ಮೇಗಲದೊಡ್ಡಿ ಡೇರಿಗೆ ಅವಿರೋಧ ಆಯ್ಕೆ

| Published : Sep 09 2024, 01:32 AM IST

ಸಾರಾಂಶ

ಮೇಗಲದೊಡ್ಡಿ ಡೇರಿಗೆ ಅವಿರೋಧ ಆಯ್ಕೆ

ಕನ್ನಡಪ್ರಭ ವಾರ್ತೆ ರಾಮನಗರ

ಬಿಡದಿ ಹೋಬಳಿ ಮೇಗಲದೊಡ್ಡಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ಸುಧಾಕರ, ಉಪಾಧ್ಯಕ್ಷರಾಗಿ ಮಂಜುಳಮ್ಮ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಂಘದ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಗಳ ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಾದ ಸುಧಾಕರ, ಉಪಾಧ್ಯಕ್ಷ ಸ್ಥಾನಕ್ಕೆ ಮಂಜುಳಮ್ಮ ಅವರನ್ನು ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿದ್ದ ಮಂಜುನಾಥ್ ಅವಿರೋಧ ಆಯ್ಕೆಯನ್ನು ಘೋಷಿಸಿದರು. ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ದೇಶಕರಾದ ಗುಂಡಮ್ಮತಿಮ್ಮಯ್ಯ, ರಾಮಕೃಷ್ಣ, ಮಲ್ಲೇಶಯ್ಯ, ರಮೇಶ್, ಸುಶೀಲಮ್ಮ ಅಯ್ಯಪ್ಪ, ಕೃಷ್ಣಪ್ಪ ಪಿ.ಎಂ, ಶಂಕರ್ ಭಾಗವಹಿಸಿದ್ದರು. ಓರ್ವ ಸದಸ್ಯ ಗೈರಾಗಿದ್ದರು. ಸಂಘದ ಸಿಇಓ ಶ್ರೀನಿವಾಸ್ ಇದ್ದರು. ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿದ ಕಾಂಗ್ರೆಸ್ ಮುಖಂಡ ಕರಡಿಗೌಡನದೊಡ್ಡಿ ಉಮಾಶಂಕರ್, ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘ ಒಂದು ದೇವಾಲಯವಿದ್ದಂತೆ. ಆ ದೇವಾಲಯ ಎನ್ನುವ ಸಹಕಾರಿ ಕೇತ್ರದಲ್ಲಿ ಸಹಕಾರ, ಸಹಬಾಳ್ವೆ ಬಹಳ ಮುಖ್ಯವಾಗಲಿದೆ. ಇವುಗಳನ್ನು ಅಳವಡಿಸಿಕೊಂಡು ಸಂಘದ ಅಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿ ಶ್ರಮಿಸಿದರೆ, ಸದಸ್ಯರು ಮತ್ತು ಸಂಘವನ್ನು ಅಭಿವೃದ್ದಿಯತ್ತ ಕೊಂಡೊಯ್ಯಲು ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲರೂ ಎಲ್ಲ ನಿರ್ದೇಶಕರು ಒಗ್ಗಟ್ಟಿನಿಂದ ಒಗ್ಗೂಡಿ ಕೆಲಸ ನಿರ್ವಹಿಸಿ ಎಂದು ಕಿವಿಮಾತು ಹೇಳಿದರು. ನೂತನ ಅಧ್ಯಕ್ಷ ಸುಧಾಕರ ಮಾತನಾಡಿ, ಅವಿರೋಧವಾಗಿ ಆಯ್ಕೆಯಾಗಲು ಸಹಕರಿಸಿದ ಸಂಘದ ಎಲ್ಲ ನಿರ್ದೇಶಕರು ಮತ್ತು ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅಲ್ಲದೆ ಎಲ್ಲರ ಸಲಹೆ-ಮಾರ್ಗದರ್ಶನ ಪಡೆದು ಸಂಘದ ಪ್ರಗತಿಗೆ ಶ್ರಮಿಸುವು ದಾಗಿ ಹೇಳಿದರು.ಈ ವೇಳೆ ಗೋಪಳ್ಳಿ ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷ ತಿಮ್ಮಯ್ಯ, ಸದಸ್ಯರಾದ ಉರಗಹಳ್ಳಿ ಗೋಪಾಲ್, ಶಿವಲಿಂಗಯ್ಯ, ಮುಖಂಡ ರಾಜಣ್ಣ ಮತ್ತಿತರರು ಹಾಜರಿದ್ದು ಅಭಿನಂದಿಸಿದರು.