ಸಾರಾಂಶ
ತಂದೆ, ತಾಯಿ ಗುರು- ಹಿರಿಯರನ್ನು ಗೌರವಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ತಿಳಿಸಿಕೊಟ್ಟು ಗುಣಮಟ್ಟ ಶಿಕ್ಷಣ ನೀಡಿ ಎಂದು ಹಿರಿಯ ಶಿಕ್ಷಕ ವೀರಭದ್ರಪ್ಪ ಬಿ.ಪಿ ಹೇಳಿದರು. ಬಸವಾಪಟ್ಟಣ ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಸಮೀಪದ ಕೇರಳಾಪುರ ಗ್ರಾಮದ ಶ್ರೀವಿದ್ಯಾಗಣಪತಿ ಪ್ರೌಢಶಾಲೆಯಲ್ಲಿ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಿಂದ ಬಿ.ಜಿ.ಎಸ್ ಕಲ್ಯಾಣ ಮಂಟಪದಲ್ಲಿ ಗುರು ನಮನ ಕಾರ್ಯಕ್ರಮ ನಡೆಯಿತು.ಈ ಶಾಲೆ ಕೇರಳಾಪುರ ಗ್ರಾಮದಲ್ಲಿ ಪ್ರಾರಂಭಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡಿದೆ. ಈ ನಿಟ್ಟಿನಲ್ಲಿ ಅನೇಕರು ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳಲ್ಲಿ ಉನ್ನತ ಹುದ್ದೆ ಗಳಿಸಿದ್ದಾರೆ. ಶಿಕ್ಷಣಕ್ಕೆ ಉತ್ತಮ ತಳಪಾಯದಿಂದ ಅನೇಕರು ಖ್ಯಾತ ವ್ಯಕ್ತಿರಾಗಿದ್ದಾರೆ.
ಹಿರಿಯ ಶಿಕ್ಷಕ ವೀರಭದ್ರಪ್ಪ ಬಿ.ಪಿ ಮಾತನಾಡಿ, ತಂದೆ, ತಾಯಿ ಗುರು- ಹಿರಿಯರನ್ನು ಗೌರವಿಸಬೇಕು. ನಿಮ್ಮ ಮಕ್ಕಳಿಗೆ ಉತ್ತಮ ವಿಚಾರವನ್ನು ತಿಳಿಸಿಕೊಟ್ಟು ಗುಣಮಟ್ಟ ಶಿಕ್ಷಣ ನೀಡಿ ಎಂದರು. ಹಿರಿಯ ಶಿಕ್ಷಕರಾದ ಬಿ.ಪಿ ವೀರಭದ್ರಪ್ಪ, ಕೆ.ಎಸ್ ರಾಜಶೇಖರಯ್ಯ, ಪುಟ್ಟಲಿಂಗಯ್ಯ, ಜಿ.ಟಿ ನಾಗರಾಜು, ಉಷಾ, ಕೆ.ಎಸ್ ಕೃಷ್ಣ, ಸ್ವಾಮಿ, ದಿ. ಶಿಕ್ಷಕ ಕೋಂದಡಪಾಣಿ, ರಾಜಶೇಖರಯ್ಯ, ಸಿಂಗ್ರಿಗೌಡರು, ರಾಮಪ್ಪ, ಕೃಷ್ಣಪ್ಪ ಕುಟುಂಬದವರನ್ನು ಸನ್ಮಾನಿಸಲಾಯಿತುಇದೇ ವೇಳೆ ೧೯೯೩-೯೪ನೇ ಸಾಲಿನ ಹಿರಿಯ ವಿದ್ಯಾರ್ಥಿಗಳಾದ ಭಾಸ್ಕರ್, ಮಧುಸೂದನ್, ಸತೀಶ್‌ಕುಮಾರ್, ಹೇಮಂತ್‌ಕುಮಾರ್ ಬಿ.ವಿ, ರಾಘವೇಂದ್ರ, ಕಿರಣ್, ಲೋಕೇಶ್, ಚಿನ್ನಸ್ವಾಮಿ, ಲೋಕೇಶ್, ಶಿವಣ್ಣ, ಸುಕನ್ಯ, ಸುಮಾ ಇನ್ನು ಹಾಜರಿದ್ದರು.