ಸಾರಾಂಶ
ಕನ್ನಡಪ್ರಭ ವಾರ್ತೆ ಚಿಕ್ಕನಾಯಕನಹಳ್ಳಿ
ನಕಲಿ ದಾಖಲೆ ಮೇಲೆ ಅಸಲಿ ಜಮೀನನ್ನು ಕ್ರಯಪತ್ರ ಮಾಡಿಕೊಟ್ಟಿರುವ ಅಧಿಕಾರಿಗಳ ಮೇಲೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಆರೋಪಿಗಳ ಮೇಲೆ ಕ್ರಮಕ್ಕೆ ಕ್ರಮ ಕೈಗೊಳ್ಳುವುದಾಗಿ ಶಾಸಕ ಸಿ. ಬಿ. ಸುರೇಶ ಬಾಬು ಹೇಳಿದರು.ಇಲ್ಲಿನ ಪಟ್ಟಣ ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಈ ವಿಷಯವಾಗಿ
ಕಂದಾಯ ಇಲಾಖೆ ಸಚಿವರ ಹತ್ತಿರ ಮಾತನಾಡಿ ರಿಜಿಸ್ಟರ್ ಆಗಿರುವುದನ್ನು ತಡೆಹಿಡಿಯುವಂತೆ ಮಾಡುತ್ತೇನೆ. ನಿಜವಾದ ಮಾಲೀಕನ ಜಮೀನಿನ ದಾಖಲೆಗಳನ್ನು ಇಟ್ಟುಕೊಂಡು ನಕಲಿ ಮಾಲೀಕರನ್ನು ಸೃಷ್ಟಿಸಿದ ವ್ಯಕ್ತಿಗಳು ಜಮೀನನ್ನು ರಿಜಿಸ್ಟರ್ ಮಾಡಿಸುವಾಗ ಸಬ್ ರಿಜಿಷ್ಟರ್ ದಾಖಲೆಗಳನ್ನು ಪರೀಶೀಲಿಸದೆ ಮತ್ತು ನಿಜವಾದ ಮಾಲೀಕ ಯಾರೆಂಬುದನ್ನು ನೋಡದೆ ಜಮೀನನ್ನು ರಿಜಿಸ್ಟರ್ ಮಾಡಿರುವುದು ಅಧಿಕಾರಿಗಳ ಬೇಜವಾಬ್ದಾರಿಯಾಗಿದೆ. ಅನ್ಯಾಯಕ್ಕೆ ಒಳಗಾದ ನಿಜವಾದ ಮಾಲೀಕನ ಪರಿಸ್ಥಿಯ ಬಗ್ಗೆ ಯೋಚನೆ ಮಾಡಬೇಕು. ಅಧಿಕಾರಿಗಳು ಇಂದು ಇರ್ತಾರೆ ನಾಳೆ ಬೇರೆ ಕಡೆ ಹೋಗ್ತಾರೆ ನೊಂದ ಜನರ ಗತಿ ಏನಾಗಬೇಕು ಎಂದರು.ಸಿಂಗದಹಳ್ಳಿ ರಾಜಕುಮಾರ್ ದನಿಗೂಡಿಸಿ ಇದು ಅಕ್ಷಮ್ಯ ಅಪರಾಧ ಅಧಿಕಾರಿಗಳ ಉದಾಸೀನತೆ ಈ ಮೊಸಕ್ಕೆ ದಾರಿ ಮಾಡಿಕೊಟ್ಟಿದೆ. ಇಂತಹ ಘಟಣೆ ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು. ಭೂಮಿ ಮಾಲೀಕರು ಇಂತಹ ಪ್ರಕರಣದಿಂದ ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಮಧ್ಯವರ್ತಿಗಳಿಗೆ ಕಡಿವಾಣ ಹಾಕುವ ಜೊತೆಗೆ ಜವಾಬ್ದಾರಿಯಿಂದ ಕರ್ತವ್ಯವನ್ನ ನಿರ್ವಹಿಸಬೇಕು ಎಂದರು.
