ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ನೆಹರೂ ಮೈದಾನ 8 ಎಕರೆ 10 ಗುಂಟೆ ಇದ್ದು ಇದರಲ್ಲಿ ರೋಟರಿ ಭವನವಿದ್ದು, ಸದರಿ ರೋಟರಿ ಭವನದ ಜಾಗವು ನಗರಸಭೆಗೆ ಸೇರಿದ ಸ್ವತ್ತಾಗಿದೆ. ಆದರೆ ರೋಟರಿಯವರೇ ಇಷ್ಟು ದಿನ ಬಾಡಿಗೆ ವಸೂಲು ಮಾಡುತ್ತಿದ್ದು ನಗರಸಭೆ ಸ್ವತ್ತಿನ ಬಾಡಿಗೆ ವಸೂಲಿ ಮಾಡಲು ಅವರಿಗೆ ಹಕ್ಕಿಲ್ಲ. ನಗರಸಭೆ ವ್ಯಾಪ್ತಿಗೆ ಇದನ್ನು ಸೇರಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಜಯ್ ಕುಮಾರ್ ಒತ್ತಾಯಿಸಿದರು.ನಗರದ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷ ಬಾಲಕೃಷ್ಣ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಜಯ್ ಕುಮಾರ್ ಮಾತಿಗೆ ಉಳಿದ ಸದಸ್ಯರು ಧ್ವನಿಗೂಡಿಸಿದರು.
ರೋಟರಿ ಕಟ್ಟಡಗಳನ್ನು ನಗರಸಭೆ ಸುಪರ್ದಿಗೆ ಪಡೆಯಬೇಕು. ನಗರಸಭೆಯಿಂದಲೇ ಅನುಮತಿ ಪಡೆದು ಕಾರ್ಯಕ್ರಮಗಳನ್ನು ನಡೆಸಬೇಕು. ಈ ಬಗ್ಗೆ ರೋಟರಿಯವರ ದಾಖಲಾತಿಗಳನ್ನು ತರಿಸಿಕೊಂಡು ಪರಿಶೀಲಿಸಿ ಆದಷ್ಟು ಬೇಗ ರೋಟರಿ ಕಟ್ಟಡವನ್ನು ನಗರಸಭೆ ತನ್ನ ಆಡಳಿತಕ್ಕೆ ಪಡೆಯಬೇಕು. ಜೊತೆಗೆ ನನ್ನ ವಾರ್ಡ್‌ನಲ್ಲಿ ಬೀದಿ ದೀಪಗಳ ಸಮಸ್ಯೆ ಇದ್ದು ವಿದ್ಯುತ್ ದೀಪಗಳ ನಿರ್ವಹಣೆಯ ಗುತ್ತಿಗೆ ಬಗ್ಗೆ ಮಾಹಿತಿ ಕೇಳಿದರೆ ಎಇಇ ಕಾಂಗ್ರೆಸ್‌ನವರು ಮಾಡುತ್ತಿದ್ದಾರೆ ಎಂದು ಹೇಳುತ್ತಾರೆ ಎಂದು ಎಇಇ ವಿರುದ್ಧ ಕಿಡಿಕಾರಿದರು.ನಗರಸಭೆ ಸದಸ್ಯ ಜಿ.ಎಸ್.ತಿಪ್ಪೇಸ್ವಾಮಿ ಮಾತನಾಡಿ, ಬೀದಿ ದೀಪ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ನಾಗರಾಜ್ ಎನ್ನುವವರ ಮೇಲೆ ವ್ಯಾಪಕ ದೂರುಗಳಿವೆ ಎಂದರು.
ಮತ್ತೊಬ್ಬ ಸದಸ್ಯೆ ಶಿವರಂಜನಿ ಅವರ ಮಾತಿಗೆ ಧ್ವನಿಗೂಡಿಸಿ ಹಲವು ತಿಂಗಳು ಕಳೆದರೂ ಬೀದಿ ದೀಪಗಳಿಲ್ಲ. ಜನರಿಗೆ ನಾವು ಏನು ಉತ್ತರ ಕೊಡಬೇಕು. ಹೇಗೆ ಮುಖ ತೋರಿಸಬೇಕು ಎಂದರು.ಹಿರಿಯ ಸದಸ್ಯ ಈ.ಮಂಜುನಾಥ್ ಮಾತನಾಡಿ, ಸಾರ್ವಜನಿಕರ ಕೆಲಸಗಳಲ್ಲಿ ರಾಜಿ ಆಗಬೇಡಿ. ಯಾವುದೇ ಪಕ್ಷದವರ ಮುಲಾಜಿಗೂ ಒಳಗಾಗಬೇಡಿ ಎಂದು ತಾಂತ್ರಿಕ ಶಾಖೆಗೆ ಕಿವಿಮಾತು ಹೇಳಿದರು.
ಸದಸ್ಯರ ಮಾತಿಗೆ ಉತ್ತರಿಸಿದ ಪೌರಾಯುಕ್ತರು, ಶೀಘ್ರ ನಾಯಿಗಳ ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆಯ ಮೂಲಕ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು ಎಂದರು.ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಂಡಿ ಸಣ್ಣಪ್ಪ, ಮಮತಾ, ವಿಠ್ಠಲ್ ಪಾಂಡುರಂಗ, ರತ್ನಮ್ಮ, ಸದಸ್ಯರಾದ ಈರಲಿಂಗೇ ಗೌಡ, ಜಗದೀಶ್, ಅಂಬಿಕಾ ಆರಾಧ್ಯ, ಮೊದಲ ಮರಿಯಾ, ಕವಿತಾ ಲೋಕೇಶ್, ಶಂಷುನ್ನೀಸ, ಅನಿಲ್ ಕುಮಾರ್,ಸಮೀವುಲ್ಲ, ವೈಪಿಡಿ ದಾದಾಪೀರ್, ಗುಂಡೇಶ್ ಕುಮಾರ್, ಬೆಸ್ಕಾo ಎಇಇ ಪೀರ್ ಸಾಬ್, ನಾಮ ನಿರ್ದೇಶಿತ ಸದಸ್ಯರಾದ ಗಿರೀಶ್, ಶಿವಕುಮಾರ್, ಶಿವಣ್ಣ, ನಗರಸಭೆ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.
ಈಗಾಗಲೇ ಕೆಲವು ಸರ್ವೇ ನಂಬರ್ ನಗರಸಭೆ ವ್ಯಾಪ್ತಿಗೆ ಬಂದಿದ್ದು ಕಂದಾಯವನ್ನು ಬಬ್ಬೂರು ಗ್ರಾಮ ಪಂಚಾಯ್ತಿಗೆ ಕಟ್ಟಲಾಗುತ್ತಿದೆ. ಈ ಬಗ್ಗೆ ಗಮನ ಹರಿಸಿ ಕ್ರಮ ಕೈಗೊಳ್ಳಿ.ಚಿತ್ರಜಿತ್ ಯಾದವ್, ಸದಸ್ಯ, ನಗರಸಭೆ, ಹಿರಿಯೂರು