ಪೊಲೀಸರಿಗೆ ಹಲ್ಲೆಗೆ ಯತ್ನಿಸಿದ್ದ ರೌಡಿ ಶೀಟರ್‌ ಕಾಲಿಗೆ ಗುಂಡು

| Published : Oct 03 2024, 01:19 AM IST

ಪೊಲೀಸರಿಗೆ ಹಲ್ಲೆಗೆ ಯತ್ನಿಸಿದ್ದ ರೌಡಿ ಶೀಟರ್‌ ಕಾಲಿಗೆ ಗುಂಡು
Share this Article
  • FB
  • TW
  • Linkdin
  • Email

ಸಾರಾಂಶ

ಸೆ.14 ರಂದು ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್ ಗಣೇಶ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ರೌಡಿ ಶೀಟರ್‌ ಮಧು, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ.

ಹಾಸನ: ಕೊಲೆ ಆರೋಪದ ಮೇಲೆ ಬಂಧಿಸಲು ಹೋದ ಪೊಲೀಸರ ಮೇಲೆಯೇ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿ ಶೀಟರ್‌ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಘಟನೆ ಬೇಲೂರು ತಾಲೂಕಿನ ಬಿಕ್ಕೋಡಿನಲ್ಲಿ ನಡೆದಿದೆ. ಘಟನೆಯಲ್ಲಿ ರೌಡಿ ಶೀಟರ್‌ ಮಧು ಎಂಬಾತನನ್ನು ಬಂಧಿಸಲಾಗಿದೆ. ಸೆ.14 ರಂದು ಕ್ಷುಲ್ಲಕ ಕಾರಣಕ್ಕೆ ವಾಟರ್‌ಮ್ಯಾನ್ ಗಣೇಶ್‌ನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ್ದ ರೌಡಿ ಶೀಟರ್‌ ಮಧು, ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ. ಬುಧವಾರ ಮುಂಜಾನೆ ಹಬ್ಬಕ್ಕೆಂದು ಅರೇಹಳ್ಳಿಗೆ ಬರುತ್ತಿರುವ ಮಾಹಿತಿ ತಿಳಿದ ಇನ್ಸ್‌ಪೆಕ್ಟರ್ ವಿನಯ್ ಹಾಗೂ ಸಿಬ್ಬಂದಿ ದಾಳಿ ಮಾಡಿ ಬಂಧಿಸಲು ಯತ್ನಿಸಿದ್ದಾರೆ. ಈ ವೇಳೆ ಮಧು ಅರೇಹಳ್ಳಿ ಪೊಲೀಸ್ ಠಾಣೆ ಕಾನ್ಸ್‌ಟೇಬಲ್‌ಗಳಾದ ಶಶಿ ಹಾಗೂ ಅಶೋಕ್ ಮೇಲೆ ಡ್ರ್ಯಾಗರ್‌ನಿಂದ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಇನ್ಸ್‌ಪೆಕ್ಟರ್ ವಿನಯ್ ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ತಿಳಿಸಿದ್ದಾರೆ. ಆದರೂ ಮಧು ಕಲ್ಲಿನಿಂದ ಹಲ್ಲೆ ಮಾಡಲು ಮುಂದಾದ ವೇಳೆ ಇನ್ಸ್‌ಪೆಕ್ಟರ್‌ ವಿನಯ್‌ ರೌಡಿ ಮಧು ಕಾಲಿಗೆ ಗುಂಡು ಹಾರಿಸಿದ್ದಾರೆ. ನಂತರ ಆತನನ್ನು ಬಂಧಿಸಿ ಬೇಲೂರು ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.