ಬಿಗ್‌ ಬಾಸ್ ತನಿಖಾ ವರದಿ ಮಹಿಳಾಆಯೋಗಕ್ಕೆ : ಎಸ್ಪಿ ಕಾರ್ತಿಕ್ ರೆಡ್ಡಿ

| Published : Oct 17 2024, 12:57 AM IST

ಬಿಗ್‌ ಬಾಸ್ ತನಿಖಾ ವರದಿ ಮಹಿಳಾಆಯೋಗಕ್ಕೆ : ಎಸ್ಪಿ ಕಾರ್ತಿಕ್ ರೆಡ್ಡಿ
Share this Article
  • FB
  • TW
  • Linkdin
  • Email

ಸಾರಾಂಶ

ರಾಮನಗರ: ಬಿಗ್ ಬಾಸ್‌ನಲ್ಲಿ ಸ್ವರ್ಗ ನರಕ ವಿಚಾರವಾಗಿ ಮಹಿಳೆಯರ ಕುರಿತಾದ ಹೇಳಿಕೆ ವಿರುದ್ಧ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಪೂರ್ಣ ತನಿಖಾ ವರದಿ ಸಿದ್ಧಪಡಿಸಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಿಗೆ ಸಲ್ಲಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ ಪ್ರತಿಕ್ರಿಯೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಮನಗರ ಜಿಲ್ಲಾ ಪೊಲೀಸ್ ವ್ಯಾಪ್ತಿಯ ರಾಮೋಹಳ್ಳಿ ಬಳಿ ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿದೆ. ಅದಕ್ಕೆ ಸಂಬಂಧಪಟ್ಟಂತೆ ಕೆಲ ಸಂಘಟನೆಗಳು, ರಾಜ್ಯ ಮಹಿಳಾ ಆಯೋಗ ಆಧ್ಯಕ್ಷರಿಗೆ ಮನವಿ ಕೊಟ್ಟಿವೆ. ಈ ಹಿನ್ನೆಲೆಯಲ್ಲಿ ಅಧ್ಯಕ್ಷರು ನಮಗೊಂದು ಪತ್ರ ಬರೆದಿದ್ದಾರೆ. ಈ ಬಗ್ಗೆ ಪೂರ್ಣ ತನಿಖೆ ನಡೆಸಿ, ಒಂದು ವರದಿ ಕೊಡಲು ತಿಳಿಸಿದ್ದಾರೆ ಎಂದು ಹೇಳಿದರು.

ಆ ವರದಿ ನೀಡಲು ನಾನು ಮಾಗಡಿ ಡಿಎಸ್ಪಿ ಮತ್ತು ಕುಂಬಳಗೋಡು ಇನ್ಸ್‌ಪೆಕ್ಟರ್ ಬಳಿ ಮಾತನಾಡಿದ್ದೇನೆ. ಅವರು ಬಿಗ್ ಬಾಸ್‌ ಆಯೋಜಕರಿಗೆ ನೋಟಿಸ್ ತಲುಪಿಸಿದ್ದಾರೆ. ಅಲ್ಲಿ ಏನಾಗಿದೆ ಎಂಬುದರ ಬಗ್ಗೆ ಅತಿ ಶೀಘ್ರದಲ್ಲೇ ನಾವು ಹೇಳಿಕೆಗಳನ್ನು ಪಡೆದು ಸಂಪೂರ್ಣ ತನಿಖಾ ವರದಿಯನ್ನು ಸಿದ್ಧಪಡಿಸಿ ಮಹಿಳಾ ಆಯೋಗದ ಅಧ್ಯಕ್ಷರಿಗೆ ಕಳುಹಿಸುತ್ತೇವೆ ಎಂದು ಕಾರ್ತಿಕ್ ರೆಡ್ಡಿ ತಿಳಿಸಿದರು.

16ಕೆಆರ್ ಎಂಎನ್ 1.ಜೆಪಿಜಿ

ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ.