ಸಾರಾಂಶ
ಶಾರದಾ ಚಾರಿಟಬಲ್ ಟ್ರಸ್ಟ್ ಮತ್ತು ಕಾರ್ಯದರ್ಶಿಗಳು ವಿ.ವಿ.ಎಸ್ ಗ್ರೂಪ್ ಆಫ್ ಇನ್ ಸ್ಟಿಟೂಷನ್ ನ ಪಿ.ಜಿ. ದ್ವಾರಕನಾಥ್ ಮಾತನಾಡಿ, ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಅಭೂತಪೂರ್ವ ಸೇವೆಯನ್ನು 40 ವರ್ಷಗಳಿಂದ ಸಲ್ಲಿಸುತ್ತಿದೆ. ನೀವು ಸಮುದಾಯಕ್ಕೆ ನೀಡುವ ಸೇವೆಯಲ್ಲಿ ನಾವು ಭಾಗಿದಾರರಾಗಿರುವುದು ಪೂರ್ವ ಜನ್ಮದ ಫಲ
ಕನ್ನಡಪ್ರಭ ವಾರ್ತೆ ಸರಗೂರು
ಶಾರದಾ ಚಾರಿಟಬಲ್ ಟ್ರಸ್ಟ್ ನಿಂದ ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ಅಗ್ನಿ ಸುರಕ್ಷತಾ ಕ್ರಮಗಳ ಸಲಕರಣೆಗಳನ್ನು ನೀಡಿರುವ ಉಪಕರಣಗಳ ಸಮುದಾಯ ಸಮರ್ಪಣಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ಅವರಣದಲ್ಲಿ ಆಯೋಜಿಸಿತು.ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯ ಆರೋಗ್ಯ ಕ್ಷೇತ್ರದ ಮುಖ್ಯಸ್ಥರಾದ ಡಾ.ಜಿ.ಎಸ್. ಕುಮಾರ್ ಮಾತನಾಡಿ, ಉತ್ತಮ ತಂತ್ರಜ್ಞಾನ ಹೊಂದಿರುವ ಉಪಕರಣಗಳನ್ನು ದಾನಿಗಳು ನೀಡುವುದರಿಂದ ಸ್ಥಳೀಯ ಜನರಿಗೆ ಬಹಳ ಉಪಯುಕ್ತವಾಗಿದೆ. ಸಲಕರಣೆಗಳ ಜೊತೆಗೆ ರೋಗಿಗಳ ಸುರಕ್ಷತೆಯ ದೃಷ್ಥಿಯಿಂದ ಅಗ್ನಿ ಸುರಕ್ಷತಾ ಕ್ರಮಗಳ ಸಲಕರಣೆಗಳನ್ನು ಶಾರದಾ ಚಾರಿಟಬಲ್ ಟ್ರಸ್ಟ್ ನಿಂದ ದೇಣಿಗೆಯಾಗಿ 40 ಲಕ್ಷ ಬೆಲೆಬಾಳುವ ವೈದ್ಯಕೀಯ ಉಪಕರಣವನ್ನು ವಿವೇಕಾನಂದ ಸ್ಮಾರಕ ಆಸ್ಪತ್ರೆಗೆ ನೀಡಿರುವುದು ನವ್ಮ್ಮೆಲ್ಲರಿಗೂ ಸಂತಸ ತಂದಿದೆ ಎಂದರು.
ಶಾರದಾ ಚಾರಿಟಬಲ್ ಟ್ರಸ್ಟ್ ಮತ್ತು ಕಾರ್ಯದರ್ಶಿಗಳು ವಿ.ವಿ.ಎಸ್ ಗ್ರೂಪ್ ಆಫ್ ಇನ್ ಸ್ಟಿಟೂಷನ್ ನ ಪಿ.ಜಿ. ದ್ವಾರಕನಾಥ್ ಮಾತನಾಡಿ, ವಿವೇಕಾನಂದ ಸ್ಮಾರಕ ಆಸ್ಪತ್ರೆಯು ಅಭೂತಪೂರ್ವ ಸೇವೆಯನ್ನು 40 ವರ್ಷಗಳಿಂದ ಸಲ್ಲಿಸುತ್ತಿದೆ. ನೀವು ಸಮುದಾಯಕ್ಕೆ ನೀಡುವ ಸೇವೆಯಲ್ಲಿ ನಾವು ಭಾಗಿದಾರರಾಗಿರುವುದು ಪೂರ್ವ ಜನ್ಮದ ಫಲ ಎಂದರು.ಅಧ್ಯಕ್ಷತೆ ವಹಿಸಿದ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ನ ಸಿಇಒ ಎಸ್. ಸವಿತಾ ಸುಳುಗೋಡು ಮಾತನಾಡಿ, ದಾನಿಗಳು ನೀಡುತ್ತಿರುವ ದಾನದಿಂದಲೇ ಸಮುದಾಯಕ್ಕೆ ಹೆಚ್ಚಿನ ಸೇವೆ ಸಲ್ಲಿಸಲು ನಮಗೆ ಸಹಕಾರಿಯಾಗಿದೆ. ದಾನಿಗಳು ನೀಡಿದ ದಾನವನ್ನು ಸಮುದಾಯಕ್ಕೆ ತಲುಪಿಸಲು ನಮ್ಮ ಸಂಸ್ಥೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಲಯನ್ಸ್ ಕ್ಲಬ್ ನ ನಾರಾಯಣ ಮತ್ತು ವಿವೇಕಾನಂದ ಸ್ಮಾರಕ ಆಸ್ಪತ್ರೆಯ ನಿರ್ದೇಶಕರಾದ ಡಾ. ರವಿಂದ್ರನಾಥ್, ಶಾರದಾ ಚಾರಿಟಬಲ್ ಟ್ರಸ್ಟ್ ನ ಎಸ್. ಹರಿಪ್ರಸಾದ್ ಜೆ.ಆರ್. ದೇಶಪಾಂಡೆ, ಆಡಳಿತಾಧಿಕಾರಿ ಉಮಾ ಅಣ್ಣಯ್ಯ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಶಂಕರ್, ನೇತ್ರ ತಜ್ಞ ಡಾ. ನರೇಂದ್ರ ರಾಮಕೃಷ್ಣ, ವ್ಶೆದ್ಯರಾದ ಡಾ.ಆರ್. ಅಭಿಷೇಕ್, ಡಾ. ಮೆರಿನ್ರೋಸ್, ಆಸ್ಪತ್ರೆಯ ವ್ಯವಸ್ಥಾಪಕಿ ಸುಷ್ಮಾಶ್ರೀ, ಸಮುದಾಯ ಆರೋಗ್ಯ ಕಾರ್ಯಕ್ರಮಗಳ ವ್ಯವಸ್ಥಾಪಕ ಎಸ್. ಸಂತೋಸ್, ಸಿಬ್ಬಂದಿ ಭಾಗವಹಿಸಿದ್ದರು.