ಈರಣ್ಣ ಮೆಳ್ಳಿಗೇರಿ ಪ್ರಾಯೋಜಿತ ಬಾಗಲಕೋಟೆಯ ಆಯ್. ಆರ್. ಎಂ ಸುಪರ್ ಕಿಂಗ್ ತಂಡ ಮಹಾಲಿಂಗಪುರ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿ ನಗದು ೨ ಲಕ್ಷ ನಗದಿನೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಈರಣ್ಣ ಮೆಳ್ಳಿಗೇರಿ ಪ್ರಾಯೋಜಿತ ಬಾಗಲಕೋಟೆಯ ಆಯ್. ಆರ್. ಎಂ ಸುಪರ್ ಕಿಂಗ್ ತಂಡ ಮಹಾಲಿಂಗಪುರ ಪ್ರೀಮಿಯರ್ ಲೀಗ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿ ನಗದು ೨ ಲಕ್ಷ ನಗದಿನೊಂದಿಗೆ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.

ಸೋಮವಾರ ನಡೆದ ಅಂತಿಮ ಪಂದ್ಯದಲ್ಲಿ ರನ್ನರ್ ಆಫ್ ೧ಲಕ್ಷ ಹಾಗೂ ಟ್ರೋಫಿ ಪಡೆದ ಮಹಾಲಿಂಗಪುರದ ಬಸವರಾಜ ರಾಯರ್ ಪ್ರಾಯೋಜಿತ ರಾಯರ್ ಚಾಲೆಂಜರ್ಸ್ ತಂಡವನ್ನು ಎದುರಿಸಿ ಶ್ರೇಷ್ಠ ಗೆಲುವನ್ನು ಪಡೆಯಿತು.ನಂತರದ ಸ್ಥಾನಗಳಿಗೆ ಡೇರಿಂಗ್ ಡೆವಿಲ್ಸ್ ೩ನೇಯ ಹಾಗೂ ಮಿಲನ್ ಪೆಂಡಾರಿ ತಂಡ ೪ನೇಯ ಹೀಗೆ ಕ್ರಮವಾಗಿ ಬಹುಮಾನಗಳನ್ನು ಪಡೆದವು.

ಪಂದ್ಯಾವಳಿ ಉದ್ದಕ್ಕೂ ವಯಕ್ತಿಕ ಸಾಧನೆಗೈದ ಬಾಗಲಕೋಟ್ ತಂಡದ ಅನಿಲ ನಾಯಕ ಉತ್ತಮ ಬ್ಯಾಟ್ಸ್ಮನ್ ಜೊತೆಗೆ ಮ್ಯಾನ್ ಆಫ್ ದಿ ಸಿರೀಜ್ ಪ್ರಶಸ್ತಿಗಳನ್ನು ಪಡೆದರೆ,ಡೇರಿಂಗ್ ಡೆವಿಲ್ಸ್ ತಂಡದ ಪರಶುರಾಮ ಚಲುವಾದಿ ಉತ್ತಮ ಬೌಲರ್ ಪ್ರಶಸ್ತಿಯನ್ನು ಬಾಚಿಕೊಂಡರು.

ಕಳೆದ ಬುಧವಾರದಿಂದ ಪಟ್ಟಣದ ಮಹಾತ್ಮಾ ಗಾಂಧಿ ಕ್ರೀಡಾಂಗಣದಲ್ಲಿ ಚಿತ್ರ ನಟ ದಿ.ಪುನೀತರಾಜಕುಮಾರ, ದಿ.ಜಾವೇದ ಭಾಗವಾನ ಸ್ಮರಣಾರ್ಥವಾಗಿ ೬ ದಿನಗಳ ವರೆಗೆ ಜಾಮಿಯಾ ಕ್ರಿಕೆಟ್ ಕ್ಲಬ್ ವತಿಯಿಂದ ಬಾಗಲಕೋಟೆ ಪ್ರಿಮಿಯರ್ ಲೀಗ್ ನಡೆಯಿತು.ಈ ಪಂದ್ಯಾವಳಿಯಲ್ಲಿ ಪ್ರಾಯೋಜಕರ ೧೨ ತಂಡಗಳು ಭಾಗವಹಿಸಿ ಪೈಪೋಟಿಯುತ ಪ್ರದರ್ಶನ ನೀಡಿದವು.

ಕಾಂಗ್ರೆಸ್ ಮಹಿಳಾ ಮುಖಂಡರು, ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕಿ ಸಂಯುಕ್ತ ಪಾಟೀಲ, ಹೆಸ್ಕಾಂ ಸೆಕ್ಷನ್ ಆಫೀಸರ್ ರಾಜೇಶ ಬಾಗೋಜಿ, ಗೋಕಾಕನ ಸಂತೋಷ ಮಾಲಪಾನಿ, ತೇರದಾಳದ ಯುವ ಮುಖಂಡ ಸಚಿನ ಮುರಗುಂಡಿ, ಪತ್ರಕರ್ತ ಜಯರಾಮಶೆಟ್ಟಿ ಪಂದ್ಯಾವಳಿ ಕುರಿತು ಮಾತನಾಡಿದರೆ, ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ರಾಯರ ಅಧ್ಯಕ್ಷೀಯ ಭಾಷಣ ಮಾಡಿದರು. ಇದೆ ಸಮಯ ಸಂಯುಕ್ತ ಪಾಟೀಲ ಮತ್ತು ಕವಿತಾ ಸಿದ್ದು.ಕೊಣ್ಣೂರ ಅವರನ್ನು ಪಂದ್ಯಾವಳಿ ಆಯೋಜಕರು ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶ್ರೀಶೈಲ ಭಜಂತ್ರಿ, ಶ್ರೀಶೈಲಗೌಡ ಪಾಟೀಲ, ಪಾಪಾ ನಾಲಬಂದ, ಹುಚ್ಚೇಶ ವಡ್ಡರ, ಶ್ರೀಕಾಂತ ಮಾಗಿ, ಮಹಾಂತೇಶ ಫನಸಲ್ಕರ್, ಕಿಶೋರ್ ಭಟ್,ಸಮೀರ, ರಮೀಜ್ ಗೋಕಾಕ, ಅಶೋಕ ಜ.ಅಂಗಡಿ, ಇಸಾಕ್ ಐನಾಪೂರ, ಇಲಿಯಾಸ್ ಯಾದವಾಡ, ಜೀತು ಕೆಸರಗೊಪ್ಪ ಅತಿಥಿಗಳಾಗಿ ಭಾಗವಹಿಸಿದ್ದರು. ಪಂದ್ಯಾವಳಿಯ ಸಂಘಟಕರಾದ ಮಹಾದೇವ ಕಡಬಲ್ಲವರ, ಸೈಯದ್ ಶೇಖ, ಏಜಾಜ್ ಯಾದವಾಡ, ಅವೇಶ ನದಾಫ್, ಆಫ್ರೀದಿ ಪಕಾಲಿ, ಪ್ರಭು ನೀಲಾರಿ, ಅವಿನಾಶ ಜಾಧವ, ಯಾಸೀನ್ ಪಾಂಡು, ಸಾಜೀದ ಸಿಂದಗಿ, ಸಲ್ಮಾನ ಡಾಂಗೆ, ಮೋದಿನ ತಟಗಾರ, ಸಿಕಂದರ ಸಾಂಗ್ಲೀಕರ ಸೇರಿದಂತೆ ಹಲವರು ಇದ್ದರು.ಜಿಲ್ಲಾ ಕಾನಿಪ ಸದಸ್ಯ ಚಂದ್ರಶೇಖರ ಮೋರೆ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿ ವಂದಿಸಿದರು.