ಸಾರಾಂಶ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಆಪ್ತರಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಾರೂ ಆಪ್ತರಿಲ್ಲ ಎಂದು ಕೇಂದ್ರದ ಮಾಜಿ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.
ನಟಿ ಸೋಹಾ ಅಲಿ ಖಾನ್ ಅವರೊಂದಿಗಿನ ಸಂದರ್ಶನದಲ್ಲಿ ಮಾತನಾಡಿದ ಸ್ಮೃತಿ, ‘ಮೋದಿಗೆ ಯಾರೂ ಆಪ್ತರಿಲ್ಲ. ಅವರೊಂದಿಗೆ ನನಗೆ ನಿಕಟ ಸಂಬಂಧವಿದೆ ಎಂದು ಯಾರಾದರೂ ಬಂದು ಹೇಳಿದರೆ, ಒಂದೋ ಅವರಿಗೆ ಮೋದಿಯವರ ಬಗ್ಗೆ ಗೊತ್ತಿಲ್ಲ. ಅಥವಾ ಅವರು ಸುಳ್ಳು ಹೇಳುತ್ತಿದ್ದಾರೆ ಎಂದರ್ಥ’ ಎಂದು ಹೇಳಿದ್ದಾರೆ. ಜತೆಗೆ, ‘ಪ್ರಧಾನಿಯವರ ಆಪ್ತವಲಯದಲ್ಲಿ ಇರುವವರು ಯಾವತ್ತೂ ಮಾಧ್ಯಮದಲ್ಲಿ ಅಥವಾ ಮುನ್ನೆಲೆಗೆ ಬರುವುದಿಲ್ಲ’ ಎಂದೂ ಸ್ಮೃತಿ ತಿಳಿಸಿದ್ದಾರೆ.ಇದಕ್ಕೆ ಕಾರಣವನ್ನೂ ಹೇಳಿರುವ ಅವರು, ‘ಪ್ರಧಾನಿ ಮೋದಿ ಅವರು ದೇಶಸೇವೆಯ ದೊಡ್ಡ ಉದ್ದೇಶವನ್ನಿಟ್ಟುಕೊಂಡು ಬಂದವರು. ಹಾಗಾಗಿ ಅದಕ್ಕೆ ಯೋಗ್ಯವಾಗಿರದವರನ್ನು ಅವರೆಂದೂ ಆರಿಸುವುದಿಲ್ಲ. ಇರುವ ಒಂದು ಜೀವನವನ್ನು ಅವರು ದೇಶಕ್ಕೆ ಮುಡಿಪಾಗಿಟ್ಟಿದ್ದಾರೆ’ ಎಂದರು.