ಸಿಎಂಗೆ ಟೀಕಿಸುವ ನೈತಿಕತೆ ಬಿವೈವಿಗಿಲ್ಲ : ಭಂಡಾರಿ ಮಾಲತೇಶ್‌

| Published : Sep 26 2025, 01:00 AM IST

ಸಿಎಂಗೆ ಟೀಕಿಸುವ ನೈತಿಕತೆ ಬಿವೈವಿಗಿಲ್ಲ : ಭಂಡಾರಿ ಮಾಲತೇಶ್‌
Share this Article
  • FB
  • TW
  • Linkdin
  • Email

ಸಾರಾಂಶ

ವಾಮ ಮಾರ್ಗದ ಮೂಲಕ ಶಾಸಕರಾಗಿ ಬಿಜೆಪಿ ರಾಜ್ಯಾದ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುವ ನೈತಿಕತೆಯನ್ನು ಹೊಂದಿಲ್ಲ, ಕೇವಲ ಹೈಕಮಾಂಡ್ ಮೆಚ್ಚಿಸುವ ಆತುರದಲ್ಲಿ ಮುಖ್ಯಮಂತ್ರಿಗಳ ವಿರುದ್ಧದ ವೈಯುಕ್ತಿಕ ಟೀಕೆಯನ್ನು ಸಹಿಸಲಾಗದು. ಇಂತಹ ಹೇಳಿಕೆ ಬಗ್ಗೆ ಉಗ್ರ ಪ್ರತಿಭಟನೆಯನ್ನು ಎದುರಿಸಬೇಕಾದೀತು ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಭಂಡಾರಿ ಮಾಲತೇಶ್ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಗುರುವಾರ ಪಟ್ಟಣದ ಸುದ್ದಿಮನೆಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಾಮಮಾರ್ಗದ ಮೂಲಕ ಶಾಸಕರಾಗಿ ಕೇವಲ 2 ವರ್ಷ ಪೂರ್ಣಗೊಂಡಿಲ್ಲ ಅಧಿವೇಶನವನ್ನು ಸಮರ್ಪಕವಾಗಿ ಎದುರಿಸದೆ ಶಾಸಕ ವಿಜಯೇಂದ್ರ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಯೋಗ್ಯ ಎಂದು ಏಕವಚನದಲ್ಲಿ ನಿಂದಿಸುವ ಮೂಲಕ ರಾಜ್ಯದ ಜನತೆಯ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಜನಪರ ಹೋರಾಟ ಕಾಳಜಿ ಮೂಲಕ ಸತತ 2 ಬಾರಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ವಿರುದ್ಧ ಮಾತನಾಡುವ ಅರ್ಹತೆ ಯಾರಿಗೂ ಇಲ್ಲ ಎಂದರು.

ಸಿದ್ದರಾಮಯ್ಯ ಅವರನ್ನು ಅಯೋಗ್ಯ ಎಂದು ನಿಂದಿಸಲು ಅವರು ಎಂದಿಗೂ ನಕಲಿ ಸಹಿ ಮೂಲಕ ಅಧಿಕಾರ ದುರುಪಯೋಗಪಡಿಸಿಕೊಂಡಿಲ್ಲ, ಗೊಬ್ಬರಕ್ಕಾಗಿ ಕಾದು ನಿಂತ ರೈತರ ವಿರುದ್ಧ ಗೋಲಿಬಾರ್ ಮಾಡಲಿಲ್ಲ, ಚೆಕ್ ಮೂಲಕ ಲಂಚ ಪಡೆದಿಲ್ಲ, ಭ್ರಷ್ಟಾಚಾರದ ಆರೋಪದಲ್ಲಿ ಜೈಲು ದರ್ಶನ ಪಡೆದಿಲ್ಲ, ಪೋಕ್ಸೋ ಪ್ರಕರಣದ ಅಪರಾಧಿಯಲ್ಲ, ಸಾಗುವಳಿದಾರರಿಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸುವ ಕಾನೂನು ಜಾರಿಗೊಳಿಸಿಲ್ಲ, ತಾಲೂಕಿನ ಸಾಗುವಳಿದಾರರಿಗೆ ಸತತ 4 ದಶಕದಿಂದ ಹಕ್ಕು ಪತ್ರ ನೀಡುವ ವಾಗ್ದಾನ ಮರೆತು ದ್ರೋಹ ಬಗೆದಿಲ್ಲ, ಸಾಗುವಳಿದಾರರನ್ನು ಚುನಾವಣೆ ಸಂದರ್ಭದಲ್ಲಿ ಮಾತ್ರ ನೆನಪಿಸಿಕೊಳ್ಳುವ ಜಾಯಮಾನದವರಲ್ಲ ಎಂದು ಅವರು ವ್ಯಂಗ್ಯವಾಡಿದರು.

ಜಾತಿಗಣತಿ ಮೂಲಕ ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸುತ್ತಿರುವ ಸಿದ್ದರಾಮಯ್ಯನವರಿಗೆ ಬಿಜೆಪಿ ಮುಖಂಡರ ಸರ್ಟಿಫಿಕೇಟ್ ಅಗತ್ಯವಿಲ್ಲ. ಪಂಚ ಗ್ಯಾರಂಟಿ ಘೋಷಿಸಿ ಜನತೆಗೆ ನೀಡುತ್ತಿರುವ ಮುಖ್ಯಮಂತ್ರಿ ಬಗ್ಗೆ ಅಸೂಯೆ ಜತೆಗೆ ಹೈಕಮಾಂಡ್ ಮೆಚ್ಚಿಸಲು ಯೋಗ್ಯತೆ ಮೀರಿ ಮಾತನಾಡುವ ಚಾಳಿ ಬೆಳೆಸಿಕೊಳ್ಳದಂತೆ ಅವರು ಸಲಹೆ ನೀಡಿದರು.

ಕೆ.ಪಿ.ಸಿ.ಸಿ ಸದಸ್ಯ ಗೋಣಿ ಮಾಲತೇಶ್, ಪುರಸಭಾ ಸದಸ್ಯ, ಜಿಲ್ಲಾ ಕಾಂಗ್ರೆಸ್ ಪ್ರ.ಕಾ ಮಯೂರ್ ದರ್ಶನ್ ಉಳ್ಳಿ, ಡಿಕೆ ಶಿವಕುಮಾರ್ ಅಭಿಮಾನಿ, ಬಳಗದ ಅಧ್ಯಕ್ಷ ಸುರೇಶ್ ಕಲ್ಮನೆ, ಕಸಬಾ ಬ್ಯಾಂಕ ನಿರ್ದೇಶಕ ಬಡಗಿ ಪಾಲಾಕ್ಷಪ್ಪ, ನಿಂಗಪ್ಪ, ಬುಡೇನ್ ಖಾನ್, ರವಿ ಬಗನಕಟ್ಟೆ, ಅಬುಸಾಲಿ ಇತರರಿದ್ದರು.