400 ಪಶು ವೈದ್ಯರ ನೇಮಕಕ್ಕೆ ಚಾಲನೆ

| Published : Sep 18 2025, 01:10 AM IST

ಸಾರಾಂಶ

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 400 ಪಶು ವೈದ್ಯರ ನೇಮಕಕ್ಕೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಹೇಳಿದರು.

ಕನ್ನಡ ಪ್ರಭ ವಾರ್ತೆ ಕುಣಿಗಲ್

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ 400 ಪಶು ವೈದ್ಯರ ನೇಮಕಕ್ಕೆ ಕೆಪಿಎಸ್ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನಾ ಸಚಿವ ಕೆ. ವೆಂಕಟೇಶ್‌ ಹೇಳಿದರು.

ಇಲ್ಲಿನ ಕುದುರೆ ಫಾರಂಗೆ ಭೇಟಿ ನೀಡಿದ ಅವರು, ಶಾಸಕ ರಂಗನಾಥ್‌ ಜೊತೆಗೆ ಚರ್ಚಿಸಿದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಶು ವೈದ್ಯರ ಕೊರತೆ ಸರಿಪಡಿಸುವ ನಿಟ್ಟಿನಲ್ಲಿ ಗುತ್ತಿಗೆ ಆಧಾರದಲ್ಲಿ 400 ಪಶು ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. 700 ಅಟೆಂಡರ್ ಹಾಗೂ 250 ಮಂದಿ ನಿರೀಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಉಳಿದಂತೆ ಹಂತ ಹಂತವಾಗಿ ಪಶುವೈದ್ಯರ ಸಮಸ್ಯೆ ಬಗೆಹರಿಸಲಾಗುವುದು. ದೇಶದಲ್ಲಿ ಪಶುಪಾಲನಾ ಇಲಾಖೆಗೆ ಸಮಸ್ಯೆಯಾಗದ ರೀತಿಯಲ್ಲಿ ಔಷಧಿ ಹಂಚಿಕೆ ಮಾಡುವ ಮೂಲಕ ಕರ್ನಾಟಕ ರಾಜ್ಯ ಮೊದಲನೇ ಸ್ಥಾನದಲ್ಲಿದೆ ಎಂದರು. ಪಶು ಆಸ್ಪತ್ರೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಶು ಸಖಿಯರನ್ನು ಕೇಂದ್ರ ಸರ್ಕಾರದ ಯೋಜನೆಯಡಿ ನೇಮಿಸಿಕೊಳ್ಳಲಾಗಿ. ದೆ ಈ ಹಿಂದೆ ಕೇಂದ್ರ ಸಚಿವ ಭುವನೇಶ್ವರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಶು ಸಖಿಯರ ವೇತನವನ್ನು ಕನಿಷ್ಠ ಏಳು ಸಾವಿರಕ್ಕೆ ಏರಿಸುವಂತೆ ಮನವಿ ಮಾಡಲಾಗಿದೆ. ರಾಜ್ಯ ಸರ್ಕಾರದಿಂದಲು ಅನುದಾನ ನೀಡುವ ಕುರಿತು ಮುಖ್ಯ ಮಂತ್ರಿಗಳ ಜೊತೆಗೆ ಚರ್ಚಿಸಲಾಗುವುದು ಎಂದರು ಶಾಸಕ ಡಾ.ರಂಗನಾಥ್ ಮಾತನಾಡಿ, ಬ್ರಿಟಿಷರ ಆಳ್ವಿಕೆಯ ಕಾಲದಿಂದ ಐತಿಹಾಸಿಕವಾಗಿ 421ಎಕರೆ ಪ್ರದೇಶದಲ್ಲಿ ಉಳಿದಿರುವ ಕುದುರೆ ಫಾರಂ ಅನ್ನು ಉಳಿಸಿಕೊಳ್ಳುವುದು ಪ್ರಥಮ ಆದ್ಯತೆಯಾಗಿದೆ ಐತಿಹಾಸಿಕವಾಗಿ ಹಿನ್ನೆಲೆ ಇರುವ ಇತಿಹಾಸ ಉಳಿಸುವ ನಿಟ್ಟಿನಲ್ಲಿ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಐತಿಹಾಸಿಕ ಸ್ಥಳವನ್ನು ಉಳಿಸಿಕೊಳ್ಳುವುದರ ಜೋತೆಗೆ ಅಭಿವೃದ್ದಿ ನಿಟ್ಟಿನಲ್ಲಿ ಆದಾಯ ಬರುವ ರೀತಿಯಲ್ಲಿ ಚಿಂತಿಸಲಾಗುತ್ತಿದೆ ಎಂದರು. ಈ ವೇಳೆ ಪಶುಸಂಗೊಪನ ಇಲಾಖೆಯ ಆಯುಕ್ತರು ಶ್ರೀ ರೂಪ, ನಿರ್ದೇಶಕ ಡಾ,ಪಿ ಶ್ರೀನಿವಾಸ್, ನಿರ್ದೇಶಕ ಡಾ,ಪ್ರಸಾದ್ ಮೂರ್ತಿ, ಜಂಟಿ ನಿರ್ದೇಶಕ ಡಾ. ಸಿದ್ದಗಂಗಯ್ಯ, ಪಶು ನಿರ್ದೇಶಕ ಡಾ,ಶಿವಪ್ರಸಾದ್‌ ಡಾ. ಉಮೇಶ್, ಡಾ.ನವಿನ್, ಪುರಸಭೆ ಸದಸ್ಯರು, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.