ಮತಕ್ಕಾಗಿ ಪ್ರಿಯಾಂಕಾರಿಂದ‘ ಗಾಂಧಿ’ ಉಪನಾಮ ಬಳಕೆ: ಮಧ್ಯಪ್ರದೇಶ ಸಿಎಂ

| Published : Apr 29 2024, 01:38 AM IST / Updated: Apr 29 2024, 05:03 AM IST

ಮತಕ್ಕಾಗಿ ಪ್ರಿಯಾಂಕಾರಿಂದ‘ ಗಾಂಧಿ’ ಉಪನಾಮ ಬಳಕೆ: ಮಧ್ಯಪ್ರದೇಶ ಸಿಎಂ
Share this Article
  • FB
  • TW
  • Linkdin
  • Email

ಸಾರಾಂಶ

‘ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಆಕೆಯ ಹೆಸರಿನ ನಂತರ ಗಂಡನ ಮನೆಯವರ ಉಪನಾಮ ಸೇರಿಕೊಳ್ಳುತ್ತದೆ. ಆದರೆ ಪ್ರಿಯಾಂಕಾ ಗಾಂಧಿ..? ಕೇವಲ ಮತ ಸೆಳೆಯುವುದಕ್ಕೆ ತಮ್ಮ ಹೆಸರಿನ ಜೊತೆ ಗಾಂಧಿ ಹೆಸರನ್ನು ಸೇರಿಸಿಕೊಂಡಿದ್ದಾರೆ

ಗುಣಾ: ‘ ನಮ್ಮ ಸಂಪ್ರದಾಯದಲ್ಲಿ ಮದುವೆಯಾದ ಮೇಲೆ ಆಕೆಯ ಹೆಸರಿನ ನಂತರ ಗಂಡನ ಮನೆಯವರ ಉಪನಾಮ ಸೇರಿಕೊಳ್ಳುತ್ತದೆ. ಆದರೆ ಪ್ರಿಯಾಂಕಾ ಗಾಂಧಿ..? 

ಕೇವಲ ಮತ ಸೆಳೆಯುವುದಕ್ಕೆ ತಮ್ಮ ಹೆಸರಿನ ಜೊತೆ ಗಾಂಧಿ ಹೆಸರನ್ನು ಸೇರಿಸಿಕೊಂಡಿದ್ದಾರೆ ‘ ಇವರೆಲ್ಲರೂ ನಕಲಿ ಗಾಂಧಿಗಳು, ಸುಳ್ಳು ಉಪನಾಮ ಬಳಸಿಕೊಳ್ಳುತ್ತಿದ್ದಾರೆ’ಎಂದು ’ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಮಧ್ಯಪ್ರದೇಶದ ಗುಣಾ ಕ್ಷೇತ್ರದ ಮೈನಾದಲ್ಲಿ ನಡೆದ ಪ್ರಚಾರದ ವೇಳೆ ಮೋಹನ್ ಯಾದವ್ ಕಿಡಿಕಾರಿದ್ದಾರೆ. ಇತ್ತೀಚಿಗಷ್ಟೇ ಪ್ರಿಯಾಂಕಾ ಗಾಂಧಿ ಬೆಂಗಳೂರಿನಲ್ಲಿ ಚುನಾವಣೆ ಪ್ರಚಾರದ ವೇಳೆ ನನ್ನ ತಾಯಿ ಸೋನಿಯಾ ಗಾಂಧಿ ದೇಶಕ್ಕಾಗಿ ಮಂಗಳ ಸೂತ್ರವನ್ನು ತ್ಯಾಗ ಮಾಡಿದ್ದರು ಎಂದಿದ್ದರು.

 ಇದಕ್ಕೆ ಮಧ್ಯಪ್ರದೇಶದ ಮುಖ್ಯಮಂತ್ರಿ ಪ್ರಿಯಾಂಕಾ ಗಾಂಧಿ ಮಂಗಳ ಸೂತ್ರ ಧರಿಸಿದೇ ಇರುವುದನ್ನೇ ಗುರಿಯಾಗಿಸಿಕೊಂಡು ತಿರುಗೇಟು ನೀಡಿದ್ದಾರೆ. ‘ ತಮ್ಮ ಕುಟುಂಬದಲ್ಲಿ ಮಂಗಳಸೂತ್ರ ಧರಿಸದ ಮೊಮ್ಮಗಳ ಬಗ್ಗೆ ಜವಹಾರ್ ಲಾಲ್ ನೆಹರೂ ಆತ್ಮ ಕಣ್ಣೀರು ಹಾಕುತ್ತಿರಬೇಕು ’ ಎಂದು ವ್ಯಂಗ್ಯವಾಡಿದ್ದಾರೆ.