ಚನ್ನಪಟ್ಟಣ: ತಾಲೂಕಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರರಿಂದ ಆಚರಿಸಿದರು.

ಚನ್ನಪಟ್ಟಣ: ತಾಲೂಕಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ ಸಡಗರರಿಂದ ಆಚರಿಸಿದರು. ನಗರದ ಸಿಎಸ್‌ಐ ಬೆಥನಿ ದೇವಾಲಯ, ಸಂತ ಜೋಸೇಫ್ ಚರ್ಚ್ ಸೇರಿದಂತೆ ವಿವಿಧ ಚರ್ಚ್‌ಗಳಲ್ಲಿ ಕ್ರಿಸ್‌ಮಸ್‌ ಹಬ್ಬದ ಪ್ರಯುಕ್ತ ವಿಶೇಷ ಆರಾಧನೆ ಆರಾಧನೆಯಲ್ಲಿ ಪಾಲ್ಗೊಂಡು ಪರಸ್ಪರ ಕ್ರಿಸ್‌ಮಸ್ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಚಿಣ್ಣರು ಹೊಸಬಟ್ಟೆ ತೊಟ್ಟು ಸಂಭ್ರಮಿಸಿದರು.

ಕ್ರಿಸ್‌ಮಸ್ ಹಬ್ಬದ ಹಿನ್ನೆಲೆಯಲ್ಲಿ ಎಲ್ಲ ಚರ್ಚ್‌ಗಳಲ್ಲೂ ವಿಶೇಷ ವಿದ್ಯುತ್ ಅಲಂಕಾರ, ಅಲಂಕಾರಿಕ ವಸ್ತುಗಳಿಂದ ಚರ್ಚ್‌ಗಳನ್ನು ಅಲಂಕೃತಗೊಳಿಸಲಾಗಿತ್ತು. ಚರ್ಚ್‌ಗಳ ಆವರಣದಲ್ಲಿ ಗೋದಳಿಗಳನ್ನು ನಿರ್ಮಿಸಿ ಕ್ರಿಸ್ತ ಯೇಸುವಿನ ಜನನ ಸಂದೇಶವನ್ನು ತಿಳಿಸುವ ದೃರ್ಶಯಾವಳಿ ಸೃಷ್ಟಿಸಲಾಗಿತ್ತು.

ಚರ್ಚ್‌ಗಳಲ್ಲಿ ಸಭಾಪಾಲಕರು ಕ್ರಿಸ್ತ ಯೇಸುವಿನ ಜನನ ಸಂದೇಶ ಸಾರಿದರು. ನಮ್ಮಲ್ಲಿನ ಭಿನ್ನಾಭಿಪ್ರಾಯವನ್ನು ನಾವೆಲ್ಲ ಬದಿಗೊತ್ತಬೇಕು. ನಮ್ಮಲ್ಲಿನ ದ್ವೇಷ ಅಸೂಯೆಯನ್ನು ಬಿಟ್ಟು, ನಾವೆಲ್ಲ ಒಂದೇ ಕುಟುಂಬದವರಂತೆ ಜೀವಿಸಬೇಕು. ಕ್ರಿಸ್ತ ಯೇಸುವಿನ ಸಂದೇಶದಂತೆ ನಮ್ಮಂತೆಯೇ ನಮ್ಮ ನೆರೆಹೊರೆಯವರನ್ನು ಪ್ರೀತಿಸಿ ಕ್ರಿಸ್ತನ ಸಂದೇಶವನ್ನು ಜಗತ್ತಿಗೆ ಸಾರಬೇಕು ಎಂದು ತಿಳಿಸಿದರು.