ಸಿದ್ದರಾಮೇಶ್ವರ ತತ್ವ ಸಿದ್ಧಾಂತ ರೂಢಿಸಿಕೊಳ್ಳಿ

| Published : Jan 17 2024, 01:45 AM IST

ಸಾರಾಂಶ

ಶಿವಯೋಗಿ ಸಿದ್ದರಾಮೇಶ್ವರರು 68,000 ವಚನ ರಚಿಸಿದ ಮಹಾನ್ ವಚನಕಾರರು. ಆಧ್ಯಾತ್ಮ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ದಿವ್ಯ ಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು

ಕುಕನೂರು: ಸಿದ್ಧರಾಮೇಶ್ವರ ಸಂತರ ವಿಚಾರ ಹಾಗೂ ಸಾಧನೆ ಪ್ರತಿಯೊಬ್ಬ ಯುವಕರು ಅಳವಡಿಸಿಕೊಂಡು ಯುವ ಪೀಳಿಗೆಗೆ ಪರಿಚಯಿಸಲು ಮುಂದಾಗಬೇಕು ಎಂದು ಸಮಾಜದ ಮುಖಂಡ ವೆಂಕಟೇಶ ಭೋವಿ ಹೇಳಿದರು.

ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಸಿದ್ದರಾಮೇಶ್ವರ ಜಯಂತಿ ಆಚರಿಸಿ ಮಾತನಾಡಿದ ಅವರು, ಶಿವಯೋಗಿ ಸಿದ್ದರಾಮೇಶ್ವರರು 68,000 ವಚನ ರಚಿಸಿದ ಮಹಾನ್ ವಚನಕಾರರು. ಆಧ್ಯಾತ್ಮ ಪರಂಪರೆ ಹೊಂದಿರುವ ಭಾರತ ದೇಶದಲ್ಲಿ ದಿವ್ಯ ಜ್ಞಾನಿಗಳನ್ನು ಮುಂದಿನ ಜನಾಂಗಕ್ಕೆ ಪರಿಚಯಿಸಲು ಅವರ ಚಿಂತನೆಗಳನ್ನು ಅನುಷ್ಠಾನಕ್ಕೆ ತರಬೇಕು. ಶಿವಯೋಗಿ ಸಿದ್ದರಾಮೇಶ್ವರ ಕೊಡುಗೆ ಅಪಾರವಾದದ್ದು. ಅವರು ಅಸಮಾನತೆ, ವರ್ಣ ಜಾತಿ, ಲಿಂಗ ಭೇದ ತೊರೆದು ಹಾಕುವ ಕೆಲಸ ವಚನಗಳ ಮೂಲಕ ಮಾಡಿದರು. ಬಸವಣ್ಣನವರು ಸ್ಥಾಪಿಸಿದ ಅನುಭವ ಮಂಟಪದ ಮೂರನೇ ಅಧ್ಯಕ್ಷರಾಗಿ ಸಮಾಜದಲ್ಲಿ ಕೆಲಸ ಮಾಡಿದ್ದಾರೆ ಎಂದರು.

ಗ್ರೇಡ್ ಟು ತಹಸೀಲ್ದಾರ್ ಮುರಳೀಧರ್ ಕುಲಕರ್ಣಿ, ಶಿರಸ್ತೇದಾರ್ ಮುಸ್ತಾಫ್, ಭೋವಿ ಸಮಾಜದ ಅಧ್ಯಕ್ಷ ಮುತ್ತಣ್ಣ,ವೀರೇಶ್ ಬಂಡಿವಡ್ಡರ್, ಯಲ್ಲಪ್ಪ ಬಂಡಿಹಾಳ, ಅಡಿವೆಪ್ಪ ಕುಷ್ಟಗಿ, ಶಿವು ಡಂಬರ್ ಇತರರಿದ್ದರು.