ಬನದ ಹುಣ್ಣಿಮೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿರುವ ಶ್ರೀ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು.

ಯಾದಗಿರಿ: ಬನದ ಹುಣ್ಣಿಮೆ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವೂ ಜಿಲ್ಲೆಯ ಸುರಪುರ ನಗರದ ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪ ಆವರಣದಲ್ಲಿರುವ ಶ್ರೀ ಈಶ್ವರ ಬನಶಂಕರಿ ದೇವಸ್ಥಾನದಲ್ಲಿ ಹಲವು ಕಾರ್ಯಕ್ರಮಗಳನ್ನು ನಡೆಸಲಾಯಿತು.

ಬೆಳಿಗ್ಗೆ ಈಶ್ವರ ಬನಶಂಕರಿ ದೇವರ ಮೂರ್ತಿಗಳಿಗೆ ವಿಶೇಷ ಪೂಜೆ ಕೈಂಕರ್ಯ ಹಾಗೂ ಪಲ್ಲಕ್ಕಿಯ ಮೆರವಣಿಗೆ ಮತ್ತು ಪುರವಂತರ ಮಹಾ ಸೇವೆ ಜರುಗಿತು. ಅಲ್ಲದೆ 221 ಜನ ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮವನ್ನು ನಡೆಸಲಾಯಿತು. ದೇವಸ್ಥಾನದ ಎಲ್ಲೆಡೆಯೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಬಳೆ ಕುಪ್ಪಸ ಅರಿಶಿಣ ಕುಂಕುಮ ನೀಡಿ ಉಡಿ ತುಂಬುವ ಮೂಲಕ ಪೂಜೆ ನೆರವೇರಿಸಲಾಯಿತು. ನಂತರ ದೇವಸ್ಥಾನದ ಅರ್ಚಕರಾದ ನಿಂಗಯ್ಯ ಸ್ವಾಮಿ ಹಿರೇಮಠ ನೇತೃತ್ವದಲ್ಲಿ ಮಹಾಮಂಗಳಾರತಿ ನಂತರ ಮಹಾಪ್ರಸಾದ ವಿತರಣೆ ಜರುಗಿತು.

ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಶರಣಪ್ಪ ಗುಮ್ಮ, ಮಲ್ಕಜಪ್ಪ ಮಿಟ್ಟಾ, ಲಿಂಗಣ್ಣ ರಾಯಚೂರಕರ್, ಮಂಜುನಾಥ ಸಪ್ಪಂಡಿ, ಲಕ್ಷ್ಮಣ ಸಪ್ಪಂಡಿ, ರಮೇಶ ಸಪ್ಪಂಡಿ, ಶಂಕರ ಸಪ್ಪಂಡಿ, ಈರಣ್ಣ ನಾಲವಾರ, ಸಿದ್ದಪ್ಪ ಚೆಟ್ಟಿ, ಬಸವರಾಜ ಚೆಟ್ಟಿ, ಚನ್ನಬಸಪ್ಪ ಚೆಟ್ಟಿ, ಸಂಗಮೇಶ ಚೆಟ್ಟಿ, ಸಂತೋಷ ಬಳ್ಳ, ಶ್ರೀಶೈಲ ನಿಂಬಾಳ, ರವಿ ಗಲಗಿನ, ಸುರೇಶ ಸಜ್ಜನ್, ಪ್ರಕಾಶ ಸಜ್ಜನ್, ಮಲ್ಲೇಶಿ ಸಜ್ಜನ್, ಮಲ್ಲಿಕಾರ್ಜುನಯ್ಯ ಕಡೇಚೂರ, ಹಣಮಂತ ನಂಬರ್, ತಾತಯ್ಯ ಕಡಬೂರ, ವಿನೋದ ಆವಂಟಿ, ಶಿವರಾಜ ಗುಳಗಿ, ಅಮೀನರೆಡ್ಡಿ ಯಾದಗೀರ, ಗುರುರಾಜ ಯಂಕಂಚಿ, ಶರಣು ಗುಮ್ಮ, ಸುರೇಶ ಚೆಟ್ಟಿ, ಸೋಮಶೇಖರ ಶಹಾಬಾದಿ, ಸಂಗು ಗುಳಗಿ ಸೇರಿದಂತೆ ಅನೇಕ ಜನ ಮಹಿಳೆಯರು, ವೀರಶೈವ ಲಿಂಗಾಯತ ಸಮಾಜ ಸೇರಿದಂತೆ ಸಾವಿರಾರು ಜನ ಭಾಗವಹಿಸಿದ್ದರು.