ಬ್ಯಾಂಕ್‌ ಖಾತೆಯೇ ಹ್ಯಾಕ್‌ ಮಾಡಿ 33 ಲಕ್ಷ ದೋಚಿದ ಸೈಬರ್‌ ಕಳ್ಳರು - ಆರ್‌ಟಿಜಿಎಸ್‌ ಮಾಡಿದ್ದ ಹಣ

| N/A | Published : Jan 30 2025, 10:12 AM IST

money
ಬ್ಯಾಂಕ್‌ ಖಾತೆಯೇ ಹ್ಯಾಕ್‌ ಮಾಡಿ 33 ಲಕ್ಷ ದೋಚಿದ ಸೈಬರ್‌ ಕಳ್ಳರು - ಆರ್‌ಟಿಜಿಎಸ್‌ ಮಾಡಿದ್ದ ಹಣ
Share this Article
  • FB
  • TW
  • Linkdin
  • Email

ಸಾರಾಂಶ

ಆರ್‌ಟಿಜಿಎಸ್‌ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ ₹33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಈ ಘಟನೆ ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ.

  ಅಂಕೋಲಾ : ಆರ್‌ಟಿಜಿಎಸ್‌ ಮೂಲಕ ಬೇರೆ ಖಾತೆದಾರರಿಗೆ ಹೋಗಬೇಕಿದ್ದ ಹಣವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ ₹33,42,845 ಲಕ್ಷವನ್ನು ದೋಚಿರುವ ಘಟನೆ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಕೇಂದ್ರ ಕಚೇರಿಯಲ್ಲಿ ನಡೆದಿದೆ. ಈ ಘಟನೆ ಜ.24, 27ರಂದು ನಡೆದಿದೆ ಎಂದು ಅಂದಾಜಿಸಲಾಗಿದೆ.

ಈ ಕುರಿತು ಕಾರವಾರದಲ್ಲಿ ಸೈಬರ್ ಕ್ರೈಂ ವಿಭಾಗದ ಠಾಣೆಯಲ್ಲಿ ಅಂಕೋಲಾ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್‌ನ ಚೀಫ್ ಎಕ್ಸಿಕ್ಯುಟಿವ್ ಆಫೀಸರ್ ರವೀಂದ್ರ ಪಾಂಡುರಂಗ ವೈದ್ಯ ದೂರು ನೀಡಿದ್ದಾರೆ. 

ಅಂಕೋಲಾ ಕೇಂದ್ರ ಕಚೇರಿಯಲ್ಲಿ ಖಾತೆದಾರರಾದ ಮೀನಾಕ್ಷಿ ಕೃಷ್ಣಗೌಡರಿಂದ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಆರ್‌ಟಿಜಿಎಸ್‌ ಮಾಡಿದ ₹5 ಲಕ್ಷ, ವೆಂಕಟೇಶ್ವರ ಗ್ಯಾಸ್ ಸೆಂಟರ್‌ನಿಂದ ವೆಂಕಟೇಶ್ವರ ಗ್ಯಾಸ್ ಸೆಂಟರ್‌ಗೆ ಆರ್‌ಟಿಜಿಎಸ್‌ ಮಾಡಿದ ₹5,46,000 ಲಕ್ಷ, ಜತೆಗೆ ಇವರದೇ ಮತ್ತೊಂದು ಖಾತೆಗೆ ₹6,60,000 ಲಕ್ಷ, ಸವಿತಾ ವೆಂಕಟರಮಣ ನಾಯ್ಕರಿಂದ ಟಾಫೆ ಅಕ್ಸೆಸ್‌ ಲಿ.ಗೆ ಆರ್‌ಟಿಜಿಎಸ್‌ ಮಾಡಿದ ₹16,36,895 ಲಕ್ಷ ಸೇರಿ ಒಟ್ಟು ₹33,42,895 ಲಕ್ಷ ಹಣವು ಆರ್‌ಟಿಜಿಎಸ್‌ ಮಾಡಿದ ಖಾತೆಗೆ ಜಮೆ ಆಗದೇ ಹ್ಯಾಕ್ ಆಗಿದ್ದು, ಸೈಬರ್ ಕಳ್ಳರ ಖಾತೆಗೆ ಜಮ ಆಗಿದೆ ಎಂದು ದೂರು ನೀಡಲಾಗಿದೆ.