ಸಾರಾಂಶ
ಕನ್ನಡಪ್ರಭ ವಾರ್ತೆ ಕುಣಿಗಲ್ ಕುಣಿಗಲ್ ಪಟ್ಟಣದ ಹುಚ್ಚಮಾಸ್ತಿ ಗೌಡ ವೃತ್ತದಲ್ಲಿ ಬಿಜೆಪಿ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 75 ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ಮುಖಂಡ ಡಿ ಕೃಷ್ಣಕುಮಾರ್, ನರೇಂದ್ರ ಮೋದಿ ಅವರ ಸಾಧನೆ ವಿಶ್ವ ಮಟ್ಟಕ್ಕೆ ಗುರುತಿಸಿಕೊಳ್ಳಲು ಸಹಾಯ ಆಗಿದೆ, ಹಲವಾರು ಅಂತಾರಾಷ್ಟ್ರೀಯ ಸಮಸ್ಯೆಗಳನ್ನು ನರೇಂದ್ರ ಮೋದಿ ನೇತೃತ್ವದಲ್ಲಿ ಬಗೆಹರಿಸುತ್ತಿರುವುದು ಸಂತಸದ ವಿಚಾರ. ಮೋದಿ ಅವರ ಹಲವಾರು ಸಾಧನೆಗಳು ಇಂದಿಗೂ ಕೂಡ ಜೀವಂತವಾಗಿದ್ದು ದೇಶ ಮಟ್ಟದಲ್ಲಿ ಭಾರತ ಗುರುತಿಸಿಕೊಂಡು ವಿಶ್ವಮಟ್ಟಕ್ಕೆ ಅಭಿವೃದ್ಧಿಯತ್ತ ಭಾರತ ಸಾಗುತ್ತಿದೆ ಎಂದರು. ಕೆಲ ಕಾಂಗ್ರೆಸ್ಸಿಗರು ಸಂವಿಧಾನದ ಪುಸ್ತಕವನ್ನು ಹಿಡಿದು ವಿದೇಶದಲ್ಲಿ ಭಾರತದ ಬಗ್ಗೆ ಕೀಳಾಗಿ ಮಾತನಾಡುತ್ತಿರುವುದು ಅವರ ಕಾಂಗ್ರೆಸ್ ಸಂಸ್ಕೃತಿಯನ್ನು ಬಿಂಬಿಸುತ್ತದೆ ಆದರೆ ಭಾರತದ ಸಂಸ್ಕೃತಿ ಹಾಗೂ ದೇಶ ಅಭಿಮಾನ ಬೆಳೆಸಿಕೊಳ್ಳಲಿ ಎಂದು ಸಲಹೆ ನೀಡಿದರು. ತಾಲೂಕು ಅಧ್ಯಕ್ಷ ಕೊಡಗೀಹಳ್ಳಿ ದಿನೇಶ್ ಮಾತನಾಡಿ ನರೇಂದ್ರ ಮೋದಿ ನಮ್ಮ ನಾಯಕ ಎಂದು ಹೇಳಿಕೊಳ್ಳುವುದಕ್ಕೆ ಭಾರತ ಹೆಮ್ಮೆ ಪಡುತ್ತದೆ ಅಂತಹ ನಾಯಕರನ್ನು ಪಡೆದಿರುವ ಭಾರತೀಯರು ನಿಜವಾಗಲೂ ಪುಣ್ಯವಂತರು ಎಂದರು. ಈ ಸಂದರ್ಭದಲ್ಲಿ ಸಾರ್ವಜನಿಕವಾಗಿ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿತ್ತು ಹಲವಾರು ಬಿಜೆಪಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ರಕ್ತದಾನ ನಡೆಸಿದರು. ನಂತರ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು ಹಣ್ಣು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಬಿಜೆಪಿ ಘಟಕದ ಅಧ್ಯಕ್ಷ ಬಲರಾಮ್ , ಗಾಯಕ ಕನ್ನಡ ಕುಮಾರ್ , ಮುಖಂಡ ದಿಲೀಪ್ , ಸಂತೋಷ್ , ಶಿವರಾಮಣ್ಣ ಸೇರಿದಂತೆ ಇತರರು ಇದ್ದರು.