ಸಮಾನತೆ ಸ್ಥಾಪನೆಗೆ ಸಂವಿಧಾನ ನೀಡಿದ ಅಂಬೇಡ್ಕರ್‌: ಡಾ.ರಾಜರತ್ನ

| Published : May 02 2025, 12:11 AM IST

ಸಮಾನತೆ ಸ್ಥಾಪನೆಗೆ ಸಂವಿಧಾನ ನೀಡಿದ ಅಂಬೇಡ್ಕರ್‌: ಡಾ.ರಾಜರತ್ನ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ದೇಶದಲ್ಲಿ ಕೆಳವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂದು ಸಂವಿಧಾನವನ್ನು ನೀಡಿದ್ದಾರೆ ಎಂದು ಡಾ.ಅಂಬೇಡ್ಕರ್‌ ಅವರ ಮೊಮ್ಮಗ ಡಾ.ರಾಜರತ್ನ ಅಂಬೇಡ್ಕರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಡಾ.ಬಾಬಾಸಾಹೇಬ ಅಂಬೇಡ್ಕರ್‌ರವರು ದೇಶದಲ್ಲಿ ಕೆಳವರ್ಗದ ಜನರು ಸಹ ಸಮಾನತೆಯಿಂದ ಬದುಕಬೇಕೆಂದು ಸಂವಿಧಾನವನ್ನು ನೀಡಿದ್ದಾರೆ ಎಂದು ಡಾ.ಅಂಬೇಡ್ಕರ್‌ ಅವರ ಮೊಮ್ಮಗ ಡಾ.ರಾಜರತ್ನ ಅಂಬೇಡ್ಕರ್‌ ಹೇಳಿದರು.

ನಗರದ ಅಂಬೇಡ್ಕರ್ ವೃತ್ತದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯುತ್ಸವ ನಿಮಿತ್ತ ಅಂಬೇಡ್ಕರ್ ಹಬ್ಬ ಹಾಗೂ ಬೃಹತ್ ಜನಜಾಗೃತಿ ಸಮಾವೇಶ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಚಮ್ಮಾರ, ಹಡಪದ, ಮಾದಿಗ ಪ್ರತಿಯೊಂದು ಸಮಾಜದ ಮಹಿಳೆಯರು ನಮ್ಮ ಮಕ್ಕಳು ಉನ್ನತ ಸ್ಥಾನ ಪಡೆಯಬೇಕೆಂಬ ಅವರ ಕನಸನ್ನು ಸಂವಿಧಾನ ನನಸು ಮಾಡಿದೆ. ಸಂವಿಧಾನದಲ್ಲಿ ಉಲ್ಲೇಖಿಸಿದ ಹಾಗೆ ಜಾತಿಯಿಂದ ತುಳಿತಕ್ಕೊಳಪಟ್ಟವರ ಮಕ್ಕಳು ಸಹ ಸುಪ್ರೀಂಕೋರ್ಟ್ ನ್ಯಾಯಾಧೀಶರು, ವಕೀಲರು, ಡಾಕ್ಟರ್, ಎಂಜಿನಿರ್‌ ಆಗಿದ್ದಾರೆ ಎಂದು ಹೇಳಿದರು.

ವಿಶ್ವಸಂಸ್ಥೆಯಲ್ಲಿ ನಡೆಯುವತ್ತಿದ್ದ ಸಮ್ಮೇಳನದಲ್ಲಿ ಚೀನಾದೇಶದ ಅಧಿಕಾರಿಯೊಬ್ಬ ಡಾ.ಅಂಬೇಡ್ಜರ್‌ ಅವರ ಕೊರಳಲ್ಲಿದ್ದ ಭಾರತ ದೇಶದ ಚಿಹ್ನೆ ನೋಡಿ ನೀವು ಡಾ.ಅಂಬೇಡ್ಕರ್‌ ಅವರ ದೇಶ ಭಾರತದವರಾ ಎಂದು ಪ್ರಶ್ನಿಸಿದನಂತೆ ಅಂದರೆ ಅವರ ಖ್ಯಾತಿ ವಿಶ್ವದೆಲ್ಲೆಡೆ ವ್ಯಾಪಿಸಿತ್ತು. 147 ದೇಶಗಳ ಸಮ್ಮೇಳನದಲ್ಲಿ ಡಾ.ಬಾಬಾಸಾಹೇಬರು ಗೌರವಕ್ಕೆ ಪಾತ್ರರಾಗಿದ್ದರು ಎಂದು ವಿವರಿಸಿದರು. ಡಾ.ಅಂಬೇಡ್ಕರ್ ಅವರು ಅನೇಕ ಹುದ್ದೆ ಅಲಂಕರಿಸಿದ್ದರು. ಮೈಸೂರಿನ ರಾಜರು 9 ಎಕರೆ ಭೂಮಿ ಉಳಿಮಿಗೆಂದು ನೀಡಿದರು. ಯಾವುದೇ ಹಣ, ಆಸ್ತಿಗೆ ಆಸೆಗೆ ಒಳಪಡಲಿಲ್ಲ. ಅವರೊಬ್ಬರು ಸಾದಾ ಸೀದಾ ವ್ಯಕ್ತಿಯಾಗಿದ್ದರು. ದೇಶದ ಜನರು ಸಮಾನತೆಯಿಂದ ಇರಬೇಕೆಂಬ ಕನಸು ಕಂಡಿದರು. ಬೌದ್ದ ಧರ್ಮದಲ್ಲಿ ಎಲ್ಲರೂ ಕೆಲಸ ಮಾಡಬೇಕು. ದೇಶದಲ್ಲಿನ ಮಕ್ಕಳು ವಿದ್ಯಾವಂತರು ಆಗಬೇಕೆಂಬುದು ಅವರ ಕನಸಾಗಿತ್ತು ಎಂದು ಹೇಳಿದರು.

ಕುಡಚಿ ಶಾಸಕ ಮಹೇಶ ತಮ್ಮನ್ನವರ, ಮಾಜಿ ಶಾಸಕ ಆನಂದ ನ್ಯಾಮಗೌಡ, ಉದ್ಯಮಿ ತೊಫಿಕ್‌ ಪಾರ್ಥನಳ್ಳಿ, ತಾಪಂ ಇಒ ಸಂಜು ಜುನ್ನೂರ ಮಾತನಾಡಿದರು, ಸಿದ್ದು ಮೀಶಿ, ರಾಹುಲ್ ಕಲೂತಿ, ಸುಶೀಲಕುಮಾರ ಬೆಳಗಲಿ, ರಿಯಾಜ್‌ ತೆಲಸಂಗ, ಈಶ್ವರ ವಾಳೇನ್ನವರ, ನಾಗಪ್ಪ ಸನದಿ, ಅಜೇಯ ಕಡಪಟ್ಟಿ, ಯಮನೂರ ಮೂಲಂಗಿ ಸೇರಿದಂತೆ ಅನೇಕರು ವೇದಿಕೆಯಲ್ಲಿ ಉಪಸ್ಥಿತರಿದರು. ಯಮನಪ್ಪ ಗುಣದಾಳ ಪ್ರಾಸ್ತಾವಿಕ ಮಾತನಾಡಿದರು. ಕರಣಕುಮಾರ ಮೌರ್ಯ, ಮಮತಾ ನಧಾಪ್‌ ನಿರೂಪಿಸಿದರು. ಶಶಿಧರ ಮೀಶಿ, ಪವಣ ಸುತ್ತಾರ ವಂದಿಸಿದರು. ಸಂಜೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂರ್ತಿ ಮೆರವಣಿಗೆ ಪ್ರಮುಖ ರಸ್ತೆಯ ಮೂಲಕ ಸಂಚರಿಸಿತು.