ಲೋಕಾಪುರ ಕೆ.ಎಸ್.ಆರ್.ಟಿ.ಸಿ. ಬಸ್ ನಿರ್ವಾಹಕ ಎ.ಎಸ್.ಕಂಬಾರ ಅವರು ಪ್ರಯಾಣಿಕರಿಗೆ ಪರ್ಸ್ ಮರಳಿಸಿದರು. ಈ ವೇಳೆ ಘಟಕದ ವ್ಯವಸ್ಥಾಪಕರು ಹಾಗೂ ಸಿಬ್ಬಂದಿ ಇದ್ದರು. | Kannada Prabha
Image Credit: KP
ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸ್‌ನ್ನು ನಿರ್ವಾಹಕ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಕನ್ನಡಪ್ರಭ ವಾರ್ತೆ ಲೋಕಾಪುರ
ಮಹಿಳಾ ಪ್ರಯಾಣಿಕರೊಬ್ಬರು ಬಸ್‌ನಲ್ಲಿ ಬಿಟ್ಟುಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದ ಪರ್ಸ್‌ನ್ನು ನಿರ್ವಾಹಕ ಮರಳಿಸಿ ಮಾನವೀಯತೆ ಮೆರೆದಿದ್ದಾರೆ.
ಲೋಕಾಪುರದಿಂದ-ಹೊಸಕೋಟೆ ಮಾರ್ಗದಲ್ಲಿ ಪ್ರಯಾಣಿಸುವಾಗ ಮಹಿಳಾ ಪ್ರಯಾಣಿಕರೊಬ್ಬರು ಚಿನ್ನಾಭರಣ ಇದ್ದ ಬ್ಯಾಗ್ ಮರೆತು ಹೋಗಿದ್ದರು. ಎಲ್ಲರೂ ಬಸ್ ಇಳಿದ ಬಳಿಕ ಬ್ಯಾಗ್ ಇರುವುದನ್ನು ಗಮನಿಸಿದ ನಿರ್ವಾಹಕ ಎ.ಎಸ್. ಕಂಬಾರ ಅವರು ಪರ್ಸ್ ತೆಗೆದುಕೊಂಡು ಅದರಲ್ಲಿದ್ದ ದಾಖಲೆಗಳ ಸಹಾಯದಿಂದ ಪ್ರಯಾಣಿಕರನ್ನು ಪತ್ತೆ ಹಚ್ಚಿ ಘಟಕಕ್ಕೆ ಕರೆಸಿ ಪರ್ಸ್ ಮರಳಿಸಿದ್ದಾರೆ,
ನಿರ್ವಾಹಕ ಎ.ಎಸ್.ಕಂಬಾರ ಕಾರ್ಯಕ್ಕೆ ಪ್ರಯಾಣಿಕ ಮತ್ತು ಮುಧೋಳ ಘಟಕದ ಕೆ.ಎಸ್.ಆರ್.ಟಿ.ಸಿ. ಸಿಬ್ಬಂದಿ, ನಿರ್ವಾಹಕ ಕಂಬಾರ ಅವರಿಗೆ ಅಭಿನಂದನೆ ಸಲ್ಲಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.