ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಹುಲ್ ಗಾಂಧಿ ಓರ್ವ ಪಾರ್ಟ್ ಟೈಂ ರಾಜಕಾರಣಿ, ಚುನಾವಣೆ ವೇಳೆ ಚುನಾವಣೆ ನಂತರ ಫಾರೀನ್‌ಗೆ ಹೋಗ್ತಾರೆ. ಬರಿ ದೇಶ, ವಿದೇಶ ಸುತ್ತೋದೆ ಇವರ ಕೆಲಸವಾಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.ವರನಟ ಡಾ.ರಾಜ್ ಕುಮಾರ್ ರಂಗಮಂದಿರದ ಮುಂಭಾಗ ಮಾಧ್ಯಮದವರೊಂದಿಗೆ ಅವರು ಮಾತನಾಡಿ, ಗಾಂಧಿ ಕುಟುಂಬದ ವಿರುದ್ಧ ಕೆಂಡಕಾರಿದರು. ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ರೆ ಮಾತ್ರ ಇವಿಎಂ ಸರಿಯಾಗಿರುತ್ತೆ. ಬಿಜೆಪಿ ಅಥವಾ ಬೇರೆ ಪಕ್ಷ ಗೆದ್ರೆ ಇವಿಎಂನಲ್ಲಿ ಮೋಸ ಆಗಿರುತ್ತೆ ಎಂದು ಕಿಡಿಕಾರಿದರು.ಇವರ ಮತ ಚೋರಿ ಸುಳ್ಳಿನ ಕಂತೆಯನ್ನ ದೇಶದ ಜನ ಒಪ್ಪಿಲ್ಲ. ಗಾಂಧಿ ಕುಟುಂಬದ ಆಟ ಇನ್ನು ಯಾವುದೇ ಕಾರಣಕ್ಕೂ ನಡೆಯುವುದಿಲ್ಲ. ಆಫ್ಟರ್ ಬಿಹಾರ ಚುನಾವಣಾ ರಿಸಲ್ಟ್ ರಾಹುಲ್ ಗಾಂಧಿ ಡಮ್ಮಿ ಆಗಿದ್ದಾರೆ. ಇನ್ಮೇಲೆ ರಾಜ್ಯದಲ್ಲಿ ಏನಿದ್ರು ಮುಖ್ಯಮಂತ್ರಿ ಸಿದ್ದರಾಮಯ್ಯರದ್ದೆ ಪ್ರಾಬಲ್ಯ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಸ್ತ್ರ ಬಿಹಾರ ಚುನಾವಣೆಯಲ್ಲಿ ವರ್ಕೌಟ್ ಆಗಿಲ್ಲ ಎಂದರು.ಡಿಕೆಶಿ ಶಿವ ಹಾಗೂ ವಿಷ್ಣುವನ್ನು ನೋಡಿದ್ರು ಈಗ ಹಣೆಬರಹ ಬ್ರಹ್ಮನನ್ನು ನೋಡದೊಂದೆ ಬಾಕಿ, ಬಿಹಾರ ಚುನಾವಣೆ ಫಲಿತಾಂಶದಿಂದ ಕಾಂಗ್ರೆಸ್ ಎಲ್ಲ ಉಲ್ಟಾ ಆಗೋಗಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಮಾತ್ರ ಪ್ರಾಬಲ್ಯವಾಗಿದೆ. ಚುನಾವಣೆಯ ಪಲಿತಾಂಶ ಬಳಿಕ ಸಿಎಂ ಸಿದ್ದರಾಮಯ್ಯ ಪ್ರಾಬಲ್ಯರಾಗಿದ್ದಾರೆ. ಸಿಎಂ ಕುರ್ಚಿನ ಸಿದ್ದರಾಮಯ್ಯ ಬಿಟ್ಟು ಕೊಡಲ್ಲ ಡಿ.ಕೆ .ಶಿವಕುಮಾರ್ ಸುಮ್ನೆ ಇರೋಲ್ಲ, ಇವರಿಬ್ಬರ ತಿಕ್ಕಾಟದ ಮಧ್ಯೆ ಸರ್ಕಾರ ಬಿದ್ದು ಹೋಗುತ್ತೆ ಎಂದರು.
ಮಧ್ಯಂತರ ಚುನಾವಣೆ ಕರ್ನಾಟಕ ರಾಜ್ಯದಲ್ಲಿ ಬರಲಿದೆ. ಚುನಾವಣೆಯನ್ನು ಎದುರಿಸಲು ಬಿಜೆಪಿ ಜೆಡಿಎಸ್ ಸಿದ್ಧವಿದೆ. ಬಿಜೆಪಿ ಜೆಡಿಎಸ್ ಒಟ್ಟಾಗಿ ಒಗ್ಗಟ್ಟಾಗಿ ಮುಂಬರುವ ಚುನಾವಣೆಯನ್ನು ಎದುರಿಸಲಿದೆ ಎಂದು ಆರ್.ಅಶೋಕ್ ಹೇಳಿಕೆ ನೀಡಿದರು.ಮೆರವಣಿಗೆಗೆ ಚಾಲನೆ:
ಚಾಮರಾಜನಗರದಲ್ಲಿ ಬಿಜೆಪಿ ವತಿಯಿಂದ ಬಿರ್ಸಾ ಮುಂಡಾ ಜಯಂತಿ ಆಯೋಜನೆ ಮಾಡಲಾಗಿದ್ದು ವಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ಮುಖಂಡರಾದ ಬಂಗಾರು ಹನುಮಂತು ಸೇರಿ ಮುಖಂಡರು ಭಾಗಿಯಾಗಿದ್ದರು.ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಮೆರವಣಿಗೆಗೆ ಚಾಲನೆ ಕೊಟ್ಟು ಹೆಜ್ಜೆ ಹಾಕಿದ ಅಶೋಕ್, ಜಿಲ್ಲಾಡಳಿತ ಭವನ ಮುಂಭಾಗ ಗೊರವರ ಕುಣಿತಕ್ಕೆ ಹೆಜ್ಜೆ ಹಾಕಿದರು. ಢಮರುಗ ಹಿಡಿದು ನೃತ್ಯ ಮಾಡಿದ ಅಶೋಕ್ ಅವರಿಗೆ ಬಿಜೆಪಿ ಮುಖಂಡರಾದ ಬಂಗಾರು ಹನುಮಂತು, ಸಿ.ಎಸ್.ನಿರಂಜನಕುಮಾರ್, ರಾಮಚಂದ್ರು ಸಾಥ್ ಕೊಟ್ಟರು.------------------
16ಸಿಎಚ್ಎನ್11;Resize=(128,128))
;Resize=(128,128))