ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಜೊತೆಗೆ ತಾತ್ಕಾಲಿಕವಾಗಿ ಸರದಿ ಸಾಲಿನಲ್ಲಿ ಬರುವ ಪ್ರವಾಸಿ ಭಕ್ತಾದಿಗಳಿಗೆ ಬಿಸಿಲು, ಮಳೆ ಬೀಳದಂತೆ ತಡೆಯುವ ಸಲುವಾಗಿ 18 ಚಾವಣಿ ಬ್ಯಾರಿಕೇಡ್ ಗಳನ್ನು ಹಾಕಿಸಲಾಗಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಪಟ್ಟಣದ ಶ್ರೀರಂಗನಾಥಸ್ವಾಮಿ ದೇವಸ್ಥಾನದಲ್ಲಿ ಧನುರ್ಮಾಸದಂದು ಅನ್ನದಾಸೋಹ ನಡೆಯಲಿದೆ ಎಂದು ದೇವಸ್ಥಾನ ಕಾರ್ಯನಿರ್ವಾಹಕಾಧೀಕಾರಿ ಎಂ.ಉಮಾ ನಟಶೇಖರ್ ತಿಳಿಸಿದ್ದಾರೆ.

ಶಾಸಕ ರಮೇಶ್ ಬಂಡಿಸಿದ್ದೇಗೌಡರ ಸಲಹೆ ಮತ್ತು ಪುರಾತತ್ವ ಇಲಾಖೆಗಳ ಸಹಯೋಗದಲ್ಲಿ ಶ್ರೀಗಜೇಂದ್ರ ಮೋಕ್ಷ ಮಂಟಪ ಮತ್ತು ರಥದ ಪ್ಲಾಟ್ ಫಾರಂ ಕಾಮಗಾರಿ ಮಾಡಿಸಲಾಗುತ್ತಿದೆ. ದೇವಾಲಯಕ್ಕೆ ಬರುವ ಭಕ್ತಾದಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವ ಜೊತೆಗೆ ತಾತ್ಕಾಲಿಕವಾಗಿ ಸರದಿ ಸಾಲಿನಲ್ಲಿ ಬರುವ ಪ್ರವಾಸಿ ಭಕ್ತಾದಿಗಳಿಗೆ ಬಿಸಿಲು, ಮಳೆ ಬೀಳದಂತೆ ತಡೆಯುವ ಸಲುವಾಗಿ 18 ಚಾವಣಿ ಬ್ಯಾರಿಕೇಡ್ ಗಳನ್ನು ಹಾಕಿಸಲಾಗಿದೆ.

ಅಲ್ಲದೇ, ಡಿ.17ರಿಂದ ಪ್ರತಿದಿನ 11.30 ರಿಂದ 1.30ರ ವರೆಗೆ ದೇವರ ದರ್ಶನಾರ್ಥಿಗಳಿಗೆ ದೇವಾಲಯದ ಆವರಣದಲ್ಲಿ ಪ್ರಸಾದವಾಗಿ ಅನ್ನ ದಾಸೋಹ ಮಾಡಲಾಗುತ್ತಿದೆ. ದಾನಿಗಳು ದಾಸೋಹಕ್ಕೆ ದವಸ-ಧಾನ್ಯಗಳನ್ನು ನೀಡಬಹುದು ಎಂದು ಮನವಿ ಮಾಡಿದರು. ಈ ವೇಳೆ ದೇವಸ್ಥಾನದ ಪ್ರಧಾನ ಅರ್ಚಕ ವಿಜಯಸಾರಥಿ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸೋಮಶೇಖರ್, ಸದಸ್ಯರಾದ ಆಶಾಲತ ಪುಟ್ಟೇಗೌಡ, ಸತೀಶ್ ಸೇರಿದಂತೆ ಇತರರು ಇದ್ದರು.