ಬ್ಯಾಂಕ್ ಉತ್ತಮ ಸ್ನೇಹಿತ, ಕಷ್ಟ ಕಾಲದ ಆಪದ್ಬಾಂದವ

| Published : Jul 12 2024, 01:30 AM IST

ಸಾರಾಂಶ

banks are good friend

-ಮೆದೆಹಳ್ಳಿ ಕೆನರಾ ಬ್ಯಾಂಕ್ ಗ್ರಾಹಕರ ಸಭೆಯಲ್ಲಿ ಸಾಲ ಮಂಜೂರಾತಿ ಪತ್ರ ವಿತರಣೆ

-------

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ಬ್ಯಾಂಕ್ ಉತ್ತಮ ಸ್ನೇಹಿತ, ಕಷ್ಟ ಕಾಲದ ಆಪದ್ಬಾಂದವ ಎಂದು ಕೆನರಾ ಬ್ಯಾಂಕ್ ಚಿತ್ರದುರ್ಗ ವಲಯದ ಆರ್ ಎಹೆಚ್ ಚಂದ್ರಶೇಖರ್ ಅಭಿಪ್ರಾಯಪಟ್ಟರು.

ಮೆದೆಹಳ್ಳಿ ಕೆನರಾ ಬ್ಯಾಂಕ್ ಶಾಖೆಯಲ್ಲಿ ಆಯೋಜಿಸಿದ್ದ ಗ್ರಾಹಕರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಆರ್ಥಿಕ ಅಭಿವೃದ್ಧಿ ವ್ಯಕ್ತಿಯ ಜೀವನದ ಪ್ರಮುಖ ಸಂಗತಿಗಳಲ್ಲಿ ಒಂದು. ಆರ್ಥಿಕತೆ ವಿಚಾರದಲ್ಲಿ ಸಾಕಷ್ಟು ಸಂದರ್ಭದಲ್ಲಿ ವ್ಯಕ್ತಿಗೆ ಸ್ಪಂದನೆ ದೊರಕುವುದು ಕಷ್ಟ. ಆದರೆ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ವ್ಯಕ್ತಿಯ ಬೆಳವಣಿಗೆಗೆ ಉತ್ತಮ ಅವಕಾಶಗಳಿವೆ. ಬ್ಯಾಂಕ್‍ ಜೊತೆ ಉತ್ತಮ ಸಂಬಂಧ ಹೊಂದಿದ್ದರೆ, ವ್ಯಕ್ತಿ ಬಹುಬೇಗ ಆರ್ಥಿಕ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.

ಇಂದಿನ ಆಧುನಿಕತೆಯ ಜೀವನ ಶೈಲಿಗೆ ಹೆಚ್ಚು ದುಡಿಮೆ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ಆರ್ಥಿಕ ನೆರವು ಬಹುಮುಖ್ಯ. ಬ್ಯಾಂಕ್‍ಗಳು ಆರ್ಥಿಕ ನೆರವು ನೀಡುವುದರ ಜೊತೆಗೆ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತವೆ. ಕೆನರಾ ಬ್ಯಾಂಕ್‍ನಿಂದ ನೀಡಲಾಗುವ ಹೌಸಿಂಗ್ ಲೋನ್, ವಾಹನ ಹಾಗೂ ಎಜುಕೇಷನ್ ಸಾಲದ ಅವಕಾಶವನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.

ಬ್ಯಾಂಕ್ ನ ಡಿವಿಜನಲ್ ಪ್ರಬಂಧಕಿ ಅನಿತಾ ಮಾತನಾಡಿ, ಬ್ಯಾಂಕ್ ಗ್ರಾಹಕರ ಪರವಾಗಿಯೇ ಕೆಲಸ ಮಾಡುತ್ತದೆ. ಗ್ರಾಹಕರು ಬ್ಯಾಂಕನ್ನು ಕಾಪಾಡಬೇಕು. ಬ್ಯಾಂಕ್‍ನಲ್ಲಿರುವ ಹಣ ಸಾರ್ವಜನಿಕರದ್ದಾಗಿದ್ದು, ಅದರ ರಕ್ಷಣೆಯೂ ಬ್ಯಾಂಕ್ ಮೇಲಿರುತ್ತದೆ. ಸಾಲ ಪಡೆದವರು ಸಕಾಲದಲ್ಲಿ ಪಾವತಿ ಮಾಡುವುದರಿಂದ ಬ್ಯಾಂಕ್ ಹಾಗೂ ಗ್ರಾಹಕರಿಗೂ ಇಬ್ಬರಿಗೂ ಅನುಕೂಲವಾಗಲಿದೆ ಎಂದರು.

ಸಣ್ಣ ಘಟಕಗಳ ಸಾಲ ಸೌಲಭ್ಯದ ಬಗ್ಗೆ ವಂಶಿ, ಕೃಷಿ ಸಂಬಂಧಿಸಿದ ಸಾಲಗಳ ಬಗ್ಗೆ ಚಂದ್ರಶೇಖರ್ ಹಾಗೂ ಚಿತ್ರದುರ್ಗ ಮುಖ್ಯ ಶಾಖೆಯ ಪ್ರಬಂಧಕ ಮಾಲತಿ ಮಾಹಿತಿ ನೀಡಿದರು. ಮೆದೇಹಳ್ಳಿ ಶಾಖೆಯ ಪ್ರಬಂಧಕಿ ನಿವೇದಿತಾ ಹಾಗೂ ವಿಜಯ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

------------

ಪೋಟೋ: ಚಿತ್ರದುರ್ಗ ತಾಲೂಕಿನ ಮೆದೆಹಳ್ಳಿ ಕೆನರಾ ಬ್ಯಾಂಕ್ ನಿಂದ ಆಯೋಜಿಸಿದ್ದ ಗ್ರಾಹಕರ ಸಭೆಯಲ್ಲಿ ಸಾಲ ಮಂಜೂರಾತಿ ಪತ್ರಗಳನ್ನು ವಿತರಿಸಲಾಯಿತು.

--------

ಫೋಟೋ: 11ಸಿಟಿಡಿ2