ವಿಜಯಪುರ: ವಿಕಲಚೇತನರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ 2026ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲು ನಾಮನಿರ್ದೇಶನ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ www.awards.gov.in ಮೂಲಕ ಅನ್ ಲೈನ್ ನಲ್ಲಿ ಸಲ್ಲಿಸುವುದು ಕಡ್ಡಾಯವಾಗಿದೆ. ನಾಮನಿರ್ದೇಶನವು ಪೋರ್ಟಲ್ ನಲ್ಲಿ ಲಭ್ಯವಿರುವ ನಮೂನೆಯಲ್ಲಿ ನಿರ್ದಿಷ್ಟಪಡಿಸಿದಂತೆ ಎಲ್ಲ ವಿವರಗಳನ್ನು ಒಳಗೊಂಡಿಬೇಕು ಮತ್ತು ಗಮನಾರ್ಹ ಹಾಗೂ ಸ್ಫೂರ್ತಿದಾಯಕ ಸಾಧನೆಗಳನ್ನು ನಿರೂಪಣಾ ರೂಪದಲ್ಲಿ ಸ್ಪಪ್ಪವಾಗಿ ಹೈಲೈಟ್ ಮಾಡಬೇಕು. ಸಾಧನೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಹ ಪೋರ್ಟಲ್‌ನಲ್ಲಿ ಅಪ್ಲೋಡ್ ಮಾಡಬೇಕು. ಪುರಸ್ಕಾರದ ವಿಭಾಗಗಳಾದ ಸರ್ವಶ್ರೇಷ್ಠ ದಿವ್ಯಾಂಜನ (ಅತ್ಯುತ್ತಮ ವಿಕಲಚೇತನ ವ್ಯಕ್ತಿ), ಶ್ರೇಷ್ಠ ದಿವ್ಯಾಂಜನ್ (ಉತ್ತಮ ವಿಕಲಚೇತನ ವ್ಯಕ್ತಿ) ಮತ್ತು ಶ್ರೇಷ್ಠ ಸೃಜನಶೀಲ ದಿವ್ಯಾಂಗ ಬಾಲ/ಬಾಲಿಕಾ (ಅತ್ಯುತ್ತಮ ಸೃಜನಶೀಲ ವಿಶೇಷಚೇತನ ಮಗು) ಗಳಿಗೆ ಯುಡಿಐಡಿ ಕಾರ್ಡ/ ವಿಕಲಾಂಗತೆಯ ಪ್ರಮಾಣ ಪತ್ರಗಳನ್ನು ಅಪ್ಲೋಡ್ ಮಾಡುವುದು ಕಡ್ಡಾಯವಾಗಿದೆ. ನಾಮನಿರ್ದೇಶನ ಅರ್ಜಿಗಳನ್ನು ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ www.awards.gov.in ದಲ್ಲಿ 2026ರ ಜುಲೈ 31 ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಭೌತಿಕ ರೂಪದಲ್ಲಿ ಅಥವಾ ಯಾವುದೇ ಇತರ ಮಾಧ್ಯಮದ ಮೂಲಕ ಸಲ್ಲಿಸುವ ಅರ್ಜಿಗಳನ್ನು ಸ್ವೀಕರಿಸಲಾಗುವುದಿಲ್ಲ. ಮಾನದಂಡಗಳು, ರಾಷ್ಟ್ರೀಯ ಪ್ರಶಸ್ತಿಗಳ ಮಾರ್ಗಸೂಚಿ ಹಾಗೂ ಮತ್ತಿತರೆ ಹೆಚ್ಚಿನ ಮಾತಿಗಾಗಿ ಇಲಾಖೆ ವೆಬ್‌ಸೈಟ್ www.depwd.gov.in ಕೋರಲಾಗಿದೆ. ಹಾಗೂ ರಾಷ್ಟ್ರೀಯ ಪುರಸ್ಕಾರ ಪೋರ್ಟಲ್ www.awards.gov.in ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವಿಕಲಚೇತನರ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ವಿಶೇಷಚೇತನರ ಸಬಲೀಕರಣಕ್ಕಾಗಿ ರಾಷ್ಟ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ವಿಜಯಪುರ: ವಿಕಲಚೇತನರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ 2026ನೇ ಸಾಲಿನಲ್ಲಿ ರಾಷ್ಟ್ರ ಪ್ರಶಸ್ತಿ ನೀಡಲು ನಾಮನಿರ್ದೇಶನ ಅರ್ಜಿ ಆಹ್ವಾನಿಸಲಾಗಿದೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
