ವೆಂಕಟೇಶ್ ಅವರ ಮನೆಯನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದು, ಅಕ್ರಮ ಖಾತೆ ರದ್ದು ಪಡಿಸಿ ಮೃತ ವೆಂಕಟೇಶ್ ಕುಟುಂಬಕ್ಕೆ ವಾಸದ ಸ್ಥಳ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.
ಕನ್ನಡಪ್ರಭ ವಾರ್ತೆ ಮದ್ದೂರು
ಗ್ರಾಮ ಪಂಚಾಯ್ತಿ ಅಧಿಕಾರಿಗಳು ಅಕ್ರಮ ಖಾತೆ ಮಾಡಿದ್ದಾರೆಂದು ಆರೋಪಿಸಿ ತಾಲೂಕಿನ ಮರಳಿಗ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿ ಶವವನ್ನು ಬೀದಿ ಮಧ್ಯೆ ಇಟ್ಟು ಕುಟುಂಬಸ್ಥರು ಮಂಗಳವಾರ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ಗ್ರಾಮದ ಗ್ರಾಪಂ ಸಹಾಯಕ ವೆಂಕಟೇಶ್ (58) ಸೋಮವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ವೆಂಕಟೇಶ್ ಅವರ ವಾಸದ ಸ್ಥಳವನ್ನು ಹಲವು ವಷಗಳ ಹಿಂದೆ ಅಕ್ರಮವಾಗಿ ಗ್ರಾಪಂ ಅಧಿಕಾರಿಗಳು ಗೌರಮ್ಮ ಎಂಬುವವರ ಹೆಸರಿಗೆ ಅಕ್ರಮ ಖಾತೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ವೆಂಕಟೇಶ್ ಅವರ ಮನೆಯನ್ನು ಬೇರೆಯವರ ಹೆಸರಿಗೆ ಖಾತೆ ಮಾಡಿಕೊಟ್ಟಿದ್ದು, ಅಕ್ರಮ ಖಾತೆ ರದ್ದು ಪಡಿಸಿ ಮೃತ ವೆಂಕಟೇಶ್ ಕುಟುಂಬಕ್ಕೆ ವಾಸದ ಸ್ಥಳ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಗ್ರಾಮದಲ್ಲಿ ಕೆಲಕಾಲ ಪ್ರಕ್ಷುಬ್ಧ ವಾತಾವರಣ ಉಂಟಾಗಿತ್ತು.ಜಿಪಂ ಮಾಜಿ ಅಧ್ಯಕ್ಷ ಜವಹರ್ ಲಾಲ್ ಮಾತನಾಡಿ, ವೆಂಕಟೇಶ್ ಅವರು ಹಲವು ವರ್ಷಗಳಿಂದ ಗ್ರಾಮದಲ್ಲಿ ವಾಸವಿದ್ದು, ಅವರು ಇರುವ ವಾಸದ ಸ್ಥಳವನ್ನು ಅಧಿಕಾರಿಗಳು ಅಧಿಕಾರ ದುರುಪಯೋಗಪಡಿಸಿಕೊಂಡು ಬೇರೆಯವರಿಗೆ ಅಕ್ರಮವಾಗಿ ಖಾತೆ ಮಾಡಿಕೊಟ್ಟಿದ್ದಾರೆ. ಅಕ್ರಮವಾಗಿ ಮಾಡಿರುವ ಖಾತೆ ರದ್ದುಪಡಿಸಿ ವೆಂಕಟೇಶ್ ಅವರ ಕುಟುಂಬಕ್ಕೆ ವಾಸದ ಸ್ಥಳ ಖಾತೆ ಮಾಡಿಸಿಕೊಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡ ಮರಳಿಗ ಶಿವರಾಜ್ ಮಾತನಾಡಿ, ಮರಳಿಗ ಗ್ರಾಪಂಯಲ್ಲಿ ಈ ಹಿಂದೆ ಹಲವು ಖಾತೆಗಳಗಳನ್ನು ಅಕ್ರಮವಾಗಿ ಅಧಿಕಾರಿಗಳು ಮಾಡಿದ್ದಾರೆ. ಈ ಬಗ್ಗೆ ಸಂಬಂಧಿಸಿದವರು ತನಿಖೆ ನಡೆಸಿ ತಪ್ಪಿಸ್ಥ ಅಧಿಕಾರಿಗಳಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಹಾಗೂ ಮುಂದೆ ಅಕ್ರಮ ಖಾತೆಗಳಾಗದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.ಸ್ಥಳಕ್ಕೆ ಆಗಮಿಸಿ ತಾಪಂ ಇಒ ರಾಮಲಿಂಗಯ್ಯ ಮಾತನಾಡಿ, ಮಂಗಳವಾರ ನಡೆದ ಮರಳಿಗ ಗ್ರಾಪಂ ಗ್ರಾಮ ಸಭೆಯಲ್ಲಿ ನಾನು, ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಗ್ರಾಪಂ ಅಧ್ಯಕ್ಷೆ ಸುನೀತಾ ಶ್ರೀನಿವಾಸ್ ಹಾಗೂ ಸದಸ್ಯರು ಈ ಸಂಬಂಧ ಪರಿಶೀಲನೆ ನಡೆಸಿ ಬೇರೆಯವರ ಹೆಸರಿಗೆ ಆಗಿರುವ ಖಾತೆ ನಿಯಾಮನುಸಾರ ಆಗಿರದ ಹಿನ್ನೆಲೆಯಲ್ಲಿ ಅದನ್ನು ರದ್ದುಪಡಿಸಿ ಗ್ರಾಪಂ ಸಭೆಯಲ್ಲಿ ಗ್ರಾಮ ಸಹಾಯಕ ವೆಂಕಟೇಶ್ ಅವರ ಕುಟುಂಬಕ್ಕೆ ಖಾತೆ ಪತ್ರ ಸಿದ್ಧಪಡಿಸಿ ನೀಡಲಾಗಿದೆ ಎಂದು ತಿಳಿಸಿ, ಕುಟುಂಬದ ಸದಸ್ಯರಿಗೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದು ವೆಂಕಟೇಶ್ ಶವವನ್ನು ಅಂತ್ಯ ಸಂಸ್ಕಾರ ಮಾಡಲಾಯಿತು.
ಘಟನೆಯಿಂದ ಹಿನ್ನೆಲೆಯಲ್ಲಿ ಮದ್ದೂರು ವೃತ್ತ ನಿರೀಕ್ಷಕ ಎಚ್.ಎಸ್.ನವೀನ ನೇತೃತ್ವದಲ್ಲಿ ಪೊಲೀಸ್ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಪ್ರತಿಭಟನೆಯಲ್ಲಿ ಮುಕಂಡರಾದ ವೆಂಕಟೇಶ್, ಯತೀಶ್ ಕುಮಾರ್, ಪುಟ್ಟಸ್ವಾಮಿ, ಶಿವಲಿಂಗೇಗೌಡ, ರಂಜಿತ, ಹರೀಶ್, ದಾಸಯ್ಯ, ಚನ್ನೇಶ್, ಎಂ ಕೆ ಶೋಭಾ ಸೇರಿದಂತೆ ಇತರರು ಇದ್ದರು.