ಕನ್ನಡಪ್ರಭ ವಾರ್ತೆ ಸವದತ್ತಿ

ಗ್ರಾಮದೇವಿ ಜಾತ್ರೆಗೆ ಎಲ್ಲ ಸಮಾಜ ಬಾಂಧವರು ಸಹಕಾರ ನೀಡುತ್ತಿದ್ದು, 44 ವರ್ಷಗಳ ನಂತರ ನಡೆಯುವ ಜಾತ್ರೆಯನ್ನು ಅದ್ಧೂರಿಯಾಗಿ ಆಚರಿಸಲು ಸಕಲ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಗ್ರಾಮದೇವಿ ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ವಿರುಪಾಕ್ಷ ಮಾಮನಿ ಹೇಳಿದರು.

ಪಟ್ಟಣದಲ್ಲಿ ಮೇ.4 ರಂದು ಪ್ರಾರಂಭಗೊಳ್ಳಲಿರುವ ಗ್ರಾಮದೇವಿ ಜಾತ್ರೆಯ ವೇದಿಕೆಯ ಮಂಟಪ ನಿರ್ಮಾಣಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಈಗಾಗಲೇ ಜಾತ್ರಾ ಉತ್ಸವಕ್ಕೆ ಸಂಬಂಧಿಸಿದಂತೆ ಪೂರ್ವ ಸಿದ್ದತೆ ನಡೆಯುತ್ತಿವೆ. ವೇದಿಕೆಯ ಕಾರ್ಯಕ್ರಮಗಳಿಗೆ ಶ್ರೀಗಳ ಮತ್ತು ಗಣ್ಯರ ಆಗಮನಕ್ಕೆ ಪಟ್ಟಿ ಮಾಡಲಾಗುತ್ತಿದೆ. ಜಾತ್ರೆಯ ಸಮಯದಲ್ಲಿ ಕಬಡ್ಡಿ, ಕುಸ್ತಿ, ಮಲ್ಲಕಂಭ, ತೆರೆಬಂಡಿ, ಎತ್ತಿನ ಗಾಡಿ ಓಟ, ಕುದರೆ ಗಾಡಿ ಓಟ, ಟಗರಿನ ಕಾಳಗ ಸೇರಿದಂತೆ ಅನೇಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಪ್ರತಿ ನಿತ್ಯ ಪ್ರವಚನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಶಾಸಕರು ಹಾಗೂ ಜಾತ್ರಾ ಸಮಿತಿ ಗೌರವಾಧ್ಯಕ್ಷ ವಿಶ್ವಾಸ ವೈದ್ಯ ಮಾತನಾಡಿ, ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿ ಅವಶ್ಯಕ ಅಭಿವೃದ್ಧಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದೆ. ಆದಷ್ಟು ಬೇಗನೆ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುತ್ತಿದೆ. ಜಾತ್ರೆಗೆ ಸಂಬಂಧಿಸಿದಂತೆ ಎಲ್ಲ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವದಾಗಿ ತಿಳಿಸಿದರು.


ಅಡಿವೆಪ್ಪಾ ಬೀಳಗಿ, ಅಲ್ಲಮಪ್ರಭು ಪ್ರಭುನವರ, ಎಲ್.ಆರ್.ಕುಲಕರ್ಣಿ, ಡಾ.ಎನ್.ಸಿ.ಬೆಂಡಿಗೇರಿ, ಬಸವರಾಜ ಕಾರದಗಿ, ಬಿ.ವಿ.ಮಲ್ಲಗೌಡರ, ಐ.ಪಿ.ಪಾಟೀಲ, ರತ್ನಕ್ಕ ಆನಂದ ಮಾಮನಿ, ಅಶ್ವತ ವೈದ್ಯ, ಜಗದೀಶ ಶಿಂತ್ರಿ, ಶಿವಾನಂದ ಮೇಟಿ, ಶ್ರೇಯಸ್ಸ ಮಾಮನಿ, ಶ್ರೀಶೈಲ್ ಮುತಗೊಂಡ, ಬಿ.ಎನ್.ಪ್ರಭುನವರ, ಮದನಲಾಲ ಚೋಪ್ರಾ, ಭರಮಪ್ಪ ಅಣ್ಣಿಗೇರಿ, ಬಸವರಾಜ ಪುಟ್ಟಿ, ಅಮೃತ ಸುಳ್ಳದ, ಶ್ರೀಶೈಲ ಕಾರದಗಿ, ಸುರೇಶ ಭೀ ಬಾಳೋಜಿ, ಮಲ್ಲಿಕಾರ್ಜುನ ಬೀಳಗಿ, ಮಹಾಂತೇಶ ಪಂಪನವರ, ಬೋಪಾಲ ಬಾಂಡೆಕರ, ವಿರುಪಾಕ್ಷಿ ಹೆರಕಲ್, ಡಾ.ವೈ.ಎಮ್.ಯಾಕೊಳ್ಳಿ, ಶಿವರಾಜ ಚೌಗಲಾ, ರಾಮತೀರ್ಥ ಜೋಶಿ, ಬಸವರಾಜ ಹಂಪಣ್ಣವರ, ಸೋಮಯ್ಯ ವಡಿಯರ ಚಂದ್ರಶೇಖರ, ಅಮ್ಮಿನಬಾವಿ, ಬಾಬು ಕಾಳೆ ಇತರರು ಉಪಸ್ಥಿತರಿದ್ದರು.