ಸಾರಾಂಶ
‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಪಾರ ಗೌರವವಿದೆ. ಅವರು ಆಗಾಗ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸುವ ವೇಳೆ ಟ್ರಂಪ್ ಮೋದಿಯವರ ಜೊತೆ ಮಾತನಾಡಿದ್ದಾರೆ’ ಎಂದ ಶ್ವೇತಭವನದ ವಕ್ತಾರೆ
ವಾಷಿಂಗ್ಟನ್/ನವದೆಹಲಿ : ‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅಪಾರ ಗೌರವವಿದೆ. ಅವರು ಆಗಾಗ ಮಾತನಾಡುತ್ತಾ ಇರುತ್ತಾರೆ. ಇತ್ತೀಚೆಗೆ ಓವಲ್ ಕಚೇರಿಯಲ್ಲಿ ದೀಪಾವಳಿ ಆಚರಿಸುವ ವೇಳೆ ಟ್ರಂಪ್ ಮೋದಿಯವರ ಜೊತೆ ಮಾತನಾಡಿದ್ದಾರೆ’ ಎಂದು ಶ್ವೇತಭವನದ ವಕ್ತಾರೆ ಕ್ಯಾರೋಲಿನ್ ಲೀವಿಟ್ ಹೇಳಿದ್ದಾರೆ.
ವ್ಯಾಪಾರ ಸಂಬಂಧದ ಕುರಿತು
ಭವಿಷ್ಯದ ಭಾರತ-ಅಮೆರಿಕ ವ್ಯಾಪಾರ ಸಂಬಂಧದ ಕುರಿತು ಮಾತನಾಡಿದ ಅವರು, ‘ವ್ಯಾಪಾರ ಸಂಬಂಧದ ಬಗ್ಗೆ ಟ್ರಂಪ್ ತುಂಬಾ ಸಕಾರಾತ್ಮಕವಾಗಿದ್ದಾರೆ. ಆ ವಿಷಯಕ್ಕೆ ಸಂಬಂಧಿಸಿದಂತೆ ಟ್ರಂಪ್ ಮತ್ತು ಅವರ ವ್ಯಾಪಾರ ತಂಡವು ಭಾರತದೊಂದಿಗೆ ಗಂಭೀರ ಚರ್ಚೆಗಳನ್ನು ನಡೆಸುತ್ತಿದೆ. ಹಾಗಾಗಿ ಟ್ರಂಪ್ ಅವರಿಗೆ ಪ್ರಧಾನಿ ಮೋದಿಯವರ ಬಗ್ಗೆ ಅಪಾರ ಗೌರವವಿದೆ ಎಂದು ನನಗೆ ತಿಳಿದಿದೆ. ಅವರು ಆಗಾಗ ಮಾತನಾಡುತ್ತಾ ಇರುತ್ತಾರೆ’ ಎಂದಿದ್ದಾರೆ.
ಒಪ್ಪಿಕೊಳ್ಳಲು ಮೋದಿಗೇನು ಕಷ್ಟ?- ಕಾಂಗ್ರೆಸ್:
ಲೀವಿಟ್ ಹೇಳಿಕೆಯನ್ನು ಮುಂದಿಟ್ಟುಕೊಂಡು ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ಕಿಡಿ ಕಾರಿದೆ. ‘ಮೋದಿ ಮತ್ತು ಟ್ರಂಪ್ ವ್ಯಾಪಾರದ ಬಗ್ಗೆ ಆಗಾಗ ಮಾತಾಡುತ್ತಾರೆ ಎಂದು ಶ್ವೇತಭವನದ ವಕ್ತಾರೆಯೇ ತಿಳಿಸಿದ್ದಾರೆ. ಅದನ್ನು ಒಪ್ಪಿಕೊಳ್ಳಲು ಮೋದಿಯವರಿಗೇನು ಕಷ್ಟ? ಅವರು ಯಾವುದಕ್ಕೆ ಹೆದರುತ್ತಿದ್ದಾರೆ?’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಪ್ರಶ್ನಿಸಿದ್ದಾರೆ.
;Resize=(690,390))

;Resize=(128,128))
;Resize=(128,128))