ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತ್ಯಾಗ ಬಲಿದಾನಗಳ ಶ್ರೇಷ್ಠತೆಯನ್ನು ಸಾರುವ ಬಕ್ರೀದ್ ಹಬ್ಬ ಮುಸ್ಲಿಂ ಬಾಂದವರ ಬದುಕಿನಲ್ಲಿ ಹೊಸ ಚೈತನ್ಯ ಮತ್ತು ಮಾನವೀಯತೆಯನ್ನು ಸಾರುವುದೇ ಆಗಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.ಚಳ್ಳಕೆರೆ ನಗರದ ಈದ್ಗಾ ಮೈದಾನದಲ್ಲಿ ಗುರುವಾರ ನಡೆದ ಬಕ್ರೀದ್ ಹಬ್ಬದ ಆಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮುಸ್ಲಿಂ ಬಾಂಧವರಿಗೆ ಶುಭಕೋರಿ ಮಾತನಾಡಿದರು.
ತ್ಯಾಗ, ಪ್ರೀತಿ, ಸೌಹಾರ್ದತೆಯ ಸಂಕೇತವಾಗಿರುವ ಬಕ್ರೀದ್ ಸಂದರ್ಭದಲ್ಲಿ ಸಾಮೂಹಿಕವಾಗಿ ದಾನ ಮಾಡುವ ಮೂಲಕ ಬಡವರಿಗೆ ಸಹಾಯಹಸ್ತ ಚಾಚುವುದನ್ನು ಇದು ಸಂಕೇತಿಸುತ್ತದೆ. ಇಂತಹ ಸಂದರ್ಭದಲ್ಲಿ ಮಸೀದಿಗೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಪ್ರವಾದಿಗಳಿಗೆ ಸಲ್ಲಿಸುವ ಗೌರವ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ನಗರಸಭೆ ಅಧ್ಯಕ್ಷ ಸಿ.ಆರ್.ಅಲಾಭಕ್ಷಿ, ಜಾಮಿಯಾ ಮಸೀದಿ ಅಧ್ಯಕ್ಷರಾದ ಯಾಕೂಬ್ ಅಲಿ, ಉಪಾಧ್ಯಕ್ಷರಾದ ಯೂನಿಸ್, ಮುಸ್ಲಿಂ ಮುಖಂಡರಾದ ಮುಜೀಬ್ ವುಲ್ಲಾ, ಎಚ್.ಎಸ್.ಸೈಯದ್, ಅತೀಕ ಕುರ್ ರೆಹಮಾನ್, ಖಾಲಿಮ್ ಉಲ್ಲಾ, ಸಲೀಂ, ಭಾಷಾ, ಜುಬೇರ್, ಇಂಜಿನಿಯರ್ ರಾಜಾ, ದಾದಾಪೀರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ಗ್ಯಾರೆಂಟಿ ಸಮಿತಿಯ ಜಿಲ್ಲಾ ಸದಸ್ಯರಾದ ಪ್ರಕಾಶ್, ಮುಖಂಡರಾದ ಹನುಮಂತರಾಯ, ಓಬಣ್ಣ, ಜಯಕುಮಾರ್, ಮೈನಾ ಬಾಬು, ಗಿರಿಯಪ್ಪ, ಪುರುಷೋತ್ತಮ, ಜಯಣ್ಣ, ಹನುಮಂತರಾಯ, ಪಾಟೀಲ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.