ಭೂ ತಾಯಿಗೆ ವಿಷ ಉಣಿಸಬೇಡಿ

| Published : Jan 16 2024, 01:50 AM IST

ಸಾರಾಂಶ

ಕಾಗವಾಡ ತಾಲೂಕಿನ ಐನಾಪುರ ಪಟ್ಟಣದ ಸಿದ್ಧೇಶ್ವರ ದೇವರ 54ನೇ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ತರ ಕರ್ನಾಟಕದ 31ನೇ ಬೃಹತ್‌ ಕೃಷಿಮೇಳವನ್ನು ಸೋಮವಾರ ಉದ್ಘಾಟನೆಯಲ್ಲಿ ಶಾಸಕ ಕಾಗೆ ಮನವಿ.

ಕನ್ನಡಪ್ರಭ ವಾರ್ತೆ ಕಾಗವಾಡ

ರೈತರು ಹೆಚ್ಚಿನ ಲಾಭಕ್ಕಾಗಿ ಭೂಮಿಗೆ ಅಪಾಯಕಾರಿ ಕೀಟನಾಶಕ, ಔಷಧಿಗಳು, ರಾಸಾಯನಿಕ ಗೊಬ್ಬರದ ಬಳಕೆ ಮಾಡಿದರೇ ಫಲವತ್ತಾದ ಭೂಮಿಗೆ ವಿಷ ಉಣಿಸಿದಂತಾಗುತ್ತದೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಕಳವಳ ವ್ಯಕ್ತಪಡಿಸಿದರು.

ತಾಲೂಕಿನ ಐನಾಪುರ ಪಟ್ಟಣದ ಸಿದ್ಧೇಶ್ವರ ದೇವರ 54ನೇ ಜಾತ್ರಾ ಮಹೋತ್ಸವದ ಅಂಗವಾಗಿ ಉತ್ತರ ಕರ್ನಾಟಕದ 31ನೇ ಬೃಹತ್‌ ಕೃಷಿಮೇಳವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ಅತಿಯಾದ ರಾಸಾಯನಿಕ ಬಳಕೆಯಿಂದ ಭೂಮಿಯಲ್ಲಿನ ಜೀವಸತ್ವಗಳು ಕಡಿಮೆಯಾಗಿ ಮಣ್ಣಿನ ಫಲವತ್ತತೆ ಕ್ಷೀಣಿಸಿ ಆದಾಯವೂ ಕಡಿಮೆಯಾಗುತ್ತದೆ. ಇದಕ್ಕೆ ಮೂಲ ಕಾರಣ ವಿಷಪೂರಿತ ರಾಸಾಯನಿಕ ಗೊಬ್ಬರ ಬಳಕೆ ಎಂದರು.

ವಿಷಪೂರಿತ ರಾಸಾಯಣಿಕ ಬಳಕೆಯಿಂದ ಬೆಳೆಯುವ ಬೆಳೆಗಳು ಮನುಷ್ಯನ ಆರೋಗ್ಯದ ಮೇಲೆ ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದ್ದರಿಂದ ರೈತರು ಭೂತಾಯಿಗೆ ವಿಷ ಉಣಿಸುವುದನ್ನು ನಿಲ್ಲಿಸಿ ಮಣ್ಣಿನ ಫಲವತ್ತತೆ ಕಾಪಾಡಿಕೊಳ್ಳಬೇಕು. ರೈತರು. ಸಾವಯವ ಕೃಷಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಹಳೆಯ ಪದ್ಧತಿಯಲ್ಲಿ ಕೃಷಿ ಮಾಡಿದರೇ ಇಂದಿನ ಸ್ಪರ್ದಾತ್ಮಕ ದಿನಮಾನಗಳಲ್ಲಿ ರೈತರಿಗೆ ಲಾಭವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಬ್ಬ ರೈತರು ಅಧುನಿಕ ಕೃಷಿ ಪದ್ಧತಿಯನ್ನು ಕೃಷಿಯಲ್ಲಿ ಅಳವಡಿಸಿಕೊಂಡು, ಕಡಿಮೆ ಅವಧಿಯಲ್ಲಿ ಅಧಿಕ ಲಾಭ ಬರುವ ವಿವಿಧ ಕೃಷಿ ಚಟುವಟಿಕೆಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ಪ್ರೇರಣಾ ಫೌಂಡೇಶನ್‌ದ ಅಧ್ಯಕ್ಷ ಸಂಜಯ ಬಿರಡಿ ಮಾತನಾಡಿ, ಕೃಷಿ ಉತ್ಪನ್ನ ಬೆಳೆಯಲು ಕೃಷಿಕರು ಮಾಡುತ್ತಿರುವ ಖರ್ಚು, ಬರುತ್ತಿರುವ ಇಳುವರಿ, ಸಿಗುತ್ತಿರುವ ಬೆಲೆ ನೋಡಿದರೇ ರೈತರು ಕೃಷಿಯನ್ನೇ ಕೈಬಿಡಬೇಕಾದ ಪರಿಸ್ಥಿತಿ ಇದೆ. ಅದಕ್ಕಾಗಿ ರೈತರು ಹಳೆಯ ಪದ್ಧತಿಯ ಕೃಷಿಯನ್ನು ಕೈಬಿಟ್ಟು ಅಧುನಿಕ ಕೃಷಿ ಪದ್ಧತಿಯನ್ನು ಅಳವಡಿಸಿಕೋಡಾಗ ಮಾತ್ರ ಲಾಭವಾಗಲಿದೆ ಎಂದರು.

ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಜಾತ್ರಾ ಕಮಿಟಿಯ ಅಧ್ಯಕ್ಷ ಸುಭಾಸ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುಭಾಶ ಪಾಟೀಲ, ಪಟ್ಟಣ ಪಂಚಾಯತಿ ಸದಸ್ಯರಾದ ಪ್ರವೀಣ ಗಾಣಿಗೇರ, ಅರುಣ ಗಾಣಿಗೇರ, ಸಂಜಯ ಕುಚನೂರೆ, ದಾದಾ ಜಂತೆನ್ನವರ, ಜನಶಕ್ತಿ ಸೌಹಾರ್ದ ಸಹಕಾರ ಸಂಘದ ಅಧ್ಯಕ್ಷ ಪ್ರಶಾಂತ ಅಪರಾಜ, ಮುಖಂಡರಾದ ಪ್ರಕಾಶ ಕೋರ್ಬು, ಸುನೀಲ ಅವಟಿ,ಡಾ.ಅರವಿಂದ ಕಾರ್ಚಿ, ಜಾತ್ರಾ ಕಮೀಟಿಯ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ,ಕಾರ್ಯದರ್ಶಿ ಅಮಗೌಡ ವಡೆಯರ,ಸೋಮಣ್ಣ ವಡೆಯರ, ಸುರೇಶ ಅಡಿಶೇರಿ ಕೃಷಿ ಮೇಳದ ಬಾಹುಬಲಿ ಕುಸನಾಳೆ, ಗುರುರಾಜ ಮಡಿವಾಳರ,ಅಣ್ಣಪ್ಪ ಡೂಗನವರ, ಪ್ರಕಾಶ ಗಾಣಿಗೇರ,ಅನೀಲಕುಮಾರ ಸತ್ತಿ,ಮಂಜುನಾಥ ಕುಚನೂರೆ, ಮಲ್ಲಿಕಾರ್ಜುನ ಕೋಲಾರ, ಪದ್ದು ಲಿಂಬಿಕಾಯಿ,ಶಂಕರ ಕೋರ್ಬು ಸಂಜಯ ಕುಸನಾಳೆ, , ಗುಂಡು ಖವಟಗೊಪ್ಪ, ರಾಮು ಸವದತ್ತಿ,ಮಂಜು ಬಿಷ್ಠಾಣಿ, ಪ್ರಕಾಶ ಸತ್ತಿ, ಚಿದಾನಂದ ಕೋರ್ಬು, ಶೀತಲ ಬಾಲೋಜಿ, ಪ್ರಕಾಶ ಗಾಣಿಗೇರ, ಅಮೀತ ಡೂಗನವರ, ರಾಜು ಖವಟಕೊಪ್ಪ, ಸತೀಶ ಕುಸನಾಳೆ, ಸಂತೋಷ ತೇರದಾಳೆ, ಸಂದೀಪ ರಡ್ಡಿ,ವಿಕಾಸ ಜಾಧವ, ಸದಾಶಿವ ಕೇರಿಕಾಯಿ, ಗುರು ಕಾಲತಿಪ್ಪಿ, ಸಿದ್ದಾಂತ ಪಾಟೀಲ, ಸಿದ್ದು ಅಡಿಸೇರಿ,ಸುಮಿತ ಕುಸನಾಳೆ, ಪ್ರದೀಪ ಪಾಟೀಲ, ಮಹೇಶ ತೆರದಾಳೆ, ಸೇರಿದಂತೆ ಸಾವಿರಾರು ಜನರು ಇದ್ದರು.