ಸಾರಾಂಶ
ಯಾದಗಿರಿ ನಗರದ ಕೋಲಿ ಸಮಾಜದ ಕಚೇರಿಯಲ್ಲಿ ನೂತನವಾಗಿ ಆಯ್ಕೆಯಾದ ಸುರಪುರ ಮತ್ತು ಹುಣಸಗಿ ತಾಲೂಕು ಚಾಲಕರ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಯಾದಗಿರಿ
ಟ್ಯಾಕ್ಸಿ ವಾಹನಗಳ ನಿಲುಗಡೆಗೆ ಜಿಲ್ಲಾಡಳಿತ ಸ್ಥಳ ಮಂಜೂರು ಮಾಡಿದ್ದಕ್ಕೆ ಸಾಮಾಜಿಕ ಹೋರಾಟಗಾರ ಉಮೇಶ ಕೆ.ಮುದ್ನಾಳ ಹರ್ಷ ವ್ಯಕ್ತಪಡಿಸಿ, ನಮ್ಮೆಲರ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹೇಳಿದ್ದಾರೆ.ನಗರದ ಕೋಲಿ ಸಮಾಜದ ಕಚೇರಿಯಲ್ಲಿ ಗಿರಿನಾಡು ಲಘುವಾಹನ (ಕಾರು ಟ್ಯಾಕ್ಸಿ)ಚಾಲಕರ ಸಂಘದ ಪದಾಧಿಕಾರಿಗಳೊಂದಿಗೆ ಚರ್ಚಿಸಿ, ನೂತನ ಸುರಪುರ ಮತ್ತು ಹುಣಸಗಿ ತಾಲೂಕು ಚಾಲಕರ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಸನ್ಮಾನಿಸಿ ಅವರು ಮಾತನಾಡಿದರು.
ಪದೇ ಪದೇ ಹೋರಾಟ ಮಾಡಿದ ನಂತರ ಇದೀಗ ನಗರಸಭೆ ಹಾಗೂ ಜಿಲ್ಲಾಡಳಿತ ಎಚ್ಚೆತ್ತು ಲಘು ವಾಹನ (ಟ್ಯಾಕ್ಸಿ ಸ್ಟ್ಯಾಂಡ್)ನಿಲುಗಡೆಗೆ ವಿಶೇಷ ಮೂಲಭೂತ ಸೌಕರ್ಯಗಳು ಒದಗಿಸಿ ಕೊಡಬೇಕೆಂದು ಆಗ್ರಹಿಸಿದ್ದಾರೆ.*ಸುರಪುರ-ಹುಣಸಗಿ ನೂತನ ಪದಾಧಿಕಾರಿಗಳು:
ಈ ವೇಳೆ ಸುರಪುರ ತಾಲೂಕು ಚಾಲಕರ ಸಂಘದ ಅಧ್ಯಕ್ಷರಾಗಿ ಸಂಗಮೇಶ ನಾಯಕ, ಗೌರವಾಧ್ಯಕ್ಷರಾಗಿ ತಿರುಪತಿ ಪಾಟೀಲ್, ಉಪಾಧ್ಯಕ್ಷರಾಗಿ ವೆಂಕಟೇಶ, ಖಜಾಂಚಿ ಮಾರುತಿ, ಕಾರ್ಯಾದರ್ಶಿಯಾಗಿ ಮೌನೇಶ, ಸದ್ಯಸರಾಗಿ ಅಮರೇಶ, ಯಲ್ಲಪ್ಪ, ಮರೆಪ್ಪ. ಹುಣಸಗಿ ತಾಲೂಕು ಚಾಲಕರ ಸಂಘದ ಅಧ್ಯಕ್ಷರಾಗಿ ಮಂಜು, ಉಪಾಧ್ಯಕ್ಷರಾಗಿ ಬಸವರಾಜ ಗೌಡೂರ, ಖಜಾಂಚಿ ಪರಶುರಾಮ, ಕಾರ್ಯಾದರ್ಶಿಯಾಗಿ ಮೌನೇಶ, ಸದ್ಯಸರಾಗಿ ರಾಜೇಶ, ಬಸವರಾಜ ಬೆನಕನಹಳ್ಳಿ ಅವರನ್ನು ಆಯ್ಕೆ ಮಾಡಲಾಯಿತು.ಗಿರಿನಾಡು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಬಸವರಾಜ ಇಟಗಿ, ಸಾಬ್ಬಯ್ಯ ಗುತ್ತೇದಾರ, ಶರಣು ನಾರಯಣಪೇಟ, ಶರಣು ಜೊತಾ, ಬನ್ನಪ್ಪ, ಕಾಡಪ್ಪ, ಅಶೋಕ, ಜಮಲ್, ಸುನಿಲ್, ಯಂಕಣಗೌಡ, ವಿಜ್ಜು, ನಬಿ, ದೇವು, ತಾಯಪ್ಪ, ಗೊವಿಂದ, ಮೆಹೆಬೂಬು, ಭಿಮಶಪ್ಪ, ಮಹೇಶ, ಚಂದ್ರು, ತಿಮ್ಮಣ, ಸಲೀಮ್, ಬಾಬ, ಅಜಿಜ್, ದುರ್ಗಪ್ಪ ಸೇರಿ ಇತರರಿದ್ದರು.