ತಾಲೂಕು ಹೆರಿಗೆ ಆಸ್ಪತ್ರೆಯಲ್ಲಿ ಹೆಚ್ಚು ನಿಗಾವಹಿಸಬೇಕು. ಬಾಂಣತಿಯರ ಯೋಗಕ್ಷೇಮವನ್ನು ಸರಿಯಾಗಿ ನಿರ್ವಹಿಸಿದೆ ಬೇಜಾವ್ದಾರಿಯಿಂದ ವರ್ತಿಸುತ್ತಿದ್ದು. ಆಸ್ಪತ್ರೆ ಬರುವಾಗ ಮೂಗು ಮುಚ್ಚಿಕೊಂಡು ಬರುವಂತಾಗಿದೆ ಸರಿಯಾಗಿ ನೋಡಿಕೊಳ್ಳಿ ಬೇರೆ ತಾಲೂಕುಗಳಿಗೆ ಹೋಗುವ ಗರ್ಭಿಣಿಯರಿಗೆ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಕೂಡ ಪೂರ್ಣ ಪ್ರಮಾಣದಲ್ಲಿ ಸೇವೆ ಸಲ್ಲುವಂತೆ ನೋಡಿಕೊಳ್ಳಿ ಎಂದು ಆರೋಗ್ಯ ಅಧಿಕಾರಿಗೆ ಸೂಚಿಸಿದರು.ಬೇಸಿಗೆಕಾಲ ಸಮೀಪಿಸುತ್ತಿದ್ದು ನೀರಿನ ಕೊರತೆ ಉಂಟಾಗದಂತೆ ಹೀಗಿರುವ ಕೆರೆಗಳ ನೀರನ್ನು ಮಲಿನಗೊಳ್ಳದಂತೆ ಸ್ವಚ್ಛತೆಯ ಜಾಗೃತಿಯನ್ನು ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕೊಳವೆಬಾವಿಗಳು ದುರಸ್ತಿ ಜಲಜೀವನ್ ಮಿಷನ್ ಕಾಮಗಾರಿಯಲ್ಲಿ ಬೋರ್ವೆಲ್ ನಿಂದ ನೇರವಾಗಿ ಸಂಪರ್ಕ ನೀಡಿರುವುದನ್ನು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು. ಕೃಷಿ ಇಲಾಖೆಯಲ್ಲಿ ರೈತರಿಗೆ ಸಿಗುವ ಸೌಲಭ್ಯಗಳ ಬಗ್ಗೆ ಹೆಚ್ಚು ಪ್ರಚಾರದ ಬಗ್ಗೆ ಗಮನಹರಿಸುವಂತೆ ಅಧಿಕಾರಿಗೆ ಸೂಚಿಸಿದರು. ಪಶು ಇಲಾಖೆಗಳಲ್ಲಿ ಖಾಸಗಿ ಹಸುಗಳಿಗೂ ವಿಮೆ ಸೌಲಭ್ಯಕ್ಕೆ ಆದ್ಯತೆ ನೀಡುವ ಕೆಲಸ ಮಾಡಬೇಕಿದೆ. ಇದಕ್ಕೆ ಸರ್ಕಾರದೊಂದಿಗೆ ಮಾತನಾಡುವಂತೆ ಅಧಿಕಾರಿ ನಾಗಭೂಷಣ್ ಶಾಸಕರಲ್ಲಿ ಮನವಿ ಮಾಡಿದರು. ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಅವುಗಳ ಸಂತಾನ ಹರಣ ಚಿಕಿತ್ಸೆ ಬಗ್ಗೆ ಬೆಳಕು ಚೆಲ್ಲಿದರು. ಗ್ರಾಮೀಣ ಭಾಗದ ಗುಡ್ಡಗಾಡು ಪ್ರದೇಶದ ಸುತ್ತಮುತ್ತಲ ಜನರಿಗೆ ಗುಡ್ಡ ಅರಣ್ಯ ಪ್ರದೇಶಗಳಿಗೆ ಬೆಂಕಿ ಇಡದಂತೆ ಜಾಗೃತಿ ಅಭಿಯಾನ ಹಾಗೂ ಹಳ್ಳಿಗಳಲ್ಲಿ ಸಾರ್ವಜನಿಕರೊಂದಿಗೆ ಸ್ಪಂದಿಸಿ ಬೆಂಕಿ ತಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನು ಅರಣ್ಯಾಧಿಕಾರಿಗೆ ಸೂಚಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾಂತರಾಜು ಪ್ರಗತಿ ವರದಿಯನ್ನು ಸಲ್ಲಿಸಿದರು.ಸಭೆಯಲ್ಲಿ ತಹಶೀಲ್ದಾರ್ ಕೆ ಪುರಂದರ್ ತಾಪಂ ಕಾರ್ಯ ನಿರ್ವಹಣಾಧಿಕಾರಿ ಡಿ ದೊಡ್ಡ ಸಿದ್ದಯ್ಯ ಜಿಲ್ಲಾ ಸಹಕಾರಿ ಬ್ಯಾಂಕ್ ನಿರ್ದೇಶಕ ಸಿಂಗ್ದಳ್ಳಿ ರಾಜಕುಮಾರ್ ,ಪುರಸಭಾ ಮಾಜಿ ಅಧ್ಯಕ್ಷ ಸಿಡಿ ಚಂದ್ರಶೇಖರ್, ರಾಮಚಂದ್ರಯ್ಯ ಬೆಸ್ಕಾಂ ಕಾರ್ಯ ನಿರ್ವಹಣಾಧಿಕಾರಿ ಗವಿರಂಗಯ್ಯ ಸುನಿಲ್ ಕುಮಾರ್ ಕಿರಣ್ ಕುಮಾರ್ ನಾಗಭೂಷಣ್ ಇತರರಿದ್ದರು.