ಕಾಯಕ ನಿಷ್ಠೆಗೆ ಬಿನ್ನಾಳ ಗ್ರಾಮ ಮಾದರಿ: ಕಳಕಪ್ಪ ಕಂಬಳಿ

| Published : Jan 16 2024, 01:50 AM IST

ಕಾಯಕ ನಿಷ್ಠೆಗೆ ಬಿನ್ನಾಳ ಗ್ರಾಮ ಮಾದರಿ: ಕಳಕಪ್ಪ ಕಂಬಳಿ
Share this Article
  • FB
  • TW
  • Linkdin
  • Email

ಸಾರಾಂಶ

ರಂಗಭೂಮಿಯಲ್ಲಿ ಅಭಿನಯಿಸುವುದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು. ಬಿನ್ನಾಳ ಯುವಕರೇ ಇದಕ್ಕೆ ಉದಾಹರಣೆಯಾಗಿದ್ದಾರೆ.

ಕುಕನೂರು: ಬಿನ್ನಾಳ ಗ್ರಾಮಕ್ಕೆ ಬಸವೇಶ್ವರರ ಆಶೀರ್ವಾದ ಇದೆ. ಇಡೀ ರಾಜ್ಯದಲ್ಲೇ ಬರ ಆವರಿಸಿದೆ. ಆದರೆ ನಮ್ಮ ಗ್ರಾಮಕ್ಕೆ ಮಳೆಯಾಗಿ ರೈತರ ಬೆಳೆಗಳು ಹುಲುಸಾಗಿ ಬೆಳೆದಿವೆ. ಗ್ರಾಮ ಸಮೃದ್ಧಿಯಾಗಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.ತಾಲೂಕಿನ ಬಿನ್ನಾಳ ಗ್ರಾಮದಲ್ಲಿ ಮುಬಾರಕ ಯುವ ಕಲಾ ನಾಟ್ಯ ಸಂಘದಿಂದ ಹಮ್ಮಿಕೊಂಡಿದ್ದ ಸತ್ಯಮೇವ ಜಯತೆ ಎಂಬ ಸಾಮಾಜಿಕ ನಾಟಕ ಉದ್ಘಾಟಿಸಿ ಮಾತನಾಡಿದ ಅವರು, ಕಾಯಕಕ್ಕೆ ನಮ್ಮೂರು ಹೆಸರಾಗಿದೆ. ಇಲ್ಲಿನ ಜನತೆ ಬಹಳ ಮುಗ್ಧರು, ಸ್ವಾಭಿಮಾನಿಗಳು. ಕಾಯಕ ನಿಷ್ಠೆಗೆ ಮತ್ತು ಧಾರ್ಮಿಕತೆಗೆ ಬಿನ್ನಾಳ ಗ್ರಾಮ ಹೆಸರುವಾಸಿಯಾಗಿದೆ. ಪ್ರತಿ ವರ್ಷ ಹಬ್ಬ ಹರಿದಿನ, ಜಾತ್ರಾ ಸಂದರ್ಭಗಳಲ್ಲಿ ನಾಟಕ ಅಭಿನಯಿಸುತ್ತಾ ನಮ್ಮೂರ ಯುವಕರು ರಂಗಭೂಮಿ ಕಲೆ ಉಳಿಸಿ ಬೆಳೆಸಲು ಮುಂದಾಗಿರುವ ಕಾರ್ಯ ಶ್ಲಾಘನೀಯ ಎಂದರು.ಕುಷ್ಟಗಿ ಪುರಸಭೆ ಮಾಜಿ ಅಧ್ಯಕ್ಷ ಕಲ್ಲೇಶ ತಾಳದ ಮಾತನಾಡಿ, ನಾಟ್ಯ ಸಂಘದ ಕಲಾವಿದರ ಕಾರ್ಯ ಶ್ಲಾಘನೀಯ. ಬಿನ್ನಾಳ ಗ್ರಾಮ ಭಾವೈಕ್ಯತೆಯ ಗ್ರಾಮವಾಗಿದೆ. ಗ್ರಾಮ ರಾಜಕೀಯ, ಸಾಹಿತ್ಯ, ಸಾಮಾಜಿಕ, ಧಾರ್ಮಿಕವಾಗಿ ಮುಂಚೂಣಿಯಲ್ಲಿದೆ ಎಂದರು.ರಂಗಭೂಮಿಯಲ್ಲಿ ಅಭಿನಯಿಸುವುದು ಸವಾಲಿನ ಕೆಲಸವಾಗಿದೆ. ರಂಗಕಲೆಯನ್ನು ಕರಗತ ಮಾಡಿಕೊಂಡಲ್ಲಿ ಉತ್ತಮ ಸಾಮಾಜಿಕ ನಾಟಕಗಳನ್ನು ಹೊರತರಬಹುದು. ಬಿನ್ನಾಳ ಯುವಕರೇ ಇದಕ್ಕೆ ಉದಾಹರಣೆಯಾಗಿದ್ದಾರೆ ಎಂದರು.

ಪ್ರಮುಖರಾದ ಸಿದ್ದಲಿಂಗಯ್ಯ ಹಿರೇಮಠ, ಚೆನ್ನಯ್ಯ ಹಿರೇಮಠ, ಮಲ್ಲಯ್ಯ ಪೂಜಾರ, ಕುಷ್ಟಗಿ ಬಿಜೆಪಿ ಮುಖಂಡ ದುರಗಪ್ಪ ವಡಗೇರಿ, ಗ್ರಾಪಂ ಅಧ್ಯಕ್ಷೆ ದಾಕ್ಷಾಯಿಣಿ ತಹಸೀಲ್ದಾರ, ಗ್ರಾಪಂ ಸದಸ್ಯರಾದ ಚೆನ್ನಮ್ಮ ಮುತ್ತಾಳ, ಕಮಲಾಕ್ಷಿ ಕಂಬಳಿ, ಗುರಪ್ಪ ಪಂತರ, ಲಕ್ಷ್ಮಣ ಚಲವಾದಿ, ಮಹ್ಮದಸಾಬ ವಾಲಿಕಾರ, ಕಳಕಪ್ಪ, ಮುತ್ತಪ್ಪ, ಜಗದೀಶ ಚಟ್ಟಿ, ಸಂತೋಷ ಮೆಣಸಿನಕಾಯಿ, ಚೆನ್ನವೀರಯ್ಯ ಪೂಜಾರ, ಕಳಕಪ್ಪ ಚಟ್ಟಿ, ಬಸವರಾಜ ಬನ್ನಿಕೊಪ್ಪ, ರಮೇಶ ಚಲವಾದಿ, ಅಂದಾನಗೌಡ ಚಳ್ಳಾರಿ, ಮಹ್ಮದಸಾಬ್ ವಾಲಿಕಾರ, ಸಂಗಪ್ಪ ತಹಸೀಲ್ದಾರ, ಇಮಾಂಸಾಬ ಉಮಚಗಿ, ಸಿದ್ದಲಿಂಗಪ್ಪ ನಾಯ್ಕರ, ಬಸವರಾಜ ಹುಗ್ಗಣ್ಣನವರ, ಜಗದೀಶ, ಸಂತೋಷ, ಮಲ್ಲು ಮಾಟರಂಗಿ ಇತರರು ಇದ್ದರು. ಶಿಕ್ಷಕ ಜೀವನಸಾಬ ಬಿನ್ನಾಳ ನಿರೂಪಿಸಿ ವಂದಿಸಿದರು.