ಮಹಿಳೆಯ ಕೊಲೆ ಪ್ರಕರಣದ ಆರೋಪಿ ಸೆರೆ

| Published : Mar 29 2024, 12:51 AM IST

ಸಾರಾಂಶ

ಆರೋಪಿ ಮೃತಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನಂತರ ಇಬ್ಬರ ಸಂಬಂಧದಲ್ಲಿ ಬಿರುಕುಂಟಾಗಿದೆ. ನಂತರ ಅಬ್ರಾರ್‌ಗೆ ಸುಲ್ತಾನ್ ತಾಜ್ ಬ್ಲಾಕ್ ಮೇಲೆ ಮಾಡುವ ಮೂಲಕ ಹಣವನ್ನು ಪೀಕಿದ್ದಳಂತೆ.

ಕನ್ನಡಪ್ರಭ ವಾರ್ತೆ ಕೋಲಾರ

ಕಳೆದ ೧೧ ತಿಂಗಳ ಹಿಂದೆ ಅನುಮಾನಾಸ್ಪದವಾಗಿ ಪತ್ತೆಯಾಗಿದ್ದ ಮಹಿಳೆಯ ಶವದ ಪ್ರಕರಣ ಭೇದಿಸುವಲ್ಲಿ ಕೋಲಾರ ಗ್ರಾಮಂತರ ಪೋಲೀಸರು ಯಶಸ್ವಿಯಾಗಿ ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಇಸ್ಲಾಂಪುರದ ನಿವಾಸಿ ಸುಲ್ತಾನ್ ತಾಜ್(೩೩) ಕೊಲೆಯಾದ ಮಹಿಳೆ. ಬೆಂಗಳೂರಿನ ಅಬ್ರಾರ್ ಅಹ್ಮದ್(೩೮) ಕೊಲೆ ಮಾಡಿದ ಆರೋಪಿ. ಈತ ಮೃತಳೊಂದಿಗೆ ಅಕ್ರಮ ಸಂಬಂಧ ಹೊಂದಿದ್ದು, ನಂತರ ಇಬ್ಬರ ಸಂಬಂಧದಲ್ಲಿ ಬಿರುಕುಂಟಾಗಿದೆ. ನಂತರ ಅಬ್ರಾರ್‌ಗೆ ಸುಲ್ತಾನ್ ತಾಜ್ ಬ್ಲಾಕ್ ಮೇಲೆ ಮಾಡುವ ಮೂಲಕ ಹಣವನ್ನು ಪೀಕಿದ್ದಳಂತೆ.

ಬ್ಲಾಕ್‌ಮೇಲ್‌ಗೆ ತೆತ್ತ ಬೆಲೆ

ಅಲ್ಲದೆ ಸುಲ್ತಾನ್ ತಾಜ್ ಹಲವರೊಂದಿಗೂ ಈ ರೀತಿ ಅಕ್ರಮ ಸಂಬಂಧ ಬೆಳೆಸಿ ನಂತರ ಹಣ ವಸೂಲಿ ಮಾಡುತ್ತಿದ್ದಳಂತೆ. ಇದರಿಂದ ಬೇಸತ್ತ ಅಬ್ರಾರ್ ಅಹ್ಮದ್, ಸುಲ್ತಾನ್ ತಾಜ್ ಸಲುಗೆಯಿಂದ ಕೋಲಾರಕ್ಕೆ ಕರೆತಂದು ಕೊಲೆ ಮಾಡಿದ್ದಾರೆ. ಕೋಲಾರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ಕೋಲಾರ ಗ್ರಾಮಾಂತರ ಠಾಣೆ ಸಬ್ ಇನ್ಸ್‌ಪೆಕ್ಟರ್ ಭಾರತಿ ನೇತೃತ್ವದಲ್ಲಿ ತನಿಖೆ ಕೈಗೊಂಡ ಪೊಲೀಸರು, ಮೃತ ಮಹಿಳೆಯ ವಿಳಾಸವನ್ನು ಪತ್ತೆ ಹಚ್ಚಿದ್ದಾರೆ. ನಂತರ ಅಬ್ರಾರ್ ಅಹ್ಮದ್‌ನೊಂದಿಗೆ ಅಕ್ರಮ ಸಂಬಂಧ ಇರುವುದು ತಿಳಿದ ಪೊಲೀಸರು ಅಬ್ರಾರ್ ಅಹ್ಮದ್ ವಶಕ್ಕೆ ಪಡೆದಿದ್ದಾರೆ.

ಆರೋಪಿಯಿಂದ ತಪ್ಪೊಪ್ಪಿಗೆ

ಆದರೆ ಸುಲ್ತಾನ್ ತಾಜ್ ಅಬ್ರಾರಾ ಅಹ್ಮದ್‌ನಿಂದ ಹಣ ಬೇಡಿಕೆಯನ್ನು ನಿಂತರವಾಗಿಟ್ಟಿದ್ದ ಹಿನ್ನಲೆ ಕೊಲೆ ಮಾಡಿರುವುದು ನಿಜ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಾನೆ. ಕಾರ್ಯಾಚರಣೆಯನ್ನು ಕೋಲಾರ ಗ್ರಾಮಾಂತರ ಪೋಲೀಸ್ ಠಾಣೆಯ ವೃತ್ತ ನಿರೀಕ್ಷ ಕಾಂತರಾಜು, ಸಬ್‌ಇನ್ಸ್‌ಪೆಕ್ಟರ್ ಭಾರತಿ, ಸಿಬ್ಬಂದಿ ಮುರಳಿ, ರಾಜೇಶ್, ಆಂಜಿ, ವಿನಾಯಕ್, ಸಾಧಿಕ್ ಪಾಷ ಪಾಲ್ಗೊಂಡಿದ್ದರು.