ಸಾರಾಂಶ
ಕುಕ್ಕಿಕಟ್ಟೆ ಮಾರ್ಪಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ 40ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಶ್ರೀಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.
ಕನ್ನಡಪ್ರಭ ವಾರ್ತೆ ಉಡುಪಿ
ಇಲ್ಲಿನ ಕುಕ್ಕಿಕಟ್ಟೆ ಮಾರ್ಪಳ್ಳಿ ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ 40ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಸ್ವಯಂ ಪ್ರೇರಿತ ಬೃಹತ್ ರಕ್ತದಾನ ಶಿಬಿರ ಶ್ರೀಅಯ್ಯಪ್ಪ ಸ್ವಾಮಿ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಸರ್ಜನ್ ಡಾ. ಎಚ್. ಅಶೋಕ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಉಡುಪಿಗೆ ಸ್ಥಳೀಯ ಅಥವಾ ಜಿಲ್ಲೆಯ ರೋಗಿಗಳು ಮಾತ್ರವಲ್ಲದೆ ಗೋವಾ ಹಾಗೂ ಇತರ ಕಡೆಗಳಿಂದಲೂ ರೋಗಿಗಳು ಬರುತ್ತಾರೆ. ಆದ್ದರಿಂದ ಉಡುಪಿಯ ರಕ್ತ ಕೇವಲ ಉಡುಪಿಗೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ ಪಾಸಿಟಿವ್ ರಕ್ತಕ್ಕಿಂತ ನೆಗೆಟಿವ್ ಗ್ರೂಪ್‌ನ ರಕ್ತದ ಕೊರತೆ ತುಂಬಾ ಇದೆ. ಒಬ್ಬರು ದಾನ ಮಾಡಿದ ರಕ್ತ 5 ಜನರಿಗೆ ಜೀವದಾನ ನೀಡಬಲ್ಲದು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಂಡಾರಿ ಪವರ್ ಲೈನ್ಸ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಜ್ಞಾನನಂದ ಐರೋಡಿ ವಹಿಸಿದ್ದರು.ಈ ಸಂದರ್ಭ ಕುಂದಾಪುರ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಜಯಕರ ಶೆಟ್ಟಿ, ಮಣಿಪಾಲದ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲಿಯನ್, ಮಾರ್ಪಳ್ಳಿ ಗೆಳೆಯರ ಬಳಗದ ಅಧ್ಯಕ್ಷ ವಿಜಯ್ ಆರ್. ನಾಯಕ್, ಮಾರ್ಪಳ್ಳಿಯ ಮಹಿಳಾ ಮಂಡಳಿ ಅಧ್ಯಕ್ಷೆ ಪುಷ್ಪಲತಾ ರಮಾನಂದ, ಕುಕ್ಕಿಕಟ್ಟೆಯ ಆಟೋ ಮತ್ತು ಟೆಂಪೋ ಚಾಲಕರ ಸಂಘದ ಪ್ರಮುಖರಾದ ಕರುಣಾಕರ ಶೆಟ್ಟಿಗಾರ್, ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ ಗುರುಸ್ವಾಮಿ ವಸಂತ್ ಶೆಟ್ಟಿಗಾರ್ ಮಾರ್ಪಳ್ಳಿ, ಶ್ರೀ ಅಯ್ಯಪ್ಪ ಸ್ವಾಮಿ ಭಕ್ತವೃಂದದ ಅಧ್ಯಕ್ಷ ಜಯಂತ್ ನಾಯಕ್ ಮಂಚಿ, ಶಿವರಾಂ, ಸಂದೀಪ್ ಕುಲಾಲ್, ಅನುರಾಧ ಉಪಸ್ಥಿತರಿದ್ದರು.