ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಹಿಂದೂ ಸಂಪ್ರದಾಯವನ್ನು ಕಲಿಸುವುದು ಉತ್ತಮವಾಗಿದೆ ಎಂದು ಬೂಕನಬೆಟ್ಟದ ಪ್ರಧಾನ ಅರ್ಚಕರಾದ ದೀಪು ರಂಗರಾವ್ ತಿಳಿಸಿದ್ದಾರೆ. ತಾಲೂಕಿನ ಬಾಗೂರು ಹೋಬಳಿ ಎಂ. ಶಿವರದಲ್ಲಿರುವ ಜ್ಞಾನಜ್ಯೋತಿ ಎಜುಕೇಶನ್ ಟ್ರಸ್ಟ್ ಹಾಗೂ ವಿದ್ಯಾಸ್ಫೂರ್ತಿ ಇಂಟರ್‌ನ್ಯಾಷನಲ್ ಶಾಲಾ ಆವರಣದಲ್ಲಿ ನಡೆದ ಅಕ್ಷರ ಅಭ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರತಿಯೊಬ್ಬ ಪೋಷಕರು ಕೂಡ ತಮ್ಮ ತಮ್ಮ ಮಕ್ಕಳಿಗೆ ಹಿಂದೂ ಸಂಪ್ರದಾಯವನ್ನು ಕಲಿಸುವುದು ಉತ್ತಮವಾಗಿದೆ. ಏಕೆಂದರೆ ಹಿಂದೂ ಸಾಂಪ್ರದಾಯಿಕ ಪದ್ಧತಿಯು ದಿನೇ ದಿನೇ ಕಾಣೆಯಾಗುತ್ತಿದೆ. ನಾವು ಹಿಂದೂ ಧರ್ಮದಲ್ಲಿ ಹುಟ್ಟಿ ಇಂದು ಸಂಪ್ರದಾಯವನ್ನು ಪಾಲನೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಅದೇ ರೀತಿ ಮಕ್ಕಳು ಹುಟ್ಟಿದ ದಿನದಿಂದಲೂ ಬೆಳೆದು ದೊಡ್ಡವರಾಗುವವರೆಗೆ ಪ್ರತಿಯೊಂದು ವಿಚಾರದಲ್ಲಿ ಭಾಗವಹಿಸುತ್ತೀರಾ. ನಮ್ಮ ಮಕ್ಕಳ ನಾಮಾಂಕಿತ ಮಾಡುವಾಗ ಕೂಡ ವಿಜೃಂಭಣೆಯಿಂದ ಮಾಡುತ್ತೀರಾ. ಆದರೆ ಶಾಲೆಗೆ ಸೇರಿಸಿದ ದಿನದಿಂದ ತಮ್ಮ ಮಕ್ಕಳಿಗೆ ಅಭ್ಯಾಸದ ಕಾರ್ಯವನ್ನು ಯಾರೂ ಕೂಡ ಮಾಡುವುದಿಲ್ಲ. ಆದರೆ ಶಾಲೆಯ ವತಿಯಿಂದ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸದಲ್ಲಿ ಮಕ್ಕಳು ತೊಡಗಲಿ ಎಂದು ಶಾಲೆ ವತಿಯಿಂದ ಪಠ್ಯದ ಅಭ್ಯಾಸವನ್ನು ಮಾಡಿಸುತ್ತಾರೆ. ಇದನ್ನು ಕೂಡ ನಾವು ಗಮನಿಸಬೇಕು.ಪೋಷಕರು ತಮ್ಮ ಮಕ್ಕಳನ್ನು ಮನೆಯಲ್ಲಿ ಯಾವ ರೀತಿ ಲಾಲನೆ- ಪಾಲನೆ ಮಾಡುತ್ತಾರೋ ಅದೇ ರೀತಿ ಶಾಲೆಯಲ್ಲಿ ಕೂಡ ಶಿಕ್ಷಕರು ಮಕ್ಕಳನ್ನು ಲಾಲನೆ - ಪಾಲನೆ ಮತ್ತು ಪೋಷಣೆಯನ್ನು ಮಾಡಿ ಉತ್ತಮವಾದ ವಿದ್ಯಾವಂತರನ್ನಾಗಿ ಮಾಡಲು ಬಹಳಷ್ಟು ಶ್ರಮವಹಿಸುತ್ತಾರೆ. ಆದರೆ ಮಕ್ಕಳು ಹೆಚ್ಚು ಸಮಯ ಮನೆಯಲ್ಲಿ ಪೋಷಕರೊಂದಿಗೆ ಇರುತ್ತಾರೆ ಅದನ್ನು ಗಮನದಲ್ಲಿಟ್ಟುಕೊಂಡು ಎಷ್ಟು ಹೊತ್ತು ಮಕ್ಕಳಿಗೆ ಓದುವರಲ್ಲಿ ಗಮನ ಹರಿಸುವುದು ಉತ್ತಮವಾಗಿದೆ ಎಂದರು.ಇದೇ ಸಂದರ್ಭದಲ್ಲಿ ವಿದ್ಯಾ ಸ್ಫೂರ್ತಿ ಇಂಟರ್‌ನ್ಯಾಷನಲ್ ಶಾಲೆಯ ಸಂಸ್ಥಾಪಕರಾದ ಗಾಯಿತ್ರಿ ಮಂಜುನಾಥ್, ಪತ್ರಕರ್ತರಾದ ಸಿ. ವಿ. ಲೋಹಿತ್, ವಿದ್ಯಾ ಸ್ಫೂರ್ತಿ ಇಂಟರ್‌ನ್ಯಾಷನಲ್ ಶಾಲೆಯ ಮುಖ್ಯೋಪಾಧ್ಯಾಯ ವಿಶ್ವ, ಶಾಲಾ ವ್ಯವಸ್ಥಾಪಕರಾದ ಶರತ್, ಶಿಕ್ಷಕಿ ವಿಜಯಲಕ್ಷ್ಮೀ ರೇವಣ್ಣ, ಕೃತಿಕ ಅನಂತ್ ಹಾಜರಿದ್ದರು.ವಿದ್ಯೆ ಜತೆಗೆ ಮಕ್ಕಳಿಗೆ ಸಂಪ್ರದಾಯಗಳನ್ನು ಕಲಿಸಬೇಕು
ಮಕ್ಕಳು ಹುಟ್ಟಿದ ದಿನದಿಂದಲೂ ಬೆಳೆದು ದೊಡ್ಡವರಾಗುವವರೆಗೆ ಪ್ರತಿಯೊಂದು ವಿಚಾರದಲ್ಲಿ ಭಾಗವಹಿಸುತ್ತೀರಾ. ನಮ್ಮ ಮಕ್ಕಳ ನಾಮಾಂಕಿತ ಮಾಡುವಾಗ ಕೂಡ ವಿಜೃಂಭಣೆಯಿಂದ ಮಾಡುತ್ತೀರಾ. ಆದರೆ ಶಾಲೆಗೆ ಸೇರಿಸಿದ ದಿನದಿಂದ ತಮ್ಮ ಮಕ್ಕಳಿಗೆ ಅಭ್ಯಾಸದ ಕಾರ್ಯವನ್ನು ಯಾರೂ ಕೂಡ ಮಾಡುವುದಿಲ್ಲ. ಆದರೆ ಶಾಲೆಯ ವತಿಯಿಂದ ಮಕ್ಕಳಿಗೆ ಉತ್ತಮವಾದ ವಿದ್ಯಾಭ್ಯಾಸದಲ್ಲಿ ಮಕ್ಕಳು ತೊಡಗಲಿ ಎಂದು ಶಾಲೆ ವತಿಯಿಂದ ಪಠ್ಯದ ಅಭ್ಯಾಸವನ್ನು ಮಾಡಿಸುತ್ತಾರೆ. ಇದನ್ನು ಕೂಡ ನಾವು ಗಮನಿಸಬೇಕು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.