ಸಾರಾಂಶ
ಮುಂಡರಗಿ: ಸಂಸಾರಸ್ಥರಿಗೆ ಮನೆಯಲ್ಲಿ ಮಗು ಹುಟ್ಟಿದರೆ ಅದು ಪುತ್ರೋತ್ಸವ ಆಗುತ್ತದೆ.ಅದೇ ಸನ್ಯಾಸಿಗಳಿಗೆ ಮಠಗಳಲ್ಲಿ ಪುಸ್ತಕಗಳು ಪ್ರಕಟಗೊಂಡರೆ ಅದು ಪುಸ್ತಕೋತ್ಸವವಾಗುತ್ತದೆ ಎಂದು ಕೊಪ್ಪಳದ ಜ.ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.
ಅವರು ಪಟ್ಟಣ ಜ.ಅನ್ನದಾನೀಶ್ವರ ಮಹಾಶಿವಯೋಗಿಗಳ 155ನೇ ಯಾತ್ರಾ ಮಹೋತ್ಸವದ ಧರ್ಮಸಭೆಯ ನೇತೃತ್ವ ವಹಿಸಿ ಮಾತನಾಡಿದರು.ಮನುಷ್ಯನಿಗೆ ಎಂದಿಗೂ ಸದ್ವಿಚಾರ, ಒಳ್ಳೆಯ ಮಾತು ಇದ್ದರೆ ಜ್ಞಾನ ಹೆಚ್ಚುತ್ತ ಜೀವನ ಜಾಗೃತವಾಗಿರುತ್ತದೆ. ಅದೇ ಕೆಟ್ಟ ವಿಚಾರದ ಮಾತುಗಳಿಂದ ಜೀವನ ಹಾಳಾಗುತ್ತದೆ, ಹೀಗಾಗಿ ಸದ್ಭಕ್ತರಲ್ಲಿ ಇಂತಹ ವಿಚಾರ ತುಂಬಲು ಧರ್ಮಸಭೆ ಮತ್ತು ಸ್ವಾಮೀಜಿಗಳ ಹಿತ ವಚನ ಏರ್ಪಡಿಸಲಾಗುತ್ತಿದೆ ಎಂದರು.
ಶಾಸಕ ಡಾ. ಚಂದ್ರು ಲಮಾಣಿ ಮಾತನಾಡಿ, ಪಾಲಕರು ಮಕ್ಕಳಿಗೆ ಅಂಕಗಳ ಗಳಿಕೆಗೆ ಬೆನ್ನು ಬೀಳದೆ, ಸಂಸ್ಕಾರ ಮತ್ತು ಸಂಬಂಧಗಳ ಅರಿವು ಮೂಡಿಸುವ ಮೂಲಕ ಸಮಾಜದಲ್ಲಿ ಉತ್ತಮರಾಗಿ ಜೀವನ ನಡೆಸುವಂತೆ ನೋಡಿಕೊಳ್ಳಬೇಕು. ಅವಶ್ಯಕ್ಕಿಂತ ಹೆಚ್ಚು ಮೋಬೈಲ್ ಗೀಳಿನಿಂದ ವಿದ್ಯಾರ್ಥಿ, ಯುವಕರ ಮನಸ್ಸು ವಿಚಲಿತಗೊಳ್ಳುತ್ತಿದ್ದು, ಇದಕ್ಕೆ ಒಳ್ಳೆಯ ಹವ್ಯಾಸ ಬೆಳೆಸಿಕೊಳ್ಳಬೇಕಿದೆ. ಶ್ರೀಮಠ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಕ್ರಾಂತಿ ಮಾಡಿ ಬಡ ಹಾಗೂ ಮದ್ಯಮ ವರ್ಗದ ಮಕ್ಕಳ ಬಾಳಿಗೆ ಬೆಳಕಾಗಿದ್ದಾರೆ ಎಂದರು.ಹೂವಿನಶಿಗ್ಲಿಯ ಡಾ. ಚನ್ನವೀರಸ್ವಾಮಿಗಳು , ದೊಡ್ಡಯಂಕಣ್ಣ ಯರಾಶಿ ಸೇರಿದಂತೆ ಅನೇಕರು ಮಾತನಾಡಿದರು. ಕಾರ್ಯಕ್ರಮದಲ್ಲಿ ನವದೆಹಲಿಯ ಶ್ರೀಕಂಠ ಚೌಕಿಮಠ ಅವರಿಗೆ ಶ್ರೀಜಗದ್ಗುರು ಅನ್ನದಾನೀಶ್ವರ ಪ್ರತಿಷ್ಠಾನ ಪುರಸ್ಕಾರ ನೀಡಿ ಗೌರವಿಸಲಾಯಿತು. ಗೌರವ ಸ್ವೀಕರಿಸಿದ ಶ್ರೀಕಂಠ ಚೌಕಿಮಠ ಮಾತನಾಡಿ, ಸಮಾಜಕ್ಕಾಗಿ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲವರನ್ನು ಶ್ರೀಮಠ ಗುರುತಿಸಿ ಗೌರವಿಸುವದು ಒಂದು ಕಡೆಯಾದರೆ ಇದು ದೊಡ್ಡ ಜವಾಬ್ದಾರಿ ಹೊರಿಸಿದಂತಾಗಿದೆ ಎಂದರು.
ಡಾ. ಎಸ್.ಎಂ. ಹಿರೇಮಠ ರಚಿಸಿದ ಕರ್ನಾಟಕ ವೀರಶೈವ ಸಾಹಿತಿ ಭಾಗ 1 ಹಾಗೂ 2 ಬಿಡುಗಡೆಗೊಳಿಸಲಾಯಿತು. ಇದೇ ಸಂದರ್ಭದಲ್ಲಿ ಪೂಜ್ಯರು ರಚಿಸಿದ ಶ್ರೀಸನ್ನಿಧಿಯ ಗುರುಬೋಧೆ ಭಾಗ 2 ಕೃತಿ ಸಹ ಬಿಡುಗಡೆಗೊಳಿಸಲಾಯಿತು. ಜ.ಡಾ. ಅನ್ನದಾನೀಶ್ವರ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು.ಉತ್ತರಾಧಿಕಾರಿ ಡಾ. ಮಲಿಕಾರ್ಜುನ ಸ್ವಾಮೀಜಿ, ಕನಕಗಿರಿ ಡಾ. ಚನ್ನಮಲ್ಲ ಸ್ವಾಮೀಜಿ, ಕುಕನೂರ ಮಹಾದೇವ ಸ್ವಾಮೀಜಿ, ಜಾತ್ರಾ ಸಮಿತಿ ಅಧ್ಯಕ್ಷ ವಿ.ಜಿ. ಹಿರೇಮಠ, ಕರಬಸಪ್ಪ ಹಂಚಿನಾಳ, ಡಾ.ಬಿ.ಜಿ. ಜವಳಿ, ಎಂ.ಎಸ್. ಶಿವಶೆಟ್ಟರ, ನಾಗೇಶ ಹುಬ್ಬಳ್ಳಿ, ಹೇಗಿರೀಶ ಹಾವಿನಾಳ, ರವೀಂದ್ರಗೌಡ ಪಾಟೀಲ, ದೇವು ಹಡಪದ, ಶಿವು ವಾಲಿಕಾರ, ಮುದಿಯಪ್ಪ ಕುಂಬಾರ, ಶಿವು ನಾಡಗೌಡರ, ಎಸ್.ಸಿ. ಚಕ್ಕಡಿಮಠ, ಅನುಪಕುಮಾರ ಹಂಚಿನಾಳ, ವಿರೇಶ ಸಜ್ಜನರ, ಮಂಜುನಾಥ ಶಿವಶೆಟ್ಟರ್, ಪ್ರಶಾಂತಗೌಡ ಗುಡದಪ್ಪನವರ, ಗುಡದೀರಪ್ಪ ಲಿಂಬಿಕಾಯಿ ಸೇರಿದಂತೆ ಯಾತ್ರಾ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಸ್.ಎಸ್. ಮಠದ, ಎಸ್.ಎಸ್. ಇನಾಮತಿ, ನಾಗಭೂಷಣ ಹಿರೇಮಠ ನಿರೂಪಿಸಿದರು.