ಪಂಪ್‌ಸೆಟ್ ಕಳ್ಳರ ಬಂಧನ:೧೫ ಪಂಪ್‌ಸೆಟ್‌, ೧ ಬೈಕ್ ವಶ

| Published : Aug 05 2024, 12:35 AM IST

ಸಾರಾಂಶ

ಆಲಮೇಲ: ಆಲಮೇಲ ತಾಲೂಕಿನ ಬಳಗಾನೂರ ಗ್ರಾಮದ ಬಳಿಯ ಕಾಲುವೆಯಲ್ಲಿ ನೀರು ಹಾಯಿಸಲು ಹಾಕಲಾಗಿದ್ದ ಪಂಪ್‌ಸೆಟ್‌ಗಳನ್ನು ಕಳ್ಳತನ ಮಾಡಿದ್ದ ಕಳ್ಳರನ್ನು ಆಲಮೇಲ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಪಂಪ್‌ಸೆಟ್‌ ಹಾಗೂ 1 ಬೈಕ್‌ನ್ನು ಜಪ್ತಿ ಮಾಡಿದ್ದಾರೆ. ಸುಂದರ ಭಗವಂತ ಕ್ಷತ್ರಿ (೨೪), ಕೃಷ್ಣಾ ಶ್ರಿಶೈಲ್ ಟಕ್ಕಳಕಿ (೨೦), ಸಿದ್ದಪ್ಪ ಸುಭಾಷ ಟಕ್ಕಳಕಿ (೩೫), ಸಂತೋಷ ಅಭಿಮನ್ಯು ಕ್ಷತ್ರಿ (೨೭) ಎಲ್ಲರೂ ಬಳಗಾನೂರ ಗ್ರಾಮದವರಾಗಿದ್ದು, ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಗ್ರಾಮದ ರೈತರಾದ ಜಗದೀಶ ಕುಂಬಾರ, ಮಹೇಶ ಪಾಟೀಲ, ಮೈಬೂಬಸಾಬ ಕನ್ನೊಳ್ಳಿ, ಸಿದ್ದಣ್ಣ ಯರಗಲ ಎಂಬ ರೈತರು ತಮ್ಮ ಜಮೀನಿಗೆ ನೀರು ಹರಿಸಲು ಪಕ್ಕದ ಕಾಲುವೆಯಲ್ಲಿ ೫ ಎಚ್.ಪಿಯ ಪಂಪಸೆಟ್‌ಗಳನ್ನು ಅಳವಡಿಸಿದ್ದರು. ಕಾಲುವೆಯಲ್ಲಿನ ಪಂಪ್‌ಸೆಟ್‌ ಮೋಟಾರ್ ಕಳುವಾಗಿರುವ ಕುರಿತು ಜೂ. ೩೦ರಂದು ಆಲಮೇಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ಗಳಾದ ಅರವಿಂದ ಅಂಗಡಿ ಹಾಗೂ ಎನ್.ಜಿ.ಅಪನಾಯ್ಕರ ಹಾಗೂ ಎಚ್.ಟಿ.ಗೊಡೆಕರ, ಎಸ್.ಎಸ್.ಬಾಪಗೊಂಡ,ಎಸ್.ಎನ್.ಸವದಿ, ಸಿದ್ರಾಮ ಪಾಟೀಲ, ಎಸ್.ಜಿ.ಚಾವರ, ಎಸ್.ಎಸ್.ಜಾಲಗೇರಿ, ರಾಜು ರಾಠೋಡ್ ಇವರ ತಂಡ ೧೫ ಮೋಟಾರ್ ಪಂಪಸೆಟ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಬೈಕ್‌ ನ್ನು ಜಪ್ತಿ ಮಾಡಿದ್ದಾರೆ.

ಪೊಲೀಸ್‌ರ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ ಸೊನಾವನೆ, ಹೆಚ್ಚುವರಿ ವರಿಷ್ಠಾಧಿಕಾರಿ ಶಂಕರ ಮಾರಿಹಾಳ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಮಗೌಡ ಹಟ್ಟಿ,ಇಂಡಿ ಡಿವೈಎಸ್ಪಿ ಜಗದೀಶ ಎಚ್.ಎಸ್.ಶ್ಲಾಘಿಸಿದ್ದಾರೆ.ಈ ಸಂದರ್ಭದಲ್ಲಿ ಪಿಎಸ್‌ಐ ಅರವಿಂದ ಅಂಗಡಿ, ಅಪರಾಧ ವಿಭಾಗದ ಪಿಎಸ್‌ಐ ಎನ್.ಜಿ.ಅಪನಾಯ್ಕರ, ಎಎಸ್‌ಐ ತಾಜುದ್ದೀನ್ ಶೇಖ, ಸಿಬ್ಬಂದಿಗಳಾದ ಆರ್.ಎನ್.ಪಾಟೀಲ, ರಾಜು ರಾಠೋಡ್, ಎಚ್.ಟಿ.ಗೊಡೆಕರ, ಎಸ್.ಎಸ್.ಬಾಪಗೊಂಡ, ಎಸ್.ಎನ್.ಸವದಿ, ಸಿದ್ರಾಮ ಪಾಟೀಲ, ಎಸ್.ಜಿ.ಚಾವರ, ಎಸ್.ಎಸ್.ಜಾಲಗೇರಿ, ಎಸ್‌.ಬಿ.ನಾದ, ಬಿ,ವೈ.ಬಿಜ್ಜೂರ, ಎಸ್.ಪಿ.ಮಡಕೇಶ್ವರ ಇದ್ದರು.