ಸಾರಾಂಶ
ಮಳವಳ್ಳಿ ತಾಲೂಕಿನ ರಾವಂದೂರು ಗ್ರಾಮದ ಮನೋಹರ್ (18) ಮೃತ ದುರ್ದೈವಿ. ಇನ್ನೊಬ್ಬ ಬೈಕ್ ಸವಾರ ಮದ್ದೂರು ರವಿಕುಮಾರ್ ಹಾಗೂ ಪಾದಚಾರಿ ಕಾಮಗೆರೆ ಸುರೇಶ್ ಗಾಯಗೊಂಡು ಕಾಮಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಕೊಳ್ಳೇಗಾಲ:
ತಾಲೂಕಿನ ಕೊಂಗರಹಳ್ಳಿ ಗ್ರಾಮದ ರಸ್ತೆಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದು ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಭಾನುವಾರ ಜರುಗಿದೆ.ಮಳವಳ್ಳಿ ತಾಲೂಕಿನ ರಾವಂದೂರು ಗ್ರಾಮದ ಮನೋಹರ್ (18) ಮೃತ ದುರ್ದೈವಿ. ಇನ್ನೊಬ್ಬ ಬೈಕ್ ಸವಾರ ಮದ್ದೂರು ರವಿಕುಮಾರ್ ಹಾಗೂ ಪಾದಚಾರಿ ಕಾಮಗೆರೆ ಸುರೇಶ್ ಗಾಯಗೊಂಡು ಕಾಮಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದಾರೆ.
ಬೈಕ್ ಸವಾರರು ಬೆಂಗಳೂರಿನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ರಜಾ ದಿನವಾದ ಭಾನುವಾರ ಮಲೈಮಹದೇಶ್ವರ ಬೆಟ್ಟಕ್ಕೆ ತನ್ನ ಸ್ನೇಹಿತರ ಜೊತೆ ತೆರಳಿ ವಾಪಸ್ಸು ಬರುವಾಗ ಕೊಂಗರಹಳ್ಳಿ ಗ್ರಾಮದ ರಸ್ತೆಯಲ್ಲಿ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಿಂಬದಿಯಲ್ಲಿ ಕುಳುತ್ತಿದ್ದ ಮನೋಹರ್ ರಸ್ತೆ ಮೇಲೆ ಬಿದ್ದು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತ್ತಪಟ್ಟಿದ್ದಾರೆ.ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲಿಸಿ ಮಹಜರ್ ನಡೆಸಿದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಅಪಘಾತವಾದ ವಾಹನ ಜಪ್ತಿ ಮಾಡಿ ಮುಂದಿನ ಕ್ರಮ ಜರುಗಿಸಿದ್ದಾರೆ.
;Resize=(128,128))
;Resize=(128,128))