ಹ್ಯಾಟ್ರಿಕ್‌ ಜಯದೊಂದಿಗೆ ಭಾರತ ಸೂಪರ್‌-8ಗೆ

| N/A | Published : Sep 20 2025, 11:48 AM IST

Team India's Jersey Sponsor

ಸಾರಾಂಶ

ಹಾಲಿ ಚಾಂಪಿಯನ್‌ ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೂಪರ್‌-4 ಹಂತ ಪ್ರವೇಶಿಸಿದೆ. ತಂಡ ಗುಂಪು ಹಂತದ ಕೊನೆ ಪಂದ್ಯದಲ್ಲಿ ಶುಕ್ರವಾರ ಒಮಾನ್‌ ವಿರುದ್ಧ 21 ರನ್‌ ಪ್ರಯಾಸದ ಗೆಲುವು ಸಾಧಿಸಿತು. ಇದರೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಒಮಾನ್‌ ಹ್ಯಾಟ್ರಿಕ್‌ ಸೋಲಿನೊಂದಿಗೆ ಹೊರಬಿತ್ತು.

ಅಬುಧಾಬಿ: ಹಾಲಿ ಚಾಂಪಿಯನ್‌ ಭಾರತ ಹ್ಯಾಟ್ರಿಕ್‌ ಗೆಲುವಿನೊಂದಿಗೆ ಸೂಪರ್‌-4 ಹಂತ ಪ್ರವೇಶಿಸಿದೆ. ತಂಡ ಗುಂಪು ಹಂತದ ಕೊನೆ ಪಂದ್ಯದಲ್ಲಿ ಶುಕ್ರವಾರ ಒಮಾನ್‌ ವಿರುದ್ಧ 21 ರನ್‌ ಪ್ರಯಾಸದ ಗೆಲುವು ಸಾಧಿಸಿತು. ಇದರೊಂದಿಗೆ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದುಕೊಂಡಿತು. ಒಮಾನ್‌ ಹ್ಯಾಟ್ರಿಕ್‌ ಸೋಲಿನೊಂದಿಗೆ ಹೊರಬಿತ್ತು.

ಮೊದಲು ಬ್ಯಾಟ್‌ ಮಾಡಿದ ಭಾರತ 8 ವಿಕೆಟ್‌ಗೆ 188 ರನ್‌ ಕಲೆಹಾಕಿತು. ಅಭಿಷೇಕ್‌ ಶರ್ಮಾ 15 ಎಸೆತಕ್ಕೆ 38 ರನ್‌ ಸಿಡಿಸಿ ಉತ್ತಮ ಆರಂಭ ಒದಗಿಸಿಕೊಟ್ಟರು. ಸಂಜು ಸ್ಯಾಮ್ಸನ್‌(45 ಎಸೆತಕ್ಕೆ 56) ಅರ್ಧಶತಕ ತಂಡಕ್ಕೆ ನೆರವಾಯಿತು. ಅಕ್ಷರ್ ಪಟೇಲ್‌ 13 ಎಸೆತಕ್ಕೆ 26, ತಿಲಕ್‌ ವರ್ಮಾ 18 ಎಸೆತಕ್ಕೆ 29 ರನ್‌ ಕೊಡುಗೆ ನೀಡಿದರು. ಆದರೆ ನಾಯಕ ಸೂರ್ಯಕುಮಾರ್‌ ಯಾದವ್‌ ಬ್ಯಾಟಿಂಗ್‌ಗೆ ಆಗಮಿಸಲಿಲ್ಲ.

ದೊಡ್ಡ ಗುರಿ ಬೆನ್ನತ್ತಿದ ಒಮಾನ್‌ ತಂಡವನ್ನು ಕಡಿಮೆ ಮೊತ್ತಕ್ಕೆ ನಿಯಂತ್ರಿಸುವ ಭಾರತದ ಯೋಜನೆ ತಲೆಕೆಳಗಾಯಿತು. ಅಭೂತಪೂರ್ವ ಬ್ಯಾಟಿಂಗ್‌ ಪ್ರದರ್ಶಿಸಿದ ಒಮಾನ್‌ 4 ವಿಕೆಟ್‌ಗೆ 167 ರನ್‌ ಕಲೆಹಾಕಿತು. ನಾಯಕ ಜತೀಂದರ್‌ ಸಿಂಗ್‌ 32, ಅಮೀರ್‌ ಕಲೀಮ್‌ 46 ಎಸೆತಕ್ಕೆ 64, ಹಮ್ಮಾದ್‌ ಮಿರ್ಜಾ 33 ಎಸೆತಕ್ಕೆ 51 ರನ್‌ ಸಿಡಿಸಿದರು.

ಸ್ಕೋರ್: ಭಾರತ 20 ಓವರಲ್ಲಿ 188/8 (ಸಂಜು 56, ಅಭಿಷೇಕ್‌ 38, ತಿಲಕ್‌ 29, ಅಕ್ಷರ್ 26, ಫೈಸಲ್‌ 2-23), ಒಮಾನ್‌ 20 ಓವರಲ್ಲಿ 167/4 (ಕಲೀಮ್‌ 64, ಹಮ್ಮಾದ್‌ 51, ಕುಲ್ದೀಪ್‌ 1-23)

ಪಂದ್ಯಶ್ರೇಷ್ಠ: ಸಂಜು ಸ್ಯಾಮ್ಸನ್‌

Read more Articles on