141ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮ

| Published : Aug 22 2024, 12:53 AM IST

141ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಪುಣ್ಯ ಕ್ಷೇತ್ರಗಳಲ್ಲಿ ಪುಣ್ಯವನ್ನು ಪಡೆದುಕೊಳ್ಳಬೇಕೆಂದರೆ ಎಲ್ಲರ ಕೈಯಲ್ಲೂ ಸಾಧ್ಯವಾಗುವುದಿಲ್ಲ. ಗುಡಿ, ಮಠ, ಗೋಪುರ, ಅರಮನೆ ಕಟ್ಟಬಹುದು, ಅವುಗಳು ಬಹಳ ವರ್ಷಗಳ ನಂತರ ಉಳಿಯುವುದಿಲ್ಲ. ಆದರೆ, ಪ್ರೀತಿ, ಬಾಂಧವ್ಯ, ಸಂಬಂಧಗಳನ್ನು ಸರಿಯಾಗಿ ಜೋಡಿಸಿದರೆ ಅದು ಎಂದಿಗೂ ಒಡೆಯುವುದಿಲ್ಲ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣ ಹೊರವಲಯದ ಚಂದ್ರವನ ಆಶ್ರಮದಲ್ಲಿ 141ನೇ ಬೆಳದಿಂಗಳ ದೀಪಾರತಿ ಮತ್ತು ಧಾರ್ಮಿಕ ಕಾರ್ಯಕ್ರಮ ಆಶ್ರಮದ ಪೀಠಾಧ್ಯಕ್ಷ ಡಾ.ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.

ನಂತರ ಸ್ವಾಮೀಜಿ ಮಾತನಾಡಿ, ಪುಣ್ಯ ಕ್ಷೇತ್ರಗಳಲ್ಲಿ ಪುಣ್ಯವನ್ನು ಪಡೆದುಕೊಳ್ಳಬೇಕೆಂದರೆ ಎಲ್ಲರ ಕೈಯಲ್ಲೂ ಸಾಧ್ಯವಾಗುವುದಿಲ್ಲ. ಗುಡಿ, ಮಠ, ಗೋಪುರ, ಅರಮನೆ ಕಟ್ಟಬಹುದು, ಅವುಗಳು ಬಹಳ ವರ್ಷಗಳ ನಂತರ ಉಳಿಯುವುದಿಲ್ಲ. ಆದರೆ, ಪ್ರೀತಿ, ಬಾಂಧವ್ಯ, ಸಂಬಂಧಗಳನ್ನು ಸರಿಯಾಗಿ ಜೋಡಿಸಿದರೆ ಅದು ಎಂದಿಗೂ ಒಡೆಯುವುದಿಲ್ಲ. ಉಳಿಸಿಕೊಂಡು ಹೋಗುವ ಪ್ರಯತ್ನದಲ್ಲಿರಬೇಕು ಎಂದರು.

ಈ ವೇಳೆ ಗೋಪಾಲಪುರದ ಶ್ರೀ ಕಬ್ಬಿಣ ಕೋಲೇಶ್ವರ ಮಠದ ಷ.ಬ್ರ ಶ್ರೀ ಗಂಗಾಧರ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಿದ್ದರು. ಗೋಪಾಲಪುರದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಶ್ರೀ ಸಿದ್ದೇಶ್ವರ ಸ್ವಾಮಿಗಳು ಉಪಸ್ಥಿತಿ ಇದ್ದರು.ಕೆಆರ್ ಎಸ್ ನೀರಿನ ಮಟ್ಟ

ಗರಿಷ್ಠ ಮಟ್ಟ - 124.80 ಅಡಿ

ಇಂದಿನ ಮಟ್ಟ – 123.67 ಅಡಿ

ಒಳ ಹರಿವು – 8,594 ಕ್ಯುಸೆಕ್

ಹೊರ ಹರಿವು – 7,299 ಕ್ಯುಸೆಕ್

ನೀರಿನ ಸಂಗ್ರಹ – 47.885 ಟಿಎಂಸಿ