ಪುರಸಭೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಬಜೆಟ್ ಮಂಡನೆ

| Published : Feb 25 2025, 12:51 AM IST

ಪುರಸಭೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಬಜೆಟ್ ಮಂಡನೆ
Share this Article
  • FB
  • TW
  • Linkdin
  • Email

ಸಾರಾಂಶ

ಮಳವಳ್ಳಿ ಪಟ್ಟಣದ ಜನರಿಗೆ ಮೂಲ ಸೌಕರ್ಯಗಳ ಒದಗಿಸುವುದರ ಜೊತೆಗೆ ಪುರಸಭೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಈ ಬಾರಿ ಉತ್ತಮ ಬಜೆಟ್ ಮಂಡಿಸಲಾಗುವುದು. ಸಾರ್ವಜನಿಕರು ಸಲಹೆ ಸಹಕಾರವನ್ನು ನೀಡಬೇಕು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಪುರಸಭೆ ಸಭಾಂಗಣದಲ್ಲಿ 2025-26ನೇ ಸಾಲಿನ ಆಯವ್ಯಯ(ಬಜೆಟ್)ದ ಪೂರ್ವಭಾವಿ ಸಭೆ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಅಧ್ಯಕ್ಷ ಪುಟ್ಟಸ್ವಾಮಿ, ಪಟ್ಟಣದ ಜನರಿಗೆ ಮೂಲ ಸೌಕರ್ಯಗಳ ಒದಗಿಸುವುದರ ಜೊತೆಗೆ ಪುರಸಭೆಗೆ ಹೆಚ್ಚಿನ ಆದಾಯ ತರುವ ನಿಟ್ಟಿನಲ್ಲಿ ಈ ಬಾರಿ ಉತ್ತಮ ಬಜೆಟ್ ಮಂಡಿಸಲಾಗುವುದು. ಸಾರ್ವಜನಿಕರು ಸಲಹೆ ಸಹಕಾರವನ್ನು ನೀಡಬೇಕೆಂದು ಕೋರಿದರು.

ಮಾಜಿ ಅಧ್ಯಕ್ಷ ಎಂ.ಎನ್.ಚಿಕ್ಕರಾಜು ಮಾತನಾಡಿ, ಎನ್‌ಇಎಸ್ ಬಡಾವಣೆ ರಸ್ತೆಗಳಿಗೆ ಸೂಕ್ತ ನಾಮಫಲಕಗಳನ್ನು ಅಳವಡಿಸಬೇಕು. ಸಾರ್ವಜನಿಕ ರುದ್ರಭೂಮಿಯಲ್ಲಿ ಅಭಿವೃದ್ಧಿಗೊಳಿಸಬೇಕೆಂದು ಹೇಳಿದರು.

ಮಾಜಿ ಅಧ್ಯಕ್ಷ ದೊಡ್ಡಯ್ಯ ಮಾತನಾಡಿ, ಪಟ್ಟಣದಲ್ಲಿ ಪ್ರತಿ ಶುಕ್ರವಾರ ನಡೆಯಲಿರುವ ಸಂತೆಗೆ ಮೂಲ ಸೌಕರ್ಯದ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಜನಪರ ಬಜೆಟ್‌ಗೆ ಹೆಚ್ಚು ಒತ್ತು ನೀಡಬೇಕೆಂದು ಸಲಹೆ ನೀಡಿದರು.

ಸಾವಯವ ಕೃಷಿಕರ ಸಂಘದ ತಾಲೂಕು ಅಧ್ಯಕ್ಷ ಎಂ.ಎನ್.ಮಹೇಶ್ ಕುಮಾರ್ ಮಾತನಾಡಿ, ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ರಕ್ಷಣೆಗೆ ಮುಂದಾಗಬೇಕು. ಈ ಬಗ್ಗೆ ಜಾಗೃತಿ ಮೂಡಿಸಲು ನಮ್ಮೊಂದಿಗೆ ಕೈಜೋಡಿಸಬೇಕು ಎಂದರು.

ಮುಖಂಡ ನಂಜುಂಡಸ್ವಾಮಿ ಮಾತನಾಡಿ, ಪ್ರವಾಸಿ ಮಂದಿರ ಮುಂಭಾಗದ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಸುತ್ತಮುತ್ತಲಿನ ಪ್ರದೇಶ ಅಭಿವೃದ್ಧಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ರುದ್ರಭೂಮಿಗಳಿಗೆ ಮೂಲ ಸೌಕರ್ಯ ಕಲ್ಪಿಸಿ ಎಂದು ಮನವಿ ಮಾಡಿದರು.

ಸಭೆಯಲ್ಲಿ ಉಪಾಧ್ಯಕ್ಷ ಎನ್.ಬಸವರಾಜು, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ ಸೇರಿದಂತೆ ಸದಸ್ಯರು ಹಾಗೂ ಮುಖಂಡರು ಇದ್ದರು.

ವಿವಿಧ ಗ್ರಾಪಂಗಳಲ್ಲಿ ಕ್ಷಯ ಮುಕ್ತ ಮಾನದಂಡದ ಬಗ್ಗೆ ಪರಿಶೀಲನೆ

ಮದ್ದೂರು: ತಾಲೂಕಿನ ವಿವಿಧ ಗ್ರಾಮ ಪಂಚಾಯ್ತಿಗಳಿಗೆ ಪರಿಶೀಲನಾ ತಂಡ ಭೇಟಿ ನೀಡಿ ಕ್ಷಯ ಮುಕ್ತ ಗ್ರಾಪಂ ಮಾನ ದಂಡಗಳ ವರದಿ ಪರಿಶೀಲಿಸಿತು.

ಡಾ.ರಂಜಿತ್ ಕುಮಾರ್ ಮತ್ತು ತಂಡ ತಾಲೂಕಿನ ತಗ್ಗಹಳ್ಳಿ, ಬೆಕ್ಕಳಲೆ, ದೊಡ್ಡಹೊಸಗವಿ ಹಾಗೂ ಬಿದರಕೋಟೆ ಪಂಚಾಯ್ತಿ ಗಳಲ್ಲಿ ಪರಿಶೀಲಿಸಿ ಕ್ಷಯ ಮುಕ್ತ ಗ್ರಾಪಂ ಮಾಡಲು ಬೇಕಾದ 6 ಮಾನ ದಂಡಗಳ ಬಗ್ಗೆ ಚರ್ಚಿಸಿ ವರದಿ ಸರಿಯಾಗಿರುವ ಬಗ್ಗೆ ಖಚಿತ ಪಡಿಸಿಕೊಂಡಿತು.

ಕ್ಷಯ ರೋಗ ನಿರ್ವಹಣೆ ಮತ್ತು ಮುಕ್ತ ಗ್ರಾಪಂ ಪಾತ್ರ ಗಳ ಬಗ್ಗೆ ತಿಳಿಸಿ ಪ್ರತಿ ಸಭೆಗಳಲ್ಲಿ ಕ್ಷಯ ರೋಗದ ಬಗ್ಗೆ ಸದಸ್ಯರು ಚರ್ಚಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಸಭೆಯಲ್ಲಿ ಡಾ.ಸತೀಶ್, ಡಾ.ಸಂಧ್ಯಾ, ಗ್ರಾಪಂ ಸದಸ್ಯರು, ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು, ಸಿಬ್ಬಂದಿ ಹಾಗೂ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಸೀನಯ್ಯ, ಎಸ್‌ಟಿಎಸ್ ಕೆಂಪೇಗೌಡ, ಎಸ್‌ಟಿಎಲ್‌ಎಸ್ ಅರುಣ್ ಕುಮಾರ್ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಹಾಜರಿದ್ದರು.