ಈಶ್ವರ ಖಂಡ್ರೆ ಅವರ ಹೆಸರಿಗೆ ಮಸಿ ಬಳಿಯುವ ಹುನ್ನಾರ

| Published : May 11 2025, 01:16 AM IST

ಸಾರಾಂಶ

ಈಶ್ವರ ಖಂಡ್ರೆಯವರು ಈ ಭಾಗದ ಒಬ್ಬ ಪ್ರಶ್ನಾತೀತ ನಾಯಕರು. ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಲ್ಲಿ ಯಡಿಯೂರಪ್ಪ ಅವರ ನಂತರ ಈಶ್ವರ ಖಂಡ್ರೆಯವರನ್ನು ಕಾಣಬಹುದಾಗಿದೆ.

ಕನ್ನಡಪ್ರಭ ವಾರ್ತೆ ಬೀದರ್ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆಯವರ ಹೆಸರಿಗೆ ಮಸಿ ಬಳಿಯುವ ಹುನ್ನಾರ ನಡೆಯುತ್ತಿದ್ದು, ಅವರ ಮೇಲಿನ ಆರೋಪ ನಿರಾಧಾರವಾಗಿದೆ ಎಂದು ಮಾದಾರ ಚನ್ನಯ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ ಹೇಳಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವ ಅವರು, ಈಶ್ವರ ಖಂಡ್ರೆಯವರು ಈ ಭಾಗದ ಒಬ್ಬ ಪ್ರಶ್ನಾತೀತ ನಾಯಕರು. ಲಿಂಗಾಯತ ಸಮಾಜದ ಅಗ್ರಗಣ್ಯ ನಾಯಕರಲ್ಲಿ ಯಡಿಯೂರಪ್ಪ ಅವರ ನಂತರ ಈಶ್ವರ ಖಂಡ್ರೆಯವರನ್ನು ಕಾಣಬಹುದಾಗಿದೆ. ಉತ್ತಮ ಅಭಿವೃದ್ಧಿ ಕೌಶಲ್ಯಯುಳ್ಳ ರಾಜಕಾರಣಿಯೂ ಹೌದು. ಭವಿಷ್ಯದಲ್ಲಿ ಖಂಡ್ರೆಯವರು ಕೆಪಿಸಿಸಿ ಅಧ್ಯಕ್ಷರಾಗುವ ಹಾಗೂ ಮುಖ್ಯಮಂತ್ರಿಯಾಗುವ ಎಲ್ಲ ಲಕ್ಷಣಗಳು ಅವರಲ್ಲಿವೆ. ಇಂಥವರ ಮೇಲೆ ಸುಳ್ಳು ಆರೋಪ ಮಾಡುವುದು ಸರಿಯಿಲ್ಲ ಎಂದರು.ಇತ್ತೀಚೆಗೆ ಖಂಡ್ರೆಯವರ ಏಳಿಗೆ ಸಹಿಸದ ಕೆಲವರು ಅವರ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಖಂಡ್ರೆಯವರೆ ಸ್ವತಃ ಕೇಸ್ ದಾಖಲಿಸುತ್ತಿದ್ದಾರೆ ಎನ್ನುವಂತೆ ಬಿಂಬಿಸಲಾಗುತ್ತಿದೆ. ತಪ್ಪಿತಸ್ಥರು ಯಾರಿದ್ದರೂ ಅವರನ್ನು ಶಿಕ್ಷಿಸುವ ಕೆಲಸ ಪೊಲೀಸರು ಮಾಡಿದ್ದಾರೆ. ಪೊಲೀಸ್ ಇಲಾಖೆಯ ಮೇಲೆ ಗೂಬೆ ಕೂರಿಸುತ್ತಿರುವುದು ತಪ್ಪು. ಇತ್ತೀಚೆಗೆ ಹೊನ್ನಿಕೆರಿ ಅರಣ್ಯ ಪ್ರದೇಶದಲ್ಲಾದ ಹತ್ಯೆ ಹಾಗೂ ಆದರ್ಶ ಕಾಲೋನಿಯಲ್ಲಿನ ಮನೆಯಲ್ಲಾದ ದೊಡ್ಡ ದರೊಡೆ ಭೇದಿಸುವಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಯಶಸ್ವಿಯಾಗಿದೆ ಎಂದರು.ಈ ಹಿಂದೆ ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ ಅವರು ಸಚಿವರಾಗಿದ್ದಾಗ ಹುಡಗಿಯಲ್ಲಿ ಅಂಬೇಡ್ಕರ್ ಮೂರ್ತಿಗೆ ಆದ ಅವಮಾನ ಸಂದರ್ಭದಲ್ಲಿ ಆ ಘಟನೆ ವಿರೋಧಿಸಿದ್ದಕ್ಕೆ ನನ್ನನ್ನು ಸೇರಿಸಿ 150ಕ್ಕೂ ಅಧಿಕ ದಲಿತ ಮುಖಂಡರ ಮೇಲೆ ಪ್ರಕರಣ ದಾಖಲಿಸಿದ್ದರು. ಹಾಗಾಗಿ ಎಲ್ಲ ಘಟನೆಗಳಿಗೆ ಖಂಡ್ರೆಯವರನ್ನೇ ಟಾರ್ಗೆಟ್ ಮಾಡುವುದು ಮುರ್ಖತನದ ಪರಮಾವಧಿ ಎಂದರು.ಇತ್ತೀಚೆಗೆ ಭಾಲ್ಕಿ ತಾಲೂಕಿನ ಖುದಾಂಪುರ ಗ್ರಾಮದಲ್ಲಿ ದಲಿತರ ಮೇಲಾದ ದೌರ್ಜನ್ಯಕ್ಕೆ ಒಂದೇ ದಿನದಲ್ಲಿ ನ್ಯಾಯ ಕೊಡಿಸಿದರು. ಹಿಂದೆ ದಲಿತರ ಮೇಲಾದ ಅನೇಕ ದೌರ್ಜನ್ಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿ ಸಮಸ್ಯೆ ಇತ್ಯರ್ಥಡಿಸಿದ ಕೀರ್ತಿ ಖಂಡ್ರೆಯವರಿಗೆ ಸಲ್ಲುತ್ತದೆ ಎಂದು ರಮೇಶ ತಿಳಿಸಿದರು.ಡಿ.ಎಸ್.ಎಸ್ (ಎನ್.ಮೂರ್ತಿ ಬಣ) ಜಿಲ್ಲಾಧ್ಯಕ್ಷ ಹರಿಹರ ಗೋಖಲೆ, ಡಾ.ಬಾಬು ಜಗಜೀವನರಾಮ ಸೇವಾ ಸಂಘದ ಅಧ್ಯಕ್ಷ ಯುವರಾಜ ಭೆಂಡೆ, ಸಮಾಜದ ಮುಖಂಡರಾದ ಮಹೇಶ ಹಿರೇಮನಿ, ಸಂಜಯ ಲಂಜವಾಡ, ಸಂಜು ಉಜನಿ, ಪಪ್ಪುರಾಜ ನೇಳಗೆ, ಸತೀಶ ಮಾನೆ, ನಾಗರಾಜ, ಮಲ್ಲಿಕಾರ್ಜುನ ಭಾವಿದೊಡ್ಡಿ, ಶಿವಕಾಂತ ಭೋಸಗಾ, ರೋಹಿತ ಕಟ್ಟಿತುಗಾಂವ ಪತ್ರಿಕಾಗೋಷ್ಟಿಯಲ್ಲಿದ್ದರು. --ಚಿತ್ರ 9ಬಿಡಿಆರ್60ಬೀದರಿನ ಪತ್ರಿಕಾ ಭವನದಲ್ಲಿ ಶುಕ್ರವಾರ ಮಾದಾರ ಚನ್ನಯ್ಯ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ರಮೇಶ ಕಟ್ಟಿತುಗಾಂವ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.--