ಕದನ ವಿರಾಮವನ್ನು ಹಿಂದೂಗಳು ಒಪ್ಪಲು ಸಾಧ್ಯವೇ ಇಲ್ಲ: ಮುತಾಲಿಕ್

| Published : May 11 2025, 01:16 AM IST

ಸಾರಾಂಶ

ಅಂತಾರಾಷ್ಟ್ರೀಯ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಒತ್ತಡಕ್ಕೆ ಮಣಿದು ಕದನ ವಿರಾಮ ಘೋಷಿಸಿದ್ದು ಸರಿಯಲ್ಲ. ನಮ್ಮ ಆಂತರಿಕ ಭದ್ರತೆ ವಿಷಯದಲ್ಲಿ ತಲೆಹಾಕಲು ಟ್ರಂಪ್‌ ಸೇರಿದಂತೆ ಯಾರೂ ಸಂಬಂಧವಿಲ್ಲ. ಪ್ರಧಾನಿ ಮೋದಿ ಅವರು ಪಾಕಿಸ್ತಾನ ಇನ್ಮುಂದೆ ಉಸಿರೆತ್ತದಿರುವ ಹಾಗೆ ಮಾಡುತ್ತಾರೆ ಎಂದು ಖುಷಿ ಪಟ್ಟಿದ್ದೆವು. ಆದರೆ, ನೀವು ಹಿಂದೂಗಳಿಗೆ ವಿಶ್ವಾಸದ್ರೋಹ ಮಾಡಿದ್ದೀರಿ.

ಹುಬ್ಬಳ್ಳಿ: ಭಾರತ- ಪಾಕಿಸ್ತಾನಗಳು ಜಂಟಿಯಾಗಿ ಮಾಡಿಕೊಂಡಿರುವ ಕದನ ವಿರಾಮವನ್ನು ಯಾವುದೇ ಕಾರಣಕ್ಕೆ ಒಪ್ಪಲು ಸಾಧ್ಯವಿಲ್ಲ. ಇದು ತಪ್ಪು ನಿರ್ಧಾರ, 100 ಕೋಟಿ ಹಿಂದೂಗಳು ಈ ನಿರ್ಧಾರ ಒಪ್ಪುಲು ಸಾಧ್ಯವೇ ಇಲ್ಲ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್‌ ಹೇಳಿದ್ದಾರೆ.

ಉಭಯ ದೇಶಗಳ ಮಧ್ಯದ ಕದನ ವಿರಾಮ ಘೋಷಣೆ ಕುರಿತಂತೆ ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.

ಕೇವಲ 28 ಜನರ ಪ್ರತೀಕಾರವಲ್ಲ, ಕಳೆದ 78 ವರ್ಷಗಳಿಂದ ಮಾಡಿದ ಕೌರ್ಯ, ಜನರ ರಕ್ತಹರಿಸಿದಕ್ಕೆ ಪಾಕಿಸ್ತಾನ ಸಂಪೂರ್ಣ ನಿರ್ನಾಮ ಮಾಡುವ ವರೆಗೆ ಯುದ್ಧ ನಿಲ್ಲಿಸಬಾರದಾಗಿತ್ತು. ಪ್ರಧಾನಿ ಮೋದಿ ಅವರು ಈ ವಿಷಯದಲ್ಲಿ ತಪ್ಪು ಹೆಜ್ಜೆ ಇಡುತ್ತಿದ್ದಾರೆ. ಪಾಕಿಗಳು ಈಗ ತಣ್ಣಗಿದ್ದು, ಮುಂದೆ ಅಮಾಯಕರ ಜೀವ ತೆಗೆಯುತ್ತಾರೆ. ಹೀಗಾಗಿ, ಈಗ ಹಿಂದೆ ಸರಿಯಬಾರದು. ಯುದ್ಧ ಮಾಡಲೆಂದೇ ನಿಮ್ಮನ್ನು ನಾವು ಅಧಿಕಾರಕ್ಕೆ ತಂದಿದ್ದೇವೆ. ಹೀಗಿರುವಾಗ ಕದನ ವಿರಾಮ ಒಪ್ಪುವುದಿಲ್ಲ. ಇದರ ವಿರುದ್ಧ ಹಿಂದೂಗಳು ಆಕ್ರೋಶ ವ್ಯಕ್ತಪಡಿಸುವುದು ನಿಶ್ಚಿತ ಎಂದರು.

ಅಂತಾರಾಷ್ಟ್ರೀಯ ಮತ್ತು ಅಮೆರಿಕ ಅಧ್ಯಕ್ಷ ಡೋನಾಲ್ಡ್‌ ಟ್ರಂಪ್‌ ಒತ್ತಡಕ್ಕೆ ಮಣಿದು ಕದನ ವಿರಾಮ ಘೋಷಿಸಿದ್ದು ಸರಿಯಲ್ಲ. ನಮ್ಮ ಆಂತರಿಕ ಭದ್ರತೆ ವಿಷಯದಲ್ಲಿ ತಲೆಹಾಕಲು ಟ್ರಂಪ್‌ ಸೇರಿದಂತೆ ಯಾರೂ ಸಂಬಂಧವಿಲ್ಲ. ಪ್ರಧಾನಿ ಮೋದಿ ಅವರು ಪಾಕಿಸ್ತಾನ ಇನ್ಮುಂದೆ ಉಸಿರೆತ್ತದಿರುವ ಹಾಗೆ ಮಾಡುತ್ತಾರೆ ಎಂದು ಖುಷಿ ಪಟ್ಟಿದ್ದೆವು. ಆದರೆ, ನೀವು ಹಿಂದೂಗಳಿಗೆ ವಿಶ್ವಾಸದ್ರೋಹ ಮಾಡಿದ್ದೀರಿ ಎಂದು ಅಸಮಾಧಾನ ಹೊರಹಾಕಿದ್ದಾರೆ.