ಶಿರಸಿಯಲ್ಲಿ ಕಳ್ಳತನ ಆರೋಪಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ, 7 ಜನರ ಬಂಧನ

| Published : Jan 04 2025, 12:33 AM IST

ಶಿರಸಿಯಲ್ಲಿ ಕಳ್ಳತನ ಆರೋಪಿ ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ, 7 ಜನರ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮುಬಾರಕ್ ಅಬ್ದುಲ್ ಭಾಷಾ ಶೇಖ್ ಹಾಗೂ ಇನ್ನುಳಿದ ೬ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ದೂರು ನೀಡಿದ್ದಾರೆ.

ಶಿರಸಿ: ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ನಾಲ್ವರು ಪೊಲೀಸರ ಮೇಲೆ ಏಳು ಜನರು ಹಲ್ಲೆ ನಡೆಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು, ಈ ಕುರಿತು ಶುಕ್ರವಾರ ಶಿರಸಿಯ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ನಗರದ ಆರ್‌ಟಿಸಿ ಕಚೇರಿ ಸಮೀಪದ ಮುಬಾರಕ್ ಅಬ್ದುಲ್ ಭಾಷಾ ಶೇಖ್, ಅಬ್ದುಲ್ ಬಾಷಾ ಮುಕ್ತುಂಸಾಬ್ ಶೇಖ್, ಆಬೀದ್ ಖಾನ್, ರಶೀದಾ ಅಬ್ದುಲ್ ಬಾಷಾ ಶೇಖ್, ಅಫ್ರಿನ್ ಜಾವೇದ್ ಶೇಖ್, ರಫಿಯಾ ಕೋಂ ಮುಬಾರಕ್ ಶೇಖ್, ಅಮ್ರಿನ್ ಸಮೀರ್ ಶೇಖ್ಹ ಎಂಬವರೇ ಹಲ್ಲೆ ನಡೆಸಿದ ಆರೋಪಿಗಳು.ಜ. ೩ರಂದು ಬೆಳಗ್ಗೆ ೧೧ ಗಂಟೆಗೆ ಪೊಲೀಸ್ ಸಿಬ್ಬಂದಿಗಳಾದ ಮಹಾಂತೇಶ ಬಾರ್ಕೇರ್, ಹನುಮಂತ ಮಾಕಾಪುರ, ರಾಮಯ್ಯ ಪೂಜಾರಿ, ಮಹಿಳಾ ಪೊಲೀಸ್ ಸಿಬ್ಬಂದಿ ವಿದ್ಯಾ ನಾಯ್ಕ ಅವರು ನಗರದ ಆರ್‌ಟಿಒ ಕಚೇರಿ ಸಮೀಪದ ಶಾಲ್ಮಲಾ ಬಡಾವಣೆಯ ರಸ್ತೆಯಲ್ಲಿರುವ ಕಳ್ಳತನ ಪ್ರಕರಣದ ಆರೋಪಿ ಅನ್ವರ ಅಬ್ದುಲ್ ಭಾಷಾ ಎಂಬಾತನನ್ನು ಬಂಧಿಸಲು ಆತನ ಮನೆಗೆ ತೆರಳಿದ್ದರು.

ಆಗ ಆತನ ಮನೆಯಲ್ಲಿದ್ದ ಮೂವರು ಪುರುಷರು ಹಾಗೂ ನಾಲ್ವರು ಮಹಿಳೆಯರು ಪೊಲೀಸರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಶಬ್ದದಿಂದ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ. ಅಲ್ಲದೇ ಕಳ್ಳತನ ಪ್ರಕರಣದ ಆರೋಪಿ ಅನ್ವರ್ ಅಬ್ದುಲ್ ಭಾಷಾ ಸ್ಥಳದಿಂದ ಪರಾರಿಯಾಗಲು ಸಹಕರಿಸಿದ್ದಾರೆ.

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮುಬಾರಕ್ ಅಬ್ದುಲ್ ಭಾಷಾ ಶೇಖ್ ಹಾಗೂ ಇನ್ನುಳಿದ ೬ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಶಿರಸಿ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯ ಪಿಎಸ್‌ಐ ರತ್ನಾ ಕುರಿ ಅವರು ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ತನಿಖೆ ಕೈಗೊಂಡಿದ್ದಾರೆ.ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕುರಿತು ತರಬೇತಿಕಾರವಾರ: ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆರೋಗ್ಯ ಘಟಕಗಳಿಗೆ, ಜೀವ ವೈದ್ಯಕೀಯ ತ್ಯಾಜ್ಯಗಳ ವೈಜ್ಞಾನಿಕ ನಿರ್ವಹಣೆ, ವ್ಯವಸ್ಥಾಪನೆ ಹಾಗೂ ವಿಲೇವಾರಿ ಕುರಿತು ತರಬೇತಿ ಕಾರ್ಯಕ್ರಮವು ಗುರುವಾರ ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿಯ ಸಭಾಂಗಣದಲ್ಲಿ ನಡೆಯಿತು.ಬೆಂಗಳೂರಿನ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ನಿರ್ದೇಶಕ ಜೆ. ಚಂದ್ರಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವ ವೈದ್ಯಕೀಯ ತ್ಯಾಜ್ಯದ ಪರಿಣಾಮಕಾರಿ ವಿಂಗಡಣೆ, ನಿರ್ವಹಣೆ ಮತ್ತು ಸುರಕ್ಷಿತವಾಗಿ ವಿಲೇವಾರಿ ಮಾಡುವುದರ ಕುರಿತಾಗಿ ಎಲ್ಲ ನೊಡೆಲ್ ಅಧಿಕಾರಿಗಳು, ಜಿಲ್ಲೆಯ ಎಲ್ಲ ಸರ್ಕಾರಿ, ಖಾಸಗಿ ಆಸ್ಪತ್ರೆಗಳ, ಆರೋಗ್ಯ ಘಟಕಗಳ ವೈದ್ಯರು, ನರ್ಸ್‌ಗಳಿಗೆ ತರಬೇತಿ ನೀಡಿದರು.ಅಂಕೋಲಾದ ಕೆನರಾ ಐಎಂಎ, ಕಾಮನ್ ಬಯೋಮೆಡಿಕಲ್ ವೆಸ್ಟ್ ಮ್ಯಾನೇಜ್‌ಮೆಂಟ್ ಅಧ್ಯಕ್ಷ ಡಾ. ಎನ್.ವಿ. ನಾಯಕ, ಕಾರ್ಯದರ್ಶಿ ಡಾ. ನಿತಿನ್ ಪಿಕಳೆ, ಕಾರವಾರ ಐಎಂಎ ಅಧ್ಯಕ್ಷ ಸುರೇಶ ಭಟ್, ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ಅನ್ನಪೂರ್ಣ ವಸ್ತ್ರದ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕ ಡಾ. ಮೋಹನ ಕುಮಾರ, ಜಿಲ್ಲಾ ಆಯುಷ್ ಅಧಿಕಾರಿ ಡಾ. ಲಲಿತಾ ಶೆಟ್ಟಿ, ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಬಿ.ಕೆ. ಸಂತೋಷ, ಡಿಎಚ್‌ಇಒ ಬಸವರಾಜ, ಮಂಡಳಿಯ ಯೋಜನಾ ಸಹಾಯಕಿ ಡಾ. ಅಮೃತಾ ಶೇಟ್ ಇದ್ದರು.