ಸಾರಾಂಶ
ಸಿರಿಗೆರೆ: ಬೆಳೆಯುತ್ತಿರುವ ತಂತ್ರಜ್ಞಾನದ ಕಡೆಗೆ ಎಲ್ಲರ ಆಸಕ್ತಿ ಹೋಗಿದ್ದರಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆ: ಬೆಳೆಯುತ್ತಿರುವ ತಂತ್ರಜ್ಞಾನದ ಕಡೆಗೆ ಎಲ್ಲರ ಆಸಕ್ತಿ ಹೋಗಿದ್ದರಿಂದ ಕನ್ನಡ ಭಾಷಾ ಬೆಳವಣಿಗೆ ಕುಂಠಿತವಾಗಿದೆ ಎಂದು ತರಳಬಾಳು ಜಗದ್ಗುರು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಸಿರಿಗೆರೆಯಲ್ಲಿ ಆರಂಭವಾದ ತರಳಬಾಳು ನುಡಿಹಬ್ಬದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿದ ಅವರು, ತಂತ್ರಜ್ಞಾನದ ಕಡೆಗೆ ಕನ್ನಡವನ್ನು ಒರಳಿಸಬೇಕಾದ ಕೆಲಸವನ್ನು ನಮ್ಮ ಯುವಕರು ಮಾಡಬೇಕು. ಆದರೆ ಅವರು ಕನ್ನಡದ ಕಡೆಗೆ ಗಮನ ನೀಡುತ್ತಿಲ್ಲ ಎಂದು ವಿಷಾದಿಸಿದರು.ಭಾಷೆ ಹರಿಯುವ ನೀರಿದ್ದಂತೆ. ಅದನ್ನು ಯಾರೂ ಮಲಿನಗೊಳಿಸಬಾರದು. ಈಗಿನ ಯುವಕರು ಇಂಗ್ಲಿಷ್ ಭಾಷೆಗೆ ಮಾರು ಹೋಗಿದ್ದಾರೆ. ಕನ್ನಡ ಮಾತಾಡುವ ಸಂದರ್ಭ ಬಂದಾಗ ಅವರು ಪರಿಪೂರ್ಣ ಕನ್ನಡ ಭಾಷೆಯನ್ನು ಬಳೆಸಬೇಕು. ಕನ್ನಡದಲ್ಲಿ ಅನ್ಯ ಭಾಷೆಗಳ ಮಿಶ್ರಣ ಮಾಡಬಾರದು. ಅಪ್ಪಟ ಕನ್ನಡ ಮಾತಾಡಿ, ಕನ್ನಡವನ್ನು ಬೆಳೆಸಿ ಎಂದು ತಿಳಿಸಿದರು.ಸಂಸ್ಕೃತದಲ್ಲಿ ನುಡಿಗಟ್ಟುಗಳನ್ನು ಬಳಸಿ ಕವಿತೆ ಕಟ್ಟುವ ಸಂಪ್ರದಾಯವಿದೆ. ಇದರಿಂದ ಭಾಷೆಯ ಬೆಳವಣಿಗೆ ಆಗುತ್ತದೆ ಎಂದರು.