿತು. ಅಲ್ಲದೆ, ಹಿಂದಿ ಭಾಷೆಯ ಬಗ್ಗೆ ಕನ್ನಡದ ಕವಿ ಕುವೆಂಪು ಅವರ ನಿಲುವುಗಳ ಬಗ್ಗೆಯೂ ಭಾಷಣಕಾರರು ಮಾತನಾಡಿದರು. ಸ್ಥಳೀಯ ಭಾಷೆಗಳ ಜಾಗದಲ್ಲಿ ಹಿಂದಿ ಹೇರಿಕೆ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನಾ ರ್‍ಯಾಲಿ ನಡೆದಿದ್ದು, ಬಂಗಾಳಿ ಸೇರಿದಂತೆ ಅನ್ಯ ಹಿಂದಿಯೇತರ ಭಾಷೆಗಳಿರುವ ಫಲಕಗಳು, ಕುವೆಂಪು, ತಮಿಳುನಾಡಿನ ಮಾಜಿ ಸಿಎಂ ಎಂ.ಕರುಣಾನಿಧಿಯಂತಹ ದಿಗ್ಗಜರ ಫೋಟೋಗಳನ್ನು ಪ್ರದರ್ಶಿಸಲಾಯಿತು.

ಈ ವೇಳೆ, ಹಿಂದಿಯಲ್ಲಿ ಲಭ್ಯವಿರುವ ಕೇಂದ್ರ ಸರ್ಕಾರದ ಎಲ್ಲಾ ಪರೀಕ್ಷೆಗಳು ಮತ್ತು ವೆಬ್‌ಸೈಟ್‌ಗಳು ಸಂವಿಧಾನದಲ್ಲಿ ಅಧಿಕೃತವಾಗಿ ಗುರುತಿಸಲಾಗಿರುವ ಎಲ್ಲಾ ಭಾಷೆಗಳಲ್ಲೂ ದೊರೆಯಬೇಕು ಎಂದು ಆಗ್ರಹಿಸಲಾಯಿತು